ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ವಿವಿ ಘಟಿಕೋತ್ಸವ: 11 ಚಿನ್ನ ಬಾಚಿಕೊಂಡ ಚೈತ್ರಾ ಭಟ್

|
Google Oneindia Kannada News

ಧಾರವಾಡ, ಜೂನ್ , 30: ಧಾರವಾಡ ಕೃಷಿ ವಿಶ್ವವಿದ್ಯಾಲಯದ 29ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ವಿವಿಧ ಪದವಿ, ಸ್ನಾತಕೋತ್ತರ ಪದವಿ, ಪಿ.ಎಚ್‌ಡಿ ಶ್ರೇಯಾಂಕ ಪಡೆದವರಿಗೆ ಚಿನ್ನದ ಪದಕ ಪ್ರದಾನ ಮಾಡಿದರು.

ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕೆರೆಹೊಂಡದ ಚೈತ್ರಾ ಗಣಪತಿ ಭಟ್ 11 ಬಂಗಾರದ ಪದಕ ಪಡೆದು ಚಿನ್ನದ ಹುಡುಗಿಯೆನಿಸಿದರು. ಚೈತ್ರಾ ಸದ್ಯ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಸೆಂಟರ್‌ನಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಸಸ್ಯ ಸಂರಕ್ಷಣೆ ವಿಷಯದಲ್ಲಿ ಸಂಶೋಧನೆ ಮಾಡುವ ಗುರಿ ಇಟ್ಟುಕೊಂಡಿದ್ದಾರೆ.[ಜುಲೈ 1, 2ರಂದು ಉಡುಪಿಯಲ್ಲಿ ಹಲಸಿನ ಹಬ್ಬ]

agriculture

ಕೃಷಿ ಬಗ್ಗೆ ನನ್ನಲ್ಲಿ ಆಸಕ್ತಿ ಬರುವಂತೆ ಮಾಡಿದ್ದು ತಂದೆ. ಅವರು ಹೇಳುತ್ತಿದ್ದ ಮಾತಿಗಳೇ ಇಂಥ ಸಾಧನೆ ಮಾಡಲು ಕಾರಣವಾಯಿತು ಎಂದು ಚೈತ್ರಾ ಹೇಳಿದರು.

ಗೃಹ ವಿಜ್ಞಾನ ವಿಭಾಗದ ಚೈತ್ರಾ ರೈ ಆರು ಚಿನ್ನದ ಪದ ತಮ್ಮದಾಗಿಸಿಕೊಂಡರು. ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚೈತ್ರಾ ಮಧುಮೇಹ ಸಮಸ್ಯೆ ಕುರಿತಂತೆ ಸಂಶೋಧನೆ ಕೈಗೊಳ್ಳಬೇಕೆಂದಿದ್ದೇನೆ ಎಂದು ಹೇಳಿದರು.[ವಿಶ್ವದ ರಚನೆ ಕಾರಣ ಪತ್ತೆ ಹಚ್ಚಿದ ವಿಜ್ಞಾನಿಗಳು]

ಅತಿ ಹೆಚ್ಚು ಅಂಕಗಳೊಂದಿಗೆ ಕೃಷಿ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಉಪಾಸನಾ ಮಹಾಪಾತ್ರ 6 ಚಿನ್ನದ ಪದಕಗಳಿಗೆ ಭಾಜನರಾದರು.[ಕೃಷಿ ಪ್ರಚಾರಾಂದೋಲನ ಎಂದರೇನು?]

ಪಿಎಚ್‌.ಡಿಯ 53, ಸ್ನಾತಕೋತ್ತರ ಪದವಿಯ 283, ಪದವಿ ವಿಭಾಗದ 667 ವಿದ್ಯಾರ್ಥಿಗಳು ಸೇರಿ ದಂತೆ 1,003 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸಸ್ಯ ತಳಿಶಾಸ್ತ್ರ ವಿಭಾಗದ ಓಂಪ್ರಕಾಶ ಕುಮಾರಸಿಂಗ್, ಕೀಟಶಾಸ್ತ್ರ ವಿಭಾಗದ ಬೋನ್ತಾ ರಾಜಶೇಖರ 4, ಪಿ.ಎಚ್‌ಡಿಯಲ್ಲಿ ಬೇಸಾಯಶಾಸ್ತ್ರ ವಿಭಾಗದ ಶೇಖ್ ಜಾಫರ್ ಪಾಷಾ 3 ಬಂಗಾರದ ಪದಕಕ್ಕೆ ಭಾಜನರಾದರು.

ಧಾರವಾಡ ಕೃಷಿ ವಿವಿ ಘಟಿಕೋತ್ಸವ: ಚೈತ್ರಾ ಭಟ್ ಚಿನ್ನದ ಹುಡುಗಿ

English summary
Chaitra Bhat emerges ‘golden girl’ with 11 gold medals. Most of the gold medallists and cash award winners at the 29 annual convocation of the University of Agricultural Sciences-Dharwad want to take up research and few have already taken it up. 29th annual convocation of the University of Agricultural Sciences (UAS), Dharwad held on 29, June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X