• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಅಸ್ವಸ್ಥತೆಗೆ ಕೋವಿಡ್ ಕಾರಣ?

|

ಬೆಂಗಳೂರು, ಜ. 05: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿನ ಹೆಬ್ಬಾಳದ ಆಸ್ಟರ್ ಐಎಂಸಿ ಆಸ್ಪತ್ರೆಗೆ ಡಿವಿಎಸ್ ದಾಖಲಾಗಿದ್ದರು. ಚಿತ್ರದುರ್ಗದಲ್ಲಿ ಏಕಾಏಕಿ ಕುಸಿದಿದ್ದ ಸದಾನಂದಗೌಡರನ್ನು ಪಕ್ಕದಲ್ಲಿದ್ದ ಸಹಾಯಕರು ಹಿಡಿದಿದ್ದರು. ತಕ್ಷಣವೇ ಅಲ್ಲಿನ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಅದಾದ ಬಳಿಕ ಜೀರೋ ಟ್ರಾಫಿಕ್‌ನಲ್ಲಿ ಅವರನ್ನು ಹೆಬ್ಬಾಳದ ಆಸ್ಪತ್ರೆಗೆ ಕರೆತರಲಾಗಿತ್ತು. ಅದೇ ಆಸ್ಪತ್ರೆಯಲ್ಲಿ ಹಿಂದೆ ಸದಾನಂದಗೌಡರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಗಾಗ ಇದೇ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು.

   ದಿಢೀರ್‌ ಅನಾರೋಗ್ಯದ ಕಾರಣ ಬಿಚ್ಚಿಟ್ಟ ಕೇಂದ್ರ ಸಚಿವ DV Sadananda Gowda | Oneindia Kannada

   ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ದೂರವಾಣಿ ಕರೆ ಮಾಡಿ ಸದಾನಂದಗೌಡ ಆರೋಗ್ಯ ವಿಚಾರಿಸಿದ್ದರು.

   ಕೇಂದ್ರ ಸಚಿವ ಸದಾನಂದಗೌಡ ಔಟ್‌ ಆಫ್ ಡೇಂಜರ್: ಹೆದರಬೇಕಿಲ್ಲ ಎಂದ ವೈದ್ಯರುಕೇಂದ್ರ ಸಚಿವ ಸದಾನಂದಗೌಡ ಔಟ್‌ ಆಫ್ ಡೇಂಜರ್: ಹೆದರಬೇಕಿಲ್ಲ ಎಂದ ವೈದ್ಯರು

   ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಬಳಿಕ ಸ್ವತಃ ಸದಾನಂದಗೌಡ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ತಮ್ಮ ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ. ಸದಾನಂದಗೌಡ ಅವರ ಆರೋಗ್ಯ ಸಮಸ್ಯೆಗೆ ಕೋವಿಡ್ ಕಾರಣವಾ? ಅದಕ್ಕೆ ಅವರು ಹೇಳಿದ್ದಾದರೂ ಏನು? ಮುಂದಿದೆ ಮಾಹಿತಿ.

   ನನ್ನದೇ ನಿರ್ಲಕ್ಷ

   ನನ್ನದೇ ನಿರ್ಲಕ್ಷ

   ತಾವು ಅಸ್ವಸ್ಥರಾಗಲು ತಮ್ಮದೆ ಸ್ವಲ್ಪ ನಿರ್ಲಕ್ಷದ ಕಾರಣ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಹೇಳಿಕೆ ನೀಡಿದ್ದಾರೆ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದ ಕಾರಣ ನಾನು ಅಸ್ವಸ್ಥನಾಗಿರಬಹುದು ಕಾರಣವಾಗಿರಬಹುದು. ಚಿತ್ರದುರ್ಗದಲ್ಲಿ ಅಸ್ವಸ್ಥಗೊಂಡ ತಕ್ಷಣ ನನ್ನ ಜೊತೆಗೆ ಇದ್ದವರು, ಅಧಿಕಾರಿಗಳು ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜಿಗೆ ಸೇರಿದಿದ್ದರು. ಅಲ್ಲಿನ ವೈದ್ಯರು ಚಿಕಿತ್ಸೆ ಕೊಟ್ಟು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಡಿವಿಎಸ್ ಹೇಳಿಕೆ ನೀಡಿದ್ದಾರೆ.

   ಪೋಸ್ಟ್ ಕೋವಿಡ್

   ಪೋಸ್ಟ್ ಕೋವಿಡ್

   ನಾನು ಕೋವಿಡ್‌ನಿಂದ ಚೇತರಿಸಿಕೊಂಡಿದ್ದು ಕೂಡ ಅಸ್ವಸ್ಥತೆಗೆ ಕಾರಣ ಎಂದು ಸದಾನಂದಗೌಡ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೋವಿಡ್ ಸೋಂಕಿಗೆ ತುತ್ತಾಗಿದ್ದರಿಂದ ಹೀಗಾಗಿದೆ. ಪೋಸ್ಟ್ ಕೋವಿಡ್‌ನನ್ನ ಮೇಲೆ ತನ್ನ ಪ್ರಭಾವ ತೋರಿಸಿದೆ. ಹೀಗಾಗಿ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡವರು ಸ್ವಲ್ಪ ಜಾಗರೂಕರಾಗಿರಬೇಕು ಎಂದು ಕೋವಿಡ್‌ನಿಂದ ಚೇತರಿಸಿಕೊಂಡಿರುವವರಿಗೆ ಡಿವಿಎಸ್ ಸಲಹೆ ನೀಡಿದ್ದಾರೆ.

   ಲೋ ಶುಗರ್

   ಲೋ ಶುಗರ್

   ಜೊತೆಗೆ ಸಮಯಕ್ಕೆ ಸರಿಯಾಗಿ ಊಡ ಮಾಡದೇ ಇರುವುದು ಕೂಡ ನನ್ನ ಅಸ್ವಸ್ಥತೆಗೆ ಕಾರಣ. ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿ ಆಯ ತಪ್ಪಿದ್ದೆ. ತಕ್ಷಣವೇ ನನ್ನ ಜೊತೆಗಿದ್ದವರು ಚಿತ್ರದುರ್ಗದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಅಲ್ಲಿ ಬಸವೇಶ್ವರ ಮೆಡಿಕಲ್ ಕಾಲೇಜಿನ ತಜ್ಞರು ಚಿಕಿತ್ಸೆ ಕೊಟ್ಟಿದ್ದರು. ಬಳಿಕ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ದರು. ಎರಡು ದಿನಗಳ ಚಿತ್ಸೆ ಬಳಿಕ ಇದೀಗ ನಾರ್ಮಲ್ ಸದಾನಂದನಾಗಿ ನಾನು ಗುಣಮುಖನಾಗಿದ್ದೇನೆ ಎಂದು ಡಿವಿಎಸ್ ಹೇಳಿಕೆ ನೀಡಿದ್ದಾರೆ.

   ಜಾಗರೂಕತೆ ಅಗತ್ಯವಿದೆ

   ಜಾಗರೂಕತೆ ಅಗತ್ಯವಿದೆ

   ಚಿಕಿತ್ಸೆ ಕೊಟ್ಟಿರುವ ವೈದ್ಯರು ಜಾಗರೂಕರಾಗಿ ಇರುವಂತೆ ಸೂಚಿಸಿದ್ದಾರೆ. ಕೋವಿಡ್ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿರುವುದರಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ. ಒಂದು ತಿಂಗಳಲ್ಲಿ ಸಂಪೂರ್ಣವಾಗಿ ಗುಣಮುಖರಾಗುವ ವಿಶ್ವಾಸವನ್ನು ವೈದ್ಯರು ತುಂಬಿರುವುದಾಗಿ ಡಿವಿಎಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

   ಜೊತೆಗೆ ಫೆಬ್ರವರಿ 29ರ ನಂತರ ಬಜೆಟ್ ಅಧಿವೇಶನ ನಡೆಯಲಿದೆ. ಅದಕ್ಕೆಲ್ಲ ತಯಾರಿ ಮಾಡಿಕೊಳ್ಳಬೇಕು. ಹೀಗಾಗಿ ಎರಡು ದಿನಗಳ ಬಳಿಕ ಮತ್ತೆ ಕೆಲಸಕ್ಕೆ ಹಾಜರಾಗುತ್ತೇನೆ ಎಂದು ಡಿವಿಎಸ್ ಹೇಳಿಕೆ ನೀಡಿದ್ದಾರೆ.

   English summary
   Union Minister DV Sadananda Gowda has been discharged from hospital. After that DV Sadananda Gowda said that post-Covid issue was the cause of their illness. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X