ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತದಲ್ಲೇ ಕೋಟಿ ಡೀಲ್, ವರದಿ ಕೇಳಿದ ಸುಭಾಷ್ ಬಿ.ಆಡಿ

|
Google Oneindia Kannada News

ಬೆಂಗಳೂರು, ಜೂ.24 : ಲೋಕಾಯುಕ್ತದಲ್ಲಿ ನಡೆದಿದೆ ಎನ್ನಲಾದ ಹಣದ ಬೇಡಿಕೆ ಪ್ರಕರಣದ ಕುರಿತು ವರದಿ ನೀಡುವಂತೆ ಉಪ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ. ಲೋಕಾಯುಕ್ತ ಕಚೇರಿಯಲ್ಲಿಯೇ ಸರ್ಕಾರಿ ಅಧಿಕಾರಿಯೊಬ್ಬರ ಬಳಿ 1 ಕೋಟಿ ರೂ.ಗೆ ಬೇಡಿಕೆಯಿಟ್ಟ ಪ್ರಕರಣ ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು.

ಉಪ ಲೋಕಾಯುಕ್ತ ಸುಭಾಷ್‌ ಬಿ.ಅಡಿ ಅವರು ಹಣದ ಬೇಡಿಕೆ ಪ್ರಕರಣದ ಬಗ್ಗೆ 15 ದಿನಗಳಲ್ಲಿ ವರದಿ ನೀಡುವಂತೆ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್‌ ಅವರಿಗೆ ನಿರ್ದೇಶನ ನೀಡಿದ್ದಾರೆ. ಘಟನೆ ಬೆಳಕಿಗೆ ಬಂದ ಸುಮಾರು ಒಂದೂವರೆ ತಿಂಗಳ ನಂತರ ಉಪ ಲೋಕಾಯುಕ್ತರು ಈ ಬಗ್ಗೆ ವರದಿ ಕೇಳಿದ್ದಾರೆ. [ಕರ್ನಾಟಕದಿಂದ ವರ್ಗಾವಣೆ ಬಯಸಿಲ್ಲ : ಸೋನಿಯಾ ನಾರಂಗ್]

lokayukta

ಲೋಕಾಯುಕ್ತ ಕಚೇರಿಯಲ್ಲಿ ನಡೆದ ಹಣದ ಬೇಡಿಕೆ ಪ್ರಕರಣದ ಕುರಿತು ಜನಾಧಿಕಾರ ಸಂಘರ್ಷ ಪರಿಷತ್‌ ನೀಡಿರುವ ದೂರಿನ ಅನ್ವಯ ಉಪ ಲೋಕಾಯುಕ್ತರು ವರದಿ ಕೇಳಿದ್ದಾರೆ. ಲೋಕಾಯುಕ್ತದಲ್ಲಿ ನಡೆದ ಈ ಪ್ರಕರಣದ ಬಗ್ಗೆ ಮೇ 11ರಂದು ಸೋನಿಯಾ ನಾರಂಗ್ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಲೋಕಾಯುಕ್ತ ಕಚೇರಿಯಲ್ಲಿ ಏನಾಗಿತ್ತು? : 'ನಿಮ್ಮ ಮೇಲೆ ದಾಳಿ ನಡೆಯಲಿದೆ, ನಿಮ್ಮ ವಿರುದ್ಧ ದಾಖಲೆಗಳನ್ನು ಸಂಗ್ರಹಣೆ ಮಾಡಲಾಗಿದೆ. ದಾಳಿ ತಪ್ಪಿಸಬೇಕಾದರೆ 1 ಕೋಟಿ ಕೊಡಿ' ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಮೂರ್ತಿ ಎಂಬುವವರಿಂದ ಕೃಷ್ಣರಾವ್‌ ಎಂಬುವವರು ಹಣ ಕೇಳಿದ್ದರು. ಕೃಷ್ಣರಾವ್ ಹಣ ಕೇಳಿದ್ದಾರೆ ಎಂದು ಕೃಷ್ಣಮೂರ್ತಿ ಅವರು ಸೋನಿಯಾ ನಾರಂಗ್‌ ಅವರ ಬಳಿ ಮೌಖಿಕವಾಗಿ ಹೇಳಿಕೊಂಡಿದ್ದರು.

ಲೋಕಾಯುಕ್ತರು ಪ್ರತಿಕ್ರಿಯೆ ನೀಡಿಲ್ಲ : ತಮ್ಮ ಸಂಸ್ಥೆಯಲ್ಲಿ ನಡೆದ ಈ ಪ್ರಕರಣದ ಬಗ್ಗೆ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ವಿವಿಧ ಸಂಘಟನೆಗಳು ಜೂ.24ರ ಬುಧವಾರ ಲೋಕಾಯುಕ್ತ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

English summary
Karnataka Upa Lokayukta Subhash.B.Adi has directed lokayukta SP Sonia Narang to submit report on allegations of corruption within the anti-corruption body. A man claiming to be Krishna Rao reportedly called up PWD engineer Krishnamurthy and demanded for bribe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X