ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2023; ಅಮೃತ ಕಾಲದ ಮಹತ್ವಪೂರ್ಣ ಬಜೆಟ್: ಪಿಯೂಷ್ ಗೋಯಲ್

2047ರ ವೇಳೆಗೆ ಭಾರತವು ವಸಾಹತುಶಾಹಿ ವ್ಯವಸ್ಥೆಯ ಚಿಂತನೆಯಿಂದ ಸಂಪೂರ್ಣ ಹೊರಬಂದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆ ಆಗಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

|
Google Oneindia Kannada News

ಬೆಂಗಳೂರು,ಫೆಬ್ರವರಿ4: ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತವನ್ನು ನೋಡಲು ಪೂರಕ ಕೇಂದ್ರ ಬಜೆಟ್ ಮಂಡಿಸಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಶನಿವಾರ ಮಾಡತನಾಡಿದ ಅವರು, ಸ್ವಾತಂತ್ರ್ಯೋತ್ತರ ಅಮೃತ ಕಾಲಘಟ್ಟಕ್ಕೆ ನಾವು ಕಾಲಿಟ್ಟಿದ್ದೇವೆ. ವಿಶ್ವದ ಪ್ರಮುಖ ಹಣಕಾಸು ವ್ಯವಸ್ಥೆ ಹೊಂದಿದ 3 ದೇಶಗಳÀಲ್ಲಿ ಒಂದಾಗಿ ಭಾರತವು ಹೊರಹೊಮ್ಮುವ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

Budget 2023; ಈ ಬಾರಿ ಪೊಲಿಟಿಕಲ್ ಪಾರ್ಟಿ ಬಿಟ್ರೆ, ಜನರು ಬಜೆಟ್ ಸ್ವಾಗತ ಮಾಡಿದ್ದಾರೆ: ಪ್ರಲ್ಹಾದ್ ಜೋಶಿBudget 2023; ಈ ಬಾರಿ ಪೊಲಿಟಿಕಲ್ ಪಾರ್ಟಿ ಬಿಟ್ರೆ, ಜನರು ಬಜೆಟ್ ಸ್ವಾಗತ ಮಾಡಿದ್ದಾರೆ: ಪ್ರಲ್ಹಾದ್ ಜೋಶಿ

ಹೆಚ್ಚು ಉದ್ಯೋಗ, ಗರಿಷ್ಠ ಆರ್ಥಿಕ ಚಟುವಟಿಕೆ, ಸಮಾಜದ ಎಲ್ಲ ಕ್ಷೇತ್ರಕ್ಕೂ ಸಹಾಯಕ. ಉತ್ತಮ ಭವಿಷ್ಯ, ಸುಸ್ಥಿರ ಅಭಿವೃದ್ಧಿಗೆ ಪೂರಕ ಬಜೆಟ್ ಇದಾಗಿದೆ. 9 ವರ್ಷಗಳಲ್ಲಿ ಮೋದಿಜಿ ಅವರು ಸಂಪನ್ಮೂಲದ ಸಮರ್ಪಕ ವಿತರಣೆಗೆ ಕ್ರಮ ಕೈಗೊಂಡಿದ್ದಾರೆ. ಮನೆಗಳ ನಿರ್ಮಾಣ, ಎಲ್ಲರಿಗೂ ವಿದ್ಯುತ್, ಗ್ಯಾಸ್ ಸಿಲಿಂಡರ್ ಸಂಪರ್ಕ, ಡಿಜಿಟಲ್ ಕನೆಕ್ಟಿವಿಟಿಯಿಂದ ಗಮನಾರ್ಹ ಬದಲಾವಣೆ ಆಗಿದೆ. ಅಲ್ಲದೆ ಈಗ ಮನೆಮನೆಗೆ ನಳ್ಳಿನೀರು ಕೊಡಲಾಗುತ್ತಿದೆ ಎಂದು ತಿಳಿಸಿದರು.

Union Minister Piyush Goyal Reaction on Union Budget 2023

ಕರ್ನಾಟಕದ ಐಟಿ ಕ್ಷೇತ್ರದ ಕೊಡುಗೆ ಶ್ಲಾಘನೀಯ ಎಂದ ಅವರು, ಉತ್ತಮ ಗುಣಮಟ್ಟದ ಜೀವನ ನಿರೀಕ್ಷೆಯು ಮುಂದೆ ಈಡೇರಲಿದೆ ಎಂದರು. ವೈಯಕ್ತಿಕ ತೆರಿಗೆ ಮಿತಿಯನ್ನು 7 ಲಕ್ಷಕ್ಕೆ ಹೆಚ್ಚಿಸಿದ್ದು ಮಧ್ಯಮ ವರ್ಗಕ್ಕೆ ಮಹತ್ವದ ಕೊಡುಗೆ ನೀಡಿದ್ದು, ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆಗೆ ಕರ್ನಾಟಕದ ಕೊಡುಗೆ ದೊಡ್ಡದು. ರೈಲ್ವೆ ಮೂಲಕ ಕರ್ನಾಟಕಕ್ಕೆ 7,561 ಕೋಟಿ ಅನುದಾನ ಸಿಗುತ್ತಿದೆ. ಬೆಂಗಳೂರು ಸಬರ್ಬನ್ ರೈಲು ವ್ಯವಸ್ಥೆಗೆ ಹೆಚ್ಚಿನ ಹಣ ಬರಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ಸಿಗಲಿದ್ದು, ನೆನೆಗುದಿಗೆ ಬಿದ್ದಿದ್ದ ಯೋಜನೆ ಜಾರಿಗೆ ನೆರವಾಗಲಿದೆ ಎಂದರು.

2047ರ ವೇಳೆಗೆ ಭಾರತವು ವಸಾಹತುಶಾಹಿ ವ್ಯವಸ್ಥೆಯ ಚಿಂತನೆಯಿಂದ ಸಂಪೂರ್ಣ ಹೊರಬಂದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆ ಆಗಲಿದೆ. ಹಣಕಾಸು ಸಚಿವರು ಕರ್ನಾಟಕವನ್ನು ಪ್ರತಿನಿಧಿಸುವವರು. ಅವರು ಸುಸ್ಥಿರ ಪ್ರಗತಿ, ಹೊಸ ಕೆಲಸಗಳ ಅವಕಾಶ, ಯುವಕರಿಗೆ ಕೌಶಲಗಳ ಅಭಿವೃದ್ಧಿಗೆ ಒತ್ತು ಕೊಡುವ ಬಜೆಟ್ ಮುಂದಿಟ್ಟಿದ್ದಾರೆ. ಕರಕುಶಲಕರ್ಮಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಅನಾವರಣಕ್ಕೆ ಭವಿಷ್ಯದಲ್ಲಿ ಅವಕಾಶ ಸಿಗಲಿದೆ ಎಂದು ತಿಳಿಸಿದರು.

Union Minister Piyush Goyal Reaction on Union Budget 2023

ಹೆಚ್ಚು ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯ ವೃದ್ಧಿಯಿಂದ ಹೆಚ್ಚು ಉದ್ಯೋಗ ಲಭಿಸುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಹತ್ತಾರು ಪ್ರಯೋಜನ ಸಿಗುತ್ತದೆ. ವ್ಯವಹಾರ ಸರಳೀಕರಣ, ಡಿಜಿಲಾಕರ್, ಇಲೆಕ್ಟ್ರಾನಿಕ್ ಫೋಕಸ್ ಮೂಲಕ ಕ್ರಾಂತಿಕಾರಿ ಪ್ರಗತಿ ಖಚಿತ. ವಿಶ್ವದ 10ನೇ ದೊಡ್ಡ ಆರ್ಥಿಕ ಶಕ್ತಿಯಿಂದ ಈಗಾಗಲೇ 5ನೇ ಬೃಹತ್ ಆರ್ಥಿಕ ಶಕ್ತಿಯಾಗಿ ಭಾರತವು ಹೊರಹೊಮ್ಮಿದೆ. ಅದು ಕೆಲವೇ ವರ್ಷಗಳಲ್ಲಿ 3ನೇ ಬೃಹತ್ ಆರ್ಥಿಕ ಶಕ್ತಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಜನರು ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ನಿಶ್ಚಿತ. ಕಾಂಗ್ರೆಸ್ ಪಕ್ಷವು ಸುಳ್ಳು ಆಶ್ವಾಸನೆಗಳನ್ನಷ್ಟೇ ನೀಡುತ್ತದೆ. ಅದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸುಳ್ಳು ಆರೋಪಗಳಿಂದ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲ. ಗುಜರಾತ್ ರಾಜ್ಯದಲ್ಲೂ ಇದು ಫಲಿತಾಂಶದ ವೇಳೆ ವ್ಯಕ್ತವಾಗಿದೆ. ಗರಿಷ್ಠ ಬಹುಮತದೊಂದಿಗೆ ನಾವು ಗೆದ್ದಿದ್ದೇವೆ. ಕರ್ನಾಟಕದಲ್ಲೂ ಪ್ರಧಾನಿ ಮೋದಿಜಿ ಮತ್ತು ಅವರ ತಂಡವನ್ನು ಬಿಜೆಪಿ ರೂಪದಲ್ಲಿ ಜನರು ಬಯಸುತ್ತಾರೆ ಎಂದು ತಿಳಿಸಿದರು.

English summary
Budget 2023 Reactions : Union Minister Piyush Goyal about Union Budget 2023-24. 2023-2024ನೇ ಸಾಲಿನ ಕೇಂದ್ರ ಬಜೆಟ್ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X