ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಗೆ ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿದ್ದು: ಡಿವಿಎಸ್ ಲೇವಡಿ

|
Google Oneindia Kannada News

ಬೆಂಗಳೂರು, ಜನವರಿ 17: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಇದ್ದಲ್ಲಿ ಪಕ್ಷದ ಸದಸ್ಯತ್ವವನ್ನು ಸ್ವ ಇಚ್ಛೆಯಿಂದ ತೀರ್ಮಾನಿಸಿದ್ದೀರೆಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಶಾಸಕರಿಗೆ ಪತ್ರ ರವಾನಿಸಿರುವುದನ್ನು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಟೀಕಿಸಿದ್ದಾರೆ.

ಇತ್ತೀಚಿನ ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ವಿಶೇಷ ಸಭೆಯನ್ನು ಜ.18ರ ಶುಕ್ರವಾರದಂದು ಆಯೋಜಿಸಲಾಗಿದೆ. ಈ ಸಭೆಗೆ ತಪ್ಪದೇ ಹಾಜರಾಗಬೇಕು.

ಬಿಜೆಪಿ ಪಂಥಾಹ್ವಾನ ಸ್ವೀಕರಿಸಿ, ಸಿದ್ದರಾಮಯ್ಯರಿಂದ ಟ್ವೀಟ್!ಬಿಜೆಪಿ ಪಂಥಾಹ್ವಾನ ಸ್ವೀಕರಿಸಿ, ಸಿದ್ದರಾಮಯ್ಯರಿಂದ ಟ್ವೀಟ್!

ಸಭೆಗೆ ಹಾಜರಾಗದೆ ಇದ್ದರೆ, ಅನುಪಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದ ಸದಸ್ಯತ್ವವನ್ನು ಸ್ವ ಇಚ್ಛೆಯಿಂದ ತೊರೆಯಲು ಬಯಸಿದ್ದೀರಿ ಎಂದು ಪರಿಗಣಿಸಿ ಸಂವಿಧಾನದ ಅನುಚ್ಛೇದ-10ರ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

Union Minister DV Sadananda Gowda criticised Siddaramaiahs warning letter congress legislative party meeting

ಸಿದ್ದರಾಮಯ್ಯರ ಪತ್ರವನ್ನು ಟ್ವಿಟ್ಟರ್‌ನಲ್ಲಿ ಹಾಕಿಕೊಂಡಿರುವ ಸದಾನಂದಗೌಡ, ಅದನ್ನು ಟೀಕಾಪ್ರಹಾರ ನಡೆಸಲು ಬಳಸಿಕೊಂಡಿದ್ದಾರೆ.

ಇದಪ್ಪಾ ವರಸೆ !!! ಅಂತಿಮ ತೆರೆಗೆ ದೃಶ್ಯ -ಕೈಮಾಕ್ಸ್. ತಾವೇ ಸೂತ್ರಧಾರಿ ತಾವೇ ಪಾತ್ರಧಾರಿ. ಯಾರಲ್ಲಿ ದೂತರೇ !! ನನ್ನ ಸಭೆಗೆ ಹಾಜಾರಾಗದ ವಂಧಿ ಮಾಗಧರನ್ನು ನನ್ನ ಸಾಮ್ರಾಜ್ಯದಿಂದಲೇ ಉಚ್ಚಾಟಿಸಿ. ಇದು ಕಟ್ಟಾಜ್ಞೆ ,ರಾಜಾಜ್ಞೆ. ಸ್ವಗತ : ಹೆಂಗೆ ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿದ್ದು ಎಂದು ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.

ಯಡಿಯೂರಪ್ಪಗೆ ಸಿಎಂ ಆಗೋ ಆಸೆ ಇನ್ನೂ ಹೋಗಿಲ್ಲ : ಸಿದ್ದರಾಮಯ್ಯ ಯಡಿಯೂರಪ್ಪಗೆ ಸಿಎಂ ಆಗೋ ಆಸೆ ಇನ್ನೂ ಹೋಗಿಲ್ಲ : ಸಿದ್ದರಾಮಯ್ಯ

ಇದಕ್ಕೆ ಬಿಜೆಪಿ ಬೆಂಬಲಿಗರು ಮತ್ತು ವಿರೋಧಿಗಳು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು ಏಕೆ ಸೇರಿಕೊಂಡ್ರಿ? ಡಿವಿಎಸ್‌ಗೆ ಸಿದ್ದರಾಮಯ್ಯ ಮತ್ತೆ ಗುದ್ದು ಬೆಂಗಳೂರು ಏಕೆ ಸೇರಿಕೊಂಡ್ರಿ? ಡಿವಿಎಸ್‌ಗೆ ಸಿದ್ದರಾಮಯ್ಯ ಮತ್ತೆ ಗುದ್ದು

'ಕುರಿ ಬೆಣ್ಣೆ ತಿಂದಿದ್ದು ಮರೆತಂಗಿದೆ' ಎಂದು ಟ್ವಿಟ್ಟಿಗರೊಬ್ಬರು ಸದಾನಂದಗೌಡರ ಕಾಲೆಳೆದಿದ್ದಾರೆ. 'ಇದು ಕೂಡ ಕಾನೂನಿನ ಅನ್ವಯ ಕ್ರಮ ಜರುಗಿಸುವ ವಿಧಾನ. ಸದಾ ನಗುವ ನಿಮಗೆ ಇದು ಕಾಮಿಡಿ ವಸ್ತುವೇ? ಭಾರತದ ಕಾನೂನು ನಿಮಗೆ ಹಾಸ್ಯದ ವಸ್ತುವಾಗಿದೆಯೇ?' ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

English summary
Union Minister DV Sadananda Gowda criticised Siddaramaiah's warning in his letter letter to attend Congress legislative party meeting to MLA's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X