ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಾಂತ್ಯದ ಚಿಂತೆ: 3 ತಿಂಗಳ ನಂತರ ಕರ್ನಾಟಕದ ಜನತೆ ನಿರಾಳ

|
Google Oneindia Kannada News

ಬೆಂಗಳೂರು, ಜುಲೈ 04: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮತ್ತು ಸೋಂಕಿತ ಪ್ರಕರಣಗಳ ಸಂಖ್ಯೆ ಕೊಂಚ ನಿಯಂತ್ರಣಕ್ಕೆ ಬಂದಿದೆ. ಮೂರು ತಿಂಗಳ ನಂತರದಲ್ಲಿ ಮೊದಲ ಬಾರಿಗೆ ರಾಜ್ಯಾದ್ಯಂತ ವಾರಾಂತ್ಯದ ನಿಷೇಧಾಜ್ಞೆ ತೆರವುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ರಾಜ್ಯದಲ್ಲಿ ಜುಲೈ 5ರಿಂದ ವಾರಾಂತ್ಯದಲ್ಲೂ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಅಂಗಡಿ ಮುಂಗಟ್ಟುಗಳು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೂ ತೆರೆಯಲು ಅನುಮತಿ ನೀಡಲಾಗಿದೆ.

ಕರ್ನಾಟಕ ಲಾಕ್‌ಡೌನ್ ಸಡಿಲಿಕೆ 3.0: ಏನಿರುತ್ತೆ, ಏನಿರಲ್ಲ? ಕರ್ನಾಟಕ ಲಾಕ್‌ಡೌನ್ ಸಡಿಲಿಕೆ 3.0: ಏನಿರುತ್ತೆ, ಏನಿರಲ್ಲ?

"ರಾಜ್ಯದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆವರೆಗೂ ರಾತ್ರಿ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ. ಶೇ.5ಕ್ಕಿಂತ ಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ಹೊಂದಿರುವ ಕೊಡಗು ಜಿಲ್ಲೆಗೆ ಈ ನಿಯಮ ಅನ್ವಯವಾಗುವುದಿಲ್ಲ," ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

Unlock 3.0: Karnataka Govt Is Taken Back Weekend Curfew After 3 Months

ಜುಲೈ 19ರ ನಂತರ ಮತ್ತಷ್ಟು ಸಡಲಿಕೆ:

"ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ ಸಂಖ್ಯೆ 3,000ಕ್ಕಿಂತ ಕಡಿಮೆಯಾದ ಹಿನ್ನೆಲೆ ಅನ್ ಲಾಕ್ 3.0 ಅನ್ನು ಜಾರಿಗೊಳಿಸಲಾಗಿದೆ. ನಾವು ಮುಂದಿನ ದಿನಗಳಲ್ಲಿ ಕೊವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಿ ಜುಲೈ 19ರ ನಂತರ ಮತ್ತಷ್ಟು ಸಡಿಲಿಕೆಗಳನ್ನು ಜಾರಿಗೊಳಸಲಾಗುವುದು," ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯದಲ್ಲಿ ಅನ್ ಲಾಕ್ 3.0 ಮಾರ್ಗಸೂಚಿ:

* ವಾಣಿಜ್ಯ ಮಳಿಗೆ, ಮಾಲ್ ಶೇ.100ರಷ್ಟು ಸಿಬ್ಬಂದಿಯೊಂದಿಗೆ ತೆರಯಲು ಅನುಮತಿ

* ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 9 ರಿಂದ ಸಂಜೆ 5ರವರೆಗೂ ತೆರಯಲು ಅವಕಾಶ

* ಶೇ.100ರಷ್ಟು ಸಿಬ್ಬಂದಿಯನ್ನು ಒಳಗೊಂಡಂತೆ ಸರ್ಕಾರಿ ಕಚೇರಿಗಳು ಪುನಾರಂಭ

* ಸಾರ್ವಜನಿಕ ಸಾರಿಗೆ, ನಮ್ಮ ಮೆಟ್ರೋದಲ್ಲಿ ಶೇ.100ರಷ್ಟು ಪ್ರಮಾಣಕ್ಕೆ ಅನುಮತಿ

* ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತಾಧಿಗಳಿಗೆ ದರ್ಶನಕ್ಕೆ ಅನುಮತಿ

* ಮದುವೆ ಕಾರ್ಯಕ್ರಮದಲ್ಲಿ 100 ಮಂದಿ ಭಾಗವಹಿಸುವುದಕ್ಕೆ ಅವಕಾಶ

Recommended Video

ವೈರಲ್ ಆಯ್ತು ದ್ರಾವಿಡ್ ಕೊಡುತ್ತಿರುವ ಕೋಚಿಂಗ್ ಕ್ಲಾಸ್ | Oneindia Kannada

* ಅಂತ್ಯಸಂಸ್ಕಾರದಲ್ಲಿ 5 ರಿಂದ 20 ಮಂದಿ ಭಾಗವಹಿಸಲು ಅನುಮತಿ

English summary
Unlock 3.0: Karnataka Govt Is Taken Back Weekend Curfew After 3 Months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X