ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಬಳ್ಳಾಪುರ: 2000 ಮಕ್ಕಳ ಸಾನಿಧ್ಯದಲ್ಲಿ ಗಣರಾಜ್ಯೋತ್ಸವ

By Vanitha
|
Google Oneindia Kannada News

ಚಿಕ್ಕಬಳ್ಳಾಪುರ, ಜನವರಿ,30: ಶಿಡ್ಲಘಟ್ಟದ ಪ್ರಸಿದ್ದ ಜನಸೇವೆ ಸಂಸ್ಥೆ ಯೂನಿಟಿ ಸಿಲ್ ಸಿಲಾ ಫೌಂಡೇಶನ್ ನ ಮುಸ್ಲಿಂ ಯುವಕರು 2000 ಕ್ಕು ಹೆಚ್ಚು ಶಾಲಾ ಮತ್ತು ಅರಬ್ಬಿ ಮದರಸಾದ ಮಕ್ಕಳಿಗೆ ಕುಡಿಯುವ ನೀರು ಮತ್ತು ಬಿಸ್ಕೆಟ್ ಪ್ಯಾಕೆಟ್, ಸಾರ್ವಜನಿಕರಿಗೆ ಸಿಹಿ ನೀಡುವ ಮೂಲಕ ಬಹಳ ವಿಭಿನ್ನವಾಗಿ ಆಚರಿಸಿದರು.

'ಯೂನಿಟಿ ಸಿಲ್ ಸಿಲಾ ಫೌಂಡೇಶನ್" ಸಂಸ್ಥೆಯು ಹಲವಾರು ಬಡರೋಗಿಗಳಿಗೆ, ಗರ್ಭೀಣಿಯರಿಗೆ ಸಹಾಯ ಹಸ್ತ ನೀಡಿದೆ. ಹಲವು ರಕ್ತದಾನ ಶಿಬಿರ ಮೂಲಕ 717 ಯುನಿಟ್ ರಕ್ತ ಸಂಗ್ರಹಿಸಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿಯೇ ಇತಿಹಾಸ ನಿರ್ಮಿಸಿದೆ. ಮಾನವೀಯತೆ, ಭಾವೈಕ್ಯತೆ ಮೆರೆದ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ಮೊಹಮ್ಮದ್ ಖಾಸಿಂ ಶ್ಲಾಘಿಸಿದರು.[ಸೇನಾ ಶಕ್ತಿ ಅನಾವರಣ, ಕರ್ನಾಟಕದ ಕಾಫಿ ಕಂಪು]

Chikkaballapur

ಧರ್ಮ, ಜಾತಿ, ಕುಲ ಎಂಬ ಭೇದ ಬಿಟ್ಟು ಮನುಷ್ಯತ್ವಕ್ಕಾಗಿ ಸೇವೆ ಮಾಡಿದರೆ ಮಾತ್ರವೇ ಸಂವಿಧಾನದ ಪಾಲನೆ ಮಾಡಿದಂತಾಗುತ್ತದೆ. ಜನ್ಮಕೊಟ್ಟ ದೇಶಮಾತೆಯ ಋಣ ತೀರಿಸಿದಂತಾಗುವುದು. ನಮ್ಮ ಸಂಸ್ಥೆಯಿಂದ ಈ ಕಾರ್ಯ ನಿರಂತರವಾಗಿ ಮುಂದುವರೆಯುತ್ತದೆ ಎಂದು ಯೂನಿಟಿ ಸಿಲ್ ಸಿಲಾ ಫೌಂಡೇಶನ್ ನ ಅಧ್ಯಕ್ಷರಾದ ಮೊಹಮ್ಮದ್ ಅಸದ್ ರವರು ಭರವಸೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಕೆ.ಎಂ ಮನೋರಮ ಧ್ವಜಾರೋಹಣ ನೆರವೇರಿಸಿದರು. ಜಾಮಿಯಾ ಮಸೀದಿ ಉಪಾಧ್ಯಕ್ಷ ಅಮೀರ್ ಜಾನ್, ಕಾರ್ಯದರ್ಶಿ ಹೈದರ್ ಅಲಿ, ಖಜಾಂಚಿ ರಫೀಖ್ ಪಾಷಾ, ಮದೀನ ಮಸೀದಿ ಅಧ್ಯಕ್ಷ ಎಚ್.ಎಸ್ ಫಯಾಜ್ ಸಾಬ್, ಕಾರ್ಯದರ್ಶಿ ನಿಸಾರ್ ಅಹ್ಮದ್, ಯೂನಿಟಿ ಸಿಲ್ ಸಿಲಾ ಫೌಂಡೇಶನ್ ಕಾರ್ಯದರ್ಶಿ ಇಂತಿಯಾಜ್ ಪಾಷ, ಸಯ್ಯದ್ ತೌಫೀಖ್, ಮೊಹಮ್ಮದ್ ಫಾರೋಖ್, ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ತಾಲೂಕು ಅಧ್ಯಕ್ಷ ಮುನಿಕೃಷ್ಣ, ಅಪ್ಪಿ,ಶಂಶೀರ್, ಡಾ.ಸತ್ಯ ನಾರಾಯಣ ರಾವ್ ಭಾಗವಹಿಸಿದ್ದರು.[ಹೆಣ್ಣುಮಕ್ಕಳ ಕಲಾವಂತಿಕೆಗೆ ಸಾಕ್ಷಿಯಾದ ಗಣರಾಜ್ಯೋತ್ಸವ]

ಕೃಷಿ ಶೀಲ ಪ್ರಶಸ್ತಿ ಪುರಸ್ಕೃತರು ಹಿತ್ತಲಹಳ್ಳಿ ಸುರೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ ರವಿಪ್ರಕಾಶ್, ಸಮಾನ ಮನಸ್ಕರ ಹೋರಾಟ ಸಮಿತಿ ಮತ್ತು ರೈತ ಸಂಘದ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಹಿರಿಯ ಫುಟ್ಬಾಲ್ ಆಟಗಾರರು ಮುಷೀರ್ ಮಾಮ್, ದಾರುಲ್ ಉಲುಮ್ ಸಬೀಲುಲ್ ಹುದಾ ಮದರಸಾದ ಹಿರಿಯರು ಹಾಗು ವಿಧ್ಯಾರ್ಥಿಗಳು ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು.

English summary
Unity silsila Foundation celebrated Republic day very special in Shidlaghatta, Chikkaballapur on January 26th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X