ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾತ್ರಿ ವೇಳೆ ಶ್ರೀರಾಮದೇವ ಭಾನ್ಕುಳಿ ಮಠದ ಸುತ್ತ ಅಪರಿಚಿತ ವ್ಯಕ್ತಿಗಳ ಸಂಶಯಾಸ್ಪದ ಓಡಾಟ

|
Google Oneindia Kannada News

"ಗೋಸ್ವರ್ಗ" ಹಾಗೂ ಶ್ರೀರಾಮದೇವ ಭಾನ್ಕುಳಿ ಮಠಕ್ಕೆ ಸೇರಿದ ಜಾಗದಲ್ಲಿ ರಾತ್ರಿ ವೇಳೆ ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿದ್ದು, ಮಠದ ಸುತ್ತ ಮುತ್ತ ಆತಂಕದ ವಾತಾರವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ರಾಮಚಂದ್ರಾಪುರ ಮಠ ತನ್ನ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.

ದಿನಾಂಕ ಆಗಸ್ಟ್ 28ರ ಮಧ್ಯರಾತ್ರಿ 12.30ರ ಸಮಯದಲ್ಲಿ ಶ್ರೀರಾಮದೇವ ಭಾನ್ಕುಳಿ ಮಠದ ಎದುರು ಇರುವ ಅಮ್ರತಧಾರಾ ಗೋಶಾಲೆಯ ಸುತ್ತ ಮುತ್ತ ಅರಿಚಿತ ವ್ಯಕ್ತಿಗಳು ತಿರುಗಾಡುತ್ತಿದ್ದರು, ಗೋಸ್ವರ್ಗದ ಕೆಲಸಗಾರರಾದ ರಾಘವೇಂದ್ರರವರು ಅಪರಿಚಿತ ವ್ಯಕ್ತಿಗಳು ತಿರುಗಾಡುತ್ತಿರುವುದನ್ನು ದೂರದಿಂದ ನೋಡಿ ವಿಚಾರಿಸಲು ಹೋದಾಗ ರಾಮದೇವ ಭಾನ್ಕುಳಿ ಮಠದ (ಶ್ರೀಮಠದ ಶಾಖಾಮಠ) ಪಕ್ಕದಲ್ಲಿ ಹೊಸದಾಗಿ ನಿರ್ಮಿಸಿದ ಅಡುಗೆ ಮನೆಯ ಪಕ್ಕದಿಂದ ತೋಟದೊಳಗೆ ಓಡಿಹೋಗಿ ತಪ್ಪಿಸಿಕೊಂಡಿರುತ್ತಾರೆ.

ಪುನರ್ವಸು ಕಟ್ಟಡಕ್ಕೂ ನಮಗೂ ಆತ್ಮಬಂಧವಿದೆ, ರಾಘವೇಶ್ವರ ಶ್ರೀ ಪುನರ್ವಸು ಕಟ್ಟಡಕ್ಕೂ ನಮಗೂ ಆತ್ಮಬಂಧವಿದೆ, ರಾಘವೇಶ್ವರ ಶ್ರೀ

ಆಗಸ್ಟ್ 29ರಂದು ರಾತ್ರಿ 10.30-12.30ರ ಸಮಯದಲ್ಲಿ ಮಠದ ಜನಸಂತೋಷ ವಿಭಾಗದ ನಿಯಾಮಕರಾದ ಆದರ್ಶ ಭಟ್ ಕೆಲಸವನ್ನು ಮುಗಿಸಿ ಮನೆಗೆ ಹೋಗುವಾಗ ಶಂಕರಗಿರಿಯಲ್ಲಿ ಮತ್ತೆ ಅಪರಿಚಿತ ವ್ಯಕ್ತಿಗಳು ತಿರುಗಾಡುತ್ತಿರುವುದನ್ನು ಕಂಡು ಗೋಸ್ವರ್ಗದ ಆಫೀಸಿಗೆ ಫೋನಿನ ಮೂಲಕ ಮಾಹಿತಿ ನೀಡಿರುತ್ತಾರೆ.

ಗೋಶಾಲೆಯ ಕೆಲಸಗಾರರು ಮತ್ತು ಬೇರೆ ವಿಭಾಗದ ಕೆಲಸಗಾರರು ಎಂಟು ಜನರ ತಂಡದೊಂದಿಗೆ ಶಂಕರಗಿರಿಗೆ ಹೋಗಿ ನೋಡಿದಾಗ ಶಂಕರಗಿರಿಯಲ್ಲಿ ನಿರ್ಮಿಸಿರುವ ಬಾತ್ ರೂಂ ಹತ್ತಿರ ಟಾರ್ಚ ಹಿಡಿದು ಸಂಶಯಾಸ್ಪದವಾಗಿ ಓಡಾಡುತ್ತಿದ್ದರು, ಮಠದ ಕೆಲಸಗಾರರು ಅವರನ್ನು ಸುತ್ತುವರಿದು ಹಿಡಿಯಲು ಪ್ರಯತ್ನಿಸಿದರು.

ಗೋಸಂರಕ್ಷಣೆಗೆ ಸ್ಫೂರ್ತಿ ಸಿಕ್ಕಿದರೆ ಗೋಸ್ವರ್ಗ ಸಾರ್ಥಕ, ರಾಘವೇಶ್ವರಶ್ರೀಗೋಸಂರಕ್ಷಣೆಗೆ ಸ್ಫೂರ್ತಿ ಸಿಕ್ಕಿದರೆ ಗೋಸ್ವರ್ಗ ಸಾರ್ಥಕ, ರಾಘವೇಶ್ವರಶ್ರೀ

ಅವರಿಂದ ತಪ್ಪಿಸಿಕೊಂಡು ಈಗ ಹೊಸದಾಗಿ ನಿರ್ಮಾಣವಾಗಿರುವ(ಗೋಶಾಲೆ) ಗೋಸ್ವರ್ಗದ ದಕ್ಷಿಣ ದಿಕ್ಕಿನಿಂದ ಗೋಶಾಲೆಯ ಒಳಭಾಗದಿಂದ ಪ್ರವೇಶಿಸಿ ಒಂದು ಬದಿಯಲ್ಲಿ ನಿಂತಿರುತ್ತಾರೆ. ಅವರನ್ನು ಗೋಶಾಲೆಯ ಕೆಲಸಗಾರರು ನೋಡಿ ವಿಚಾರಿಸಲು ಹೋದಾಗ ಅಲ್ಲಿಂದ ಅಪರಿಚಿತ ವ್ಯಕ್ತಿ ಪಶ್ಚಿಮದಿಕ್ಕಿನತ್ತ ಓಡಿ ಹೋಗಿ ಹಿಂಬದಿಯ ಕಾಡಿನಲ್ಲಿ ತಪ್ಪಿಸಿಕೊಂಡಿದ್ದರೆ. ಮುಂದೆ ಓದಿ

ಆಗಸ್ಟ್ 30ರಂದು ತಡರಾತ್ರಿ 1-1.15ರ ಸಮಯದಲ್ಲಿ

ಆಗಸ್ಟ್ 30ರಂದು ತಡರಾತ್ರಿ 1-1.15ರ ಸಮಯದಲ್ಲಿ

ಗೋಸ್ವರ್ಗ ನಿರ್ಮಾಣದ ಇಂಜಿನಿಯರ್ ಆದ ಗಿರೀಶ್ ಎಮ್ ಎನ್ ಅವರು ಫೋನಿನಲ್ಲಿ ಮಾತನಾಡಲು ಹೊರಗಡೆ ಬಂದಾಗ ಟಾರ್ಚ ಹಿಡಿದು ಮಠದ ಎದುರಿನಿಂದ ಆಗ್ನೇಯ ದಿಕ್ಕಿನತ್ತ ಟಾರ್ಚ ಬೆಳಕನ್ನು ಹಾಯಿಸುತ್ತಿದ್ದರು. ಗಿರೀಶ್ ಅವರು ತಮ್ಮೊಂದಿಗೆ ಕೆಲಸ ಮಾಡುವ ನವೀನ್ ಅವರನ್ನು ಎಬ್ಬಿಸಿ, ಅವರೊಂದಿಗೆ ಗೋಶಾಲೆಯತ್ತ ಹೋಗಿ ಅಲ್ಲಿಯ ಕೆಲಸಗಾರರನ್ನು ಮಠದ ಹತ್ತಿರ ಯಾರಾದರೂ ಬಂದಿದ್ದಾರಾ ಎಂದು ವಿಚಾರಿಸುತ್ತಾರೆ.

ಶಂಕರಗಿರಿ ಮತ್ತು ಗೋಶಾಲೆಯ ಸುತ್ತಮುತ್ತ ಹುಡುಕಾಟ

ಶಂಕರಗಿರಿ ಮತ್ತು ಗೋಶಾಲೆಯ ಸುತ್ತಮುತ್ತ ಹುಡುಕಾಟ

ಕೆಲಸಗಾರರು ಯಾರು ಬಂದಿಲ್ಲವೆಂದು ತಿಳಿದ ನಂತರ ಅಲ್ಲಿಯ ಕೆಲಸಗರನಾದ ಸುರೇಶ್ ಅವರನ್ನು ಕರೆದುಕೊಂಡು ಅಪರಿಚಿತ ವ್ಯಕ್ತಿಯ ಹುಡುಕಾಟಕ್ಕೆ ಹೋದಾಗ ಮಠದ ಹಿಂಬದಿಯಲ್ಲಿ ನಾಯಿ ಬೊಗಳುವುದನ್ನು, ಕೇಳಿಸಿ ಅತ್ತ ಹೋಗಿ ನೋಡಿದಾಗ ಅಲ್ಲಿ ಯಾರೋ ಆಗತಾನೆ ನಡೆದು ಹೋಗಿರುವ ಹೆಜ್ಜೆ ಗುರುತನ್ನು ನೋಡಿರುತ್ತಾರೆ. ಅಲ್ಲಿಯೇ ತೋಟದ ಸುತ್ತ ಮುತ್ತ, ಶಂಕರಗಿರಿ ಮತ್ತು ಗೋಶಾಲೆಯ ಸುತ್ತಮುತ್ತ ಹುಡುಕಾಟ ನಡೆಸಿದರು ಅಂದೂ ಕೂಡ ತಪ್ಪಿಸಿಕೊಂಡಿರುತ್ತಾರೆ.

ಗೋಸ್ವರ್ಗದ ಆಫೀಸಿಗೆ ಫೋನಿನ ಮೂಲಕ ಮಾಹಿತಿ

ಗೋಸ್ವರ್ಗದ ಆಫೀಸಿಗೆ ಫೋನಿನ ಮೂಲಕ ಮಾಹಿತಿ

ಆಗಸ್ಟ್ 31ರಂದು ರಾತ್ರಿ 7.30ರ ಸುಮಾರಿಗೆ ಗೋಸ್ವರ್ಗದ ಗಿರೀಶ್, ಜನಸಂತೋಷ ವಿಭಾಗದ ನಿಯಾಮಕರಾದ ಆದರ್ಶ ಭಟ್ ಮತ್ತು ಗೋ ಸಂತೋಷ ವಿಬಾಗದ ನಿಯಾಮಕ ವಿಕ್ರಮ್ ಭಟ್ ಈ ಮೂರು ಜನರು ಮತ್ತೆ ಅಪರಿಚಿತ ವ್ಯಕ್ತಿಗಳು ಬಂದಿದ್ದಾರೆಯೇ ಎಂದು ನೋಡಲು ಹೋದಾಗ ಶಂಕರಗಿರಿಯಲ್ಲಿ ಮತ್ತೆ ಅಪರಿಚಿತ ವ್ಯಕ್ತಿಗಳು ಟಾರ್ಚ ಹಿಡಿದು ಸಂಶಯಾಸ್ಪದವಾಗಿ ಓಡಡುತ್ತಿರುವುದನ್ನು ಕಂಡು ಗೋಸ್ವರ್ಗದ ಆಫೀಸಿಗೆ ಫೋನಿನ ಮೂಲಕ ಮಾಹಿತಿ ನೀಡಿರುತ್ತಾರೆ.

ಲಿಖಿತರೂಪದಲ್ಲಿ ದೂರು ದಾಖಲು

ಲಿಖಿತರೂಪದಲ್ಲಿ ದೂರು ದಾಖಲು

ಗೋಶಾಲೆಯ ಕೆಲಸಗಾರರು ಇತರೆ ವಿಭಾಗದ ಸಿಬ್ಭಂದಿಗಳು ಒಟ್ಟು 20 ಜನರ ತಂಡದೊಂದಿಗೆ ರಾತ್ರಿ 7.30 ರಿಂದ 9.30ರ ವರೆಗೆ ಸತತವಾಗಿ 2ಗಂಟೆಗಳ ಕಾಲ ಹುಡುಕಾಟ ನಡೆಸಿದರು ಅಪರಿಚಿತ ವ್ಯಕ್ತಿಗಳು ಅತ್ಯಂತ ಸಮೀಪದಿಂದ ತಪ್ಪಿಸಿಕೊಂಡಿರುತ್ತಾರೆ, ಈ ವಿಷಯವನ್ನು ಈ ಮೊದಲೇ ಸಿದ್ದಾಪುರ ಆರಕ್ಷಕ ಠಾಣೆಗೆ ಲಿಖಿತ ರೂಪದಲ್ಲಿ ದೂರನ್ನು ದಾಖಲಿಸಲಾಗಿದೆ. ಆರಕ್ಷಕರು ಕೂಡ ರಾತ್ರಿ ಸಮಯದಲ್ಲಿ ಭೇಟಿ ನೀಡಿ ಪರಿಶೀಲಿಸಿ ಹೋಗಿರುತ್ತಾರೆ.

ಬೆಂಕಿ ಇತ್ಯಾದಿ ಅನಾಹುತ ಸೃಷ್ಟಿಸಬಹುದು

ಬೆಂಕಿ ಇತ್ಯಾದಿ ಅನಾಹುತ ಸೃಷ್ಟಿಸಬಹುದು

ರಾಮಚಂದ್ರಾಪುರ ಮಠದ ಸುತ್ತ ಅಪರಿಚಿತ ವ್ಯಕ್ತಿಗಳ ಸಂಶಯಾಸ್ಪದ ಓಡಾಟದ ಸಾಧ್ಯತೆಗಳು ಗೋಸ್ವರ್ಗದಲ್ಲಿ ನೀರು, ಆಹಾರ ಇತ್ಯಾದಿಗಳಿಗೆ ವಿಷ ಬೆರೆಸಿ, ಗೋವುಗಳ ಜೀವಹಾನಿಗೆ ಯತ್ನಿಸಬಹುದು. ಬೆಂಕಿ ಇತ್ಯಾದಿ ಅನಾಹುತ ಸೃಷ್ಟಿಸಬಹುದು, ನಕ್ಸಲ್ ಚಟುವಟಿಕೆ ಇರಬಹುದು. ವಿಶಾಲವಾದ ಅರಣ್ಯ ಪ್ರದೇಶ ಅಥವಾ ಗೋಸ್ವರ್ಗದ ವಿಶಾಲವಾದ ಪ್ರದೇಶದಲ್ಲಿ ಮಾದಕ ದ್ರವ್ಯ ಇತ್ಯಾದಿ ಬೆಳೆ ಹಾಕಬಹುದು. ಈ ಮೇಲಿನ ಯಾವುದೇ ಅಹಿತಕರ ಹಾಗೂ ಸಮಾಜಘಾತುಕ ಚಟುವಟಿಕೆ ನಡೆಸಿ, ಶ್ರೀಮಠವನ್ನು ಸಿಕ್ಕಿಹಾಕಿಸುವ ಹುನ್ನಾರ ಇದಾಗಿರಬಹುದು ಎಂಬ ಆತಂಕ ಎದುರಾಗಿದೆ.

ಗೋಸ್ವರ್ಗದ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲು ಯೋಜನೆ ಕ್ರಮಗಳು

ಗೋಸ್ವರ್ಗದ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲು ಯೋಜನೆ ಕ್ರಮಗಳು

ಗೋಸ್ವರ್ಗದ ಕಾರ್ಯಕರ್ತರು ಇಡೀ ದಿನ ನಿಗಾವಹಿಸಿ ಕಾಯುತ್ತಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಿರ್ಮಾಣವಾಗುತ್ತಿರುವ ಗೋಸ್ವರ್ಗದ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲು ಯೋಜಿಸಲಾಗಿದೆ. ಜಗತ್ತಿನ ಏಕೈಕ ಹಾಗೂ ಮೊದಲ ಗೋಸ್ವರ್ಗ ಇದಾಗಿದ್ದು, ವಿಶಿಷ್ಟ ರೀತಿಯಲ್ಲಿ ಹಾಗೂ ನಾಡಿಗೆ ಹೆಮ್ಮೆ ತರುವ ರೀತಿಯಲ್ಲಿ ಈ ವಿಧಾನವನ್ನು ನಿರ್ಮಿಸಲಾಗಿದೆ.

ಅಳಿಯುತ್ತಿರುವ ಗೋವಂಶಕ್ಕೆ ಅಭಯ ನೀಡುವ ಹಾಗೂ ಗೋವುಗಳಿಗೆ ವಾತ್ಸಲ್ಯದ ವಾತಾವರಣ ಇಲ್ಲಿ ಕಲ್ಪಿಸಲಾಗಿದ್ದು, ಇದನ್ನು ಸಹಿಸದ ಸಮಾಜಘಾತಕರು, ಆಡಳಿತ ಮಂಡಳಿಯ ಮುನ್ನೆಚ್ಚರಿಕಾ ಕ್ರಮಗಳ ಹೊರತಾಗಿಯೂ ವಿಧ್ವಂಸಕ / ಸಮಾಜಘಾತಕ / ಜೀವಹಾನಿ ಉಂಟುಮಾಡುವ ಕುಕೃತ್ಯಕ್ಕೆ ಕೈಹಾಕಿರಬಹುದು ಎಂಬ ಆತಂಕ ಗೋಪ್ರೇಮಿಗಳಿಗೆ ಎದುರಾಗಿದೆ.

English summary
Unknown persons suspicious activities in and arorund Ramadeva Bankuli Mutt, Siddapura taluk of Uttara Kannada district. Police complaint has been lodge in Siddapura police station, Ramachandrapura Mutt press release.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X