ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸ್ಥಾನಕ್ಕೆ ಡಿ. ವಿ. ಸದಾನಂದ ಗೌಡ ರಾಜೀನಾಮೆ

|
Google Oneindia Kannada News

ಬೆಂಗಳೂರು, ಜುಲೈ 07; ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ. ವಿ. ಸದಾನಂದ ಗೌಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆಯಾಗಲಿದ್ದು, ಕರ್ನಾಟಕದ ನಾಲ್ವರು ಸಂಪುಟ ಸೇರಲಿದ್ದಾರೆ.

Recommended Video

ಸಂಸದ ಡಿ. ವಿ. ಸದಾನಂದ ಗೌಡ ಸಚಿವ ಸ್ಥಾನಕ್ಕೆ ರಾಜೀನಾಮೆ | Oneindia Kannada

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ ಸಚಿವ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಸದಾನಂದ ಗೌಡರ ಹೇಳಿಕೆಯನ್ನು ಪಿಟಿಐ ವರದಿ ಮಾಡಿದೆ.

ಮೋದಿ 2.0 ಕ್ಯಾಬಿನೆಟ್ ವಿಸ್ತರಣೆ ಆಹ್ವಾನ ಪತ್ರಿಕೆ, ಸಂಭಾವ್ಯರ ಪಟ್ಟಿ ಮೋದಿ 2.0 ಕ್ಯಾಬಿನೆಟ್ ವಿಸ್ತರಣೆ ಆಹ್ವಾನ ಪತ್ರಿಕೆ, ಸಂಭಾವ್ಯರ ಪಟ್ಟಿ

Union Minister DV Sadananda Gowda Resigned

68 ವರ್ಷದ ಡಿ. ವಿ. ಸದಾನಂದ ಗೌಡ ಬೆಂಗಳೂರು ಉತ್ತರ ಕ್ಷೇತ್ರದ ಸಂಸದರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಮೋದಿ ಕ್ಯಾಬಿನೆಟ್ ವಿಸ್ತರಣೆ: 20 ಹೊಸ ಮುಖಗಳಿಗೆ ಮಣೆ? ಮೋದಿ ಕ್ಯಾಬಿನೆಟ್ ವಿಸ್ತರಣೆ: 20 ಹೊಸ ಮುಖಗಳಿಗೆ ಮಣೆ?

ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಕರ್ನಾಟಕದ ನಾಲ್ವರು ಸಚಿವರಾಗಿ ಸೇರ್ಪಡೆಗೊಳ್ಳಲಿದ್ದಾರೆ. ಡಿ. ವಿ. ಸದಾನಂದ ಗೌಡ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸೇರ್ಪಡೆಗೊಳ್ಳುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ: ಕರ್ನಾಟಕಕ್ಕೆ ಸ್ವಲ್ಪ ಸಿಹಿ-ಸ್ವಲ್ಪ ಕಹಿ ಸುದ್ದಿ!ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ: ಕರ್ನಾಟಕಕ್ಕೆ ಸ್ವಲ್ಪ ಸಿಹಿ-ಸ್ವಲ್ಪ ಕಹಿ ಸುದ್ದಿ!

ಬೆಂಗಳೂರು ಉತ್ತರ ಕ್ಷೇತ್ರ

ಬೆಂಗಳೂರು ಉತ್ತರ ಕ್ಷೇತ್ರ

2004ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುವ ಮೂಲಕ ಸದಾನಂದ ಗೌಡ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದರು. 2009ರಲ್ಲಿ ಉಡುಪಿ, 2014 ಮತ್ತು 2019ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ರೈಲ್ವೆ ಬಜೆಟ್ ಮಂಡಿಸಿದ್ದಾರೆ

ರೈಲ್ವೆ ಬಜೆಟ್ ಮಂಡಿಸಿದ್ದಾರೆ

2014ರಲ್ಲಿ ಮೊದಲ ಬಾರಿ ನರೇಂದ್ರ ಮೋದಿ ಪ್ರಧಾನಿಯಾದಾಗ ಸದಾನಂದ ಗೌಡರಿಗೆ ರೈಲ್ವೆ ಖಾತೆ ನೀಡಲಾಗಿತ್ತು. ಒಂದು ಬಾರಿ ರೈಲ್ವೆ ಬಜೆಟ್ ಸಹ ಮಂಡನೆ ಮಾಡಿದ ಹೆಗ್ಗಳಿಗೆ ಸದಾನಂದ ಗೌಡರದ್ದು. ಬಳಿಕ ಕಾನೂನು ಸಚಿವರಾಗಿ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ಸಚಿವರೂ ಆದರು.

ಎರಡು ಬಾರಿ ಮೋದಿ ಸಂಪುಟದಲ್ಲಿ ಕಾರ್ಯ

ಎರಡು ಬಾರಿ ಮೋದಿ ಸಂಪುಟದಲ್ಲಿ ಕಾರ್ಯ

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಅನಂತ್‌ ಕುಮಾರ್ ನಿಧನದ ಬಳಿಕ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಜವಾಬ್ದಾರಿಯನ್ನು ಸದಾನಂದ ಗೌಡರಿಗೆ ವಹಿಸಲಾಯಿತು. 2019ರಲ್ಲಿ ಜಯಗಳಿಸಿದ ಬಳಿಕ ಮತ್ತೊಂದು ಬಾರಿ ಪ್ರಧಾನಿ ಮೋದಿ ಸಂಪುಟವನ್ನು ಸೇರಿದರು.

ಪಕ್ಷ ಸಂಘಟನೆಯಲ್ಲೂ ಕೆಲಸ

ಪಕ್ಷ ಸಂಘಟನೆಯಲ್ಲೂ ಕೆಲಸ

ಡಿ. ವಿ. ಸದಾನಂದ ಗೌಡರು ಪಕ್ಷ ಸಂಘಟನೆ ಕೆಲಸವನ್ನು ಮಾಡಿದ್ದಾರೆ. 2006 ರಿಂದ 2010ರ ತನಕ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು. ಕರ್ನಾಟಕದಲ್ಲಿ ಬಿಜೆಪಿ ಆಡಳಿತವಿದ್ದಾಗ ರಾಜಕೀಯ ಸನ್ನಿವೇಶ ಬದಲಾಯಿತು. 2011ರ ಆಗಸ್ಟ್‌ 4ರಿಂದ 2012ರ ಜುಲೈ 11ರ ತನಕ ರಾಜ್ಯದ ಮುಖ್ಯಮಂತ್ರಿಯಾಗಿಯೂ ಕಾರ್ಯ ನಿರ್ವಹಣೆ ಮಾಡಿದರು.

English summary
Bengaluru North MP and union chemicals and fertilizers minister D. V. Sadananda Gowda resigned. Narendra Modi cabinet expansion will be held on 6 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X