ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬಂಡಾಯ ಸಭೆ ಬೆನ್ನಲ್ಲೆ ಯಡಿಯೂರಪ್ಪರಿಗೆ ಅಮಿತ್ ಶಾ ದೂರವಾಣಿ ಕರೆ!

|
Google Oneindia Kannada News

ಬೆಂಗಳೂರು, ಮೇ 30: ಕೊರೊನಾವೈರಸ್, ಲಾಕ್‌ಡೌನ್‌ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ರಾಜ್ಯ ಸಂಪುಟ ವಿಸ್ತರಣೆ ಬಳಿಕ ಮೊದಲ ಬಾರಿ ಬಿಜೆಪಿ ನಾಯಕರು ಬಂಡಾಯ ಸಭೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರ ನೇತೃತ್ವದಲ್ಲಿ ಬಿಜೆಪಿ ಹಿರಿಯ ಶಾಸಕರು ಬಂಡಾಯ ಸಭೆ ನಡೆಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಹಿಂದೆಯೂ ಕೂಡ ಬೆಳಗಾವಿ ಜಿಲ್ಲೆಯ ಅಸಮಾಧಾನದಿಂದಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿದ್ದನ್ನು ನೆನಪಿಸಿಕೊಳ್ಳಬಹುದು. ಹೀಗಾಗಿ ಹಿರಿಯರ ಬಂಡಾಯ ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ. ರಾಜ್ಯಸಭಾ ಚುನಾವಣೆ ನೆಪದಲ್ಲಿ ಆರಂಭವಾಗಿರುವ ಬಂಡಾಯ ಇದೀಗ ನಾಯಕತ್ವ ಬದಲಾವಣೆ ಬೇಡಿಕೆಗೆ ಬಂದು ನಿಂತಿದೆ. ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಬಂಡಾಯ ಎದ್ದಿರುವುದನ್ನೂ ಹಿರಿಯ ಶಾಸಕರು ಸಮರ್ಥನೆ ಮಾಡಿಕೊಂಡಿದ್ದಾರೆ. ಅದಕ್ಕೆ ಕೊಟ್ಟಿರುವ ಕಾರಣಗಳು ವಿಚಿತ್ರವಾಗಿವೆ.

ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಯಡಿಯೂರಪ್ಪ ವಿರುದ್ಧ ಆಪ್ತರಿಂದಲೇ ಅಸಮಾಧಾನ ಸ್ಪೋಟ, ಬಂಡಾಯ ಸಭೆ!ಯಡಿಯೂರಪ್ಪ ವಿರುದ್ಧ ಆಪ್ತರಿಂದಲೇ ಅಸಮಾಧಾನ ಸ್ಪೋಟ, ಬಂಡಾಯ ಸಭೆ!

ಬಂಡಾಯಕ್ಕೆ ಸಮರ್ಥನೆ!

ಬಂಡಾಯಕ್ಕೆ ಸಮರ್ಥನೆ!

ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಹೀಗೆ ಬಂಡಾಯ ಸಭೆ ಮಾಡುವುದು ಎಷ್ಟು ಸರಿ ಎಂಬುದಕ್ಕೆ ಮಾಜಿ ಸಂಸದ ರಮೇಶ್ ಕತ್ತಿ ವಿಚಿತ್ರವಾಗಿ ಉತ್ತರಿಸಿದ್ದಾರೆ. ಕೊರೊನಾ ವೈರಸ್‌ ಸಂಕಷ್ಟದಿಂದ ಯಾವ ಕೆಲಸ ನಿಂತಿವೆ ಎಂದು ಅವರು ಮಾಧ್ಯಮಗಳಿಗೆ ಮರು ಪ್ರಶ್ನೆ ಮಾಡಿದ್ದಾರೆ. ಮದುವೆ, ಮುಂಜಿ, ಮೃತರ ಅಂತ್ಯಕ್ರಿಯೆ ಯಾವುದು ನಿಂತಿಲ್ಲ.

ರಾಜಕಾರಣವೂ ಹಾಗೆ. ಇದು ಹರಿಯುವ ನೀರು. ಲಾಕ್‌ಡೌನ್ ಸಂದರ್ಭದಲ್ಲಿಯೆ ರಾಜ್ಯಸಭಾ ಚುನಾವಣೆ ಬಂದಿದೆ. ಲೋಕಸಭಾ ಚುನಾವಣೆ ವೇಳೆ ಕೊಟ್ಟಿದ್ದ ಭರವಸೆಯನ್ನು ಮುಖ್ಯಮಂತ್ರಿಗಳಿಗೆ ನೆನಪಿಸಿದ್ದೇವೆ ಅಷ್ಟೇ ಎಂದು ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ. ಹಾಗೆ ಹೇಳುವ ಮೂಲಕ ಸಹೋದರ ಉಮೇಶ್ ಕತ್ತಿ ಬಂಡಾಯದ ನೇತೃತ್ವ ವಹಿಸಿಕೊಂಡಿದ್ದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

ಕೋವಿಡ್ ನಿಯಂತ್ರಣ

ಕೋವಿಡ್ ನಿಯಂತ್ರಣ

ಅನರ್ಹ ಶಾಸಕರು ಚುನಾಯಿತರಾಗಿ ಸಚಿವರಾದ ಬಳಿಕ ರಾಜ್ಯದಲ್ಲಿ ಸ್ಥಿರ ಸರ್ಕಾರ ಬರುತ್ತದೆ ಎಂದು ಜನರು ಭಾವಿಸಿದ್ದರು. ಆದರೆ ಬಂದಿದ್ದು ಕೊರೊನಾ ವೈರಸ್‌ ಎಂಬ ಹೆಮ್ಮಾರಿ. ಹೀಗಾಗಿ ಯಡಿಯೂರಪ್ಪ ಅವರು ಕಳೆದ ಎರಡೂವರೆ ತಿಂಗಳುಗಳಿಂದ ಸಂಪೂರ್ಣವಾಗಿ ವೈರಸ್ ನಿಯಂತ್ರಣ, ಲಾಕ್‌ಡೌನ್‌ ಸಮಸ್ಯೆ ಪರಿಹರಿಸುವತ್ತ ಗಮನ ಹರಿಸಿದ್ದಾರೆ.

ವಯಸ್ಸಿನಲ್ಲಿ ಹಿರಿಯರಾಗಿದ್ದರೂ ಕಿರಿಯ ಶಾಸಕರೂ ನಾಚುವಂತೆ ಯಡಿಯೂರಪ್ಪ ಅವರು ವೈರಸ್‌ ನಿಯಂತ್ರಣ ಸಂದರ್ಭದಲ್ಲಿ ಕೆಲಸ ಮಾಡಿದ್ದಾರೆ. ಅದು ಬಿಜೆಪಿ ಹೈಕಮಾಂಡ್ ಗಮನಕ್ಕೂ ಬಂದಿದೆ. ಆದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂಡಾಯ ಸಭೆ ಕುರಿತಂತೆ ಸಿಎಂ ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದಾರೆ.

ಬಿಎಸ್‌ವೈಗೆ ಶಾ ಕರೆ

ಬಿಎಸ್‌ವೈಗೆ ಶಾ ಕರೆ

ರಾಜ್ಯದಲ್ಲಿ ಬಿಜೆಪಿ ಹಿರಿಯ ಶಾಸಕರ ಬಂಡಾಯ ಸಭೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಂ ಯಡಿಯೂರಪ್ಪ ಅವರೊಂದಿಗೆ ದೂರವಾಣಿಯಲ್ಲಿ ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿ ಸಿಎಂ ಸಚಿವಾಲಯದಿಂದಲೇ ಬಂದಿದೆ.

ಬಿಜೆಪಿ ಬಂಡಾಯ ಶಾಸಕರ ಸಭೆ ಕುರಿತು ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಅಮಿತ್ ಶಾ ಅವರು, ಕೊರೊನಾ ವೈರಸ್ ಕಂಟ್ರೊಲ್ ಬಗ್ಗೆ ಗಮನ ಕೊಡಿ. ಪಕ್ಷದ ವಿಷಯ ಬಿಡಿ. ಇಡೀ ದೇಶದಲ್ಲಿ ಕೊರೋನಾ ಸಮಸ್ಯೆ ಎದುರಾಗಿದೆ. ಕರ್ನಾಟಕ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತವನ್ನು ನಾವು ನೋಡಿಕೊಳ್ಳುತ್ತೇವೆ. ಪಕ್ಷದ ವಿಷಯದ ಬಗ್ಗೆ ತಲೆ ಕೆಡಸಿಕೊಳ್ಳಬೇಡಿ ಎಂದು ದೂರವಾಣಿ ಕರೆ ಮಾಡಿ ಅಭಯ ಹಸ್ತ ಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ.

ಅಂದರೆ ರಾಜ್ಯಸಭಾ ಚುನಾವಣೆ ಹಾಗೂ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂಬುದನ್ನು ಅಮಿತ್ ಶಾ ಪರೋಕ್ಷವಾಗಿ ಯಡಿಯೂರಪ್ಪ ಅವರಿಗೆ ಹೇಳಿದಂತಾಗಿದೆ.

ಒಂದು ದಿನವೂ ಕಡಿಮೆ ಆಗಲ್ಲ

ಒಂದು ದಿನವೂ ಕಡಿಮೆ ಆಗಲ್ಲ

ಬಂಡಾಯದ ಬೆನ್ನಲ್ಲೆ ಇವತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗೃಹಸಚಿವ ಆರ್. ಅಶೊಕ್ ಭೇಟಿ ಮಾಡಿ ಚರ್ಚಿಸಿದ್ದಾರೆ. ಅಮಿತ್ ಶಾ ಅವರು ದೂರವಾಣಿ ಕರೆ ಮಾಡಿ ಸಿಎಂ ಜೊತೆಗೆ ಮಾತನಾಡುತ್ತಿದ್ದಂತೆಯೆ ಅಚಿವ ಅಶೋಕ್‌ ಅವರನ್ನು ಸಿಎಂ ಯಡಿಯೂರಪ್ಪ ಕರೆಯಿಸಿಕೊಂಡು ಚರ್ಚೆ ಮಾಡಿರುವುದು ಕುತೂಹಲ ಮೂಡಿಸಿದೆ.


ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿರುವ ಕಂದಾಯ ಸಚಿವ ಆರ್. ಅಶೋಕ್, ನಾಲ್ಕೈದು ಜನ ಒಟ್ಟಿಗೆ ಸೇರಿ ಊಟ ಮಾಡಿದರೆ ಅದು ಬಂಡಾಯ ಸಭೆ ಅಲ್ಲ. ಉಳಿದ ಮೂರು ವರ್ಷಗಳಿಗೆ ಒಂದು ದಿನವೂ ಕಡಿಮೆ ಇಲ್ಲದಂತೆ ಯಡಿಯೂರಪ್ಪ ಅವರೆ ಮುಖ್ಯಮಂತ್ರಿ ಆಗಿರುತ್ತಾರೆ. ಉಳಿದ ಅವಧಿಗೆ ಒಂದು ದಿನವೂ ಕಡಿಮೆ ಆಗಲ್ಲ. ನನಗೆ ಆ ಭರವಸೆ ಇದೆ, ರಾಜ್ಯದ ಜನರಿಗೂ ಇದೆ, ನಮ್ಮ ಶಾಸಕರಿಗೂ ಇದೆ. ಯಡಿಯೂರಪ್ಪ ರಾಜಾಹುಲಿ, ಯಾವಾತ್ತಿದ್ರೂ ರಾಜಾಹುಲಿನೇ ಎಂದಿದ್ದಾರೆ.

English summary
Union Home Minister Amit Shah telephones Karnataka Chief Minister Yeddyurappa after BJP insurgency meeting,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X