ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಕೇಂದ್ರದ ಉಡುಗೊರೆ; ಮಹದಾಯಿ ಯೋಜನೆ ಅಧಿಸೂಚನೆ ಪ್ರಕಟ

|
Google Oneindia Kannada News

ಬೆಂಗಳೂರು, ಫೆಬ್ರವರಿ 27 : ಮಹದಾಯಿ ಯೋಜನೆ ವಿಚಾರದಲ್ಲಿ ಕರ್ನಾಟಕಕ್ಕೆ ಜಯ ಸಿಕ್ಕಿದೆ. ಸುಪ್ರೀಂಕೋರ್ಟ್ ಆದೇಶದಂತೆ ಮಹದಾಯಿ ಯೋಜನೆ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ.

ಗುರುವಾರ ರಾತ್ರಿ ಕೇಂದ್ರ ಸರ್ಕಾರ ಕರ್ನಾಟಕ ಮಹಾದಾಯಿ ಯೋಜನೆ ಅನ್ವಯ 13.42 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದೆ.

ಮಹದಾಯಿ ವಿವಾದ; ಮತ್ತೆ ಕ್ಯಾತೆ ತೆಗೆದ ಗೋವಾ ಕಾಂಗ್ರೆಸ್ಮಹದಾಯಿ ವಿವಾದ; ಮತ್ತೆ ಕ್ಯಾತೆ ತೆಗೆದ ಗೋವಾ ಕಾಂಗ್ರೆಸ್

ಫೆಬ್ರವರಿ 20ರಂದು ಸುಪ್ರೀಂಕೋರ್ಟ್ ಮಹಾದಾಯಿ ಯೋಜನೆ ಕುರಿತು ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ವಿವಾದದ ಕುರಿತು ಬಾಕಿ ಇರುವ ಅರ್ಜಿಗಳ ವಿಚಾರಣೆಯನ್ನು ಜುಲೈ 15ರಿಂದ ನಿರಂತರವಾಗಿ ನಡೆಸುವುದಾಗಿ ಹೇಳಿತ್ತು.

ಮಹದಾಯಿ ವಿವಾದ: ಕೇಂದ್ರ ಸಚಿವರಿಗೆ ಸೆಡ್ಡು ಹೊಡೆದ ಗೋವಾ ಬಿಜೆಪಿ ಸಿಎಂಮಹದಾಯಿ ವಿವಾದ: ಕೇಂದ್ರ ಸಚಿವರಿಗೆ ಸೆಡ್ಡು ಹೊಡೆದ ಗೋವಾ ಬಿಜೆಪಿ ಸಿಎಂ

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಮಹದಾಯಿ ವಿವಾದವಿದೆ. ವಿವಾದದ ಬಗ್ಗೆ ಸುಧೀರ್ಘ ವಿಚಾರಣೆ ನಡೆಸಿದ್ದ ಮಹದಾಯಿ ನ್ಯಾಯಾಧೀಕರಣ 2018ರಲ್ಲಿ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿತ್ತು. ಕರ್ನಾಟಕಕ್ಕೆ 13.42 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು.

ಮಹದಾಯಿ ವಿವಾದ; ಗೋವಾ ಸಿಎಂ ಸ್ಫೋಟಕ ಹೇಳಿಕೆಮಹದಾಯಿ ವಿವಾದ; ಗೋವಾ ಸಿಎಂ ಸ್ಫೋಟಕ ಹೇಳಿಕೆ

ಪ್ರಹ್ಲಾದ್ ಜೋಶಿ ಸಂತಸ

ಪ್ರಹ್ಲಾದ್ ಜೋಶಿ ಸಂತಸ

ಮಹದಾಯಿ ಯೋಜನೆ ಕುರಿತು ಅಧಿಸೂಚನೆ ಹೊರಡಿಸಿದ್ದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. "ಬಹು ನಿರೀಕ್ಷಿತ ಮಹದಾಯಿ ನದಿ ನೀರಿನ ಕುರಿತಾದ ಗೆಜೆಟ್ ಹೊರಡಿಸುವ ಕುರಿತು ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ನ ಆದೇಶದ ನಂತರ ಪ್ರತಿನಿತ್ಯ ನಾನು ಕೇಂದ್ರದ ನೀರಾವರಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಈ ಗೆಜೆಟ್ ಹೊರಡಿಸುವ ವಿಷಯ ಕುರಿತು ಸಾಧ್ಯವಾದಷ್ಟು ಬೇಗನೆ ಗೆಜೆಟ್ ಹೊರಡಿಸಲು ಅವರಲ್ಲಿ ವಿನಂತಿಸುತ್ತಿದ್ದೆನು. ಅದರ ಪರಿಣಾಮವಾಗಿ ಇಂದು ಕೇಂದ್ರ ಸರ್ಕಾರ ಗೆಜೆಟ್ ಹೊರಡಿಸಿದ್ದು ನಮಗೆಲ್ಲರಿಗೂ ಅತಿ ಸಂತಸದ ವಿಷಯ" ಎಂದು ಹೇಳಿದ್ದಾರೆ.

ಗೋವಾದ ಸರ್ಕಾರದ ಕ್ಯಾತೆ

ಗೋವಾದ ಸರ್ಕಾರದ ಕ್ಯಾತೆ

ಮಹದಾಯಿ ವಿವಾದಕ್ಕೆ ಕರ್ನಾಟಕದ ಪಕ್ಕದ ಗೋವಾ ರಾಜ್ಯ ಕ್ಯಾತೆ ತೆಗೆದಿದೆ. ಗೋವಾ ಜನರ ಜೀವನದಿಯಾದ ಮಹದಾಯಿ ನೀರನ್ನು ತಿರುಗಿಸಲು ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿದೆ. ಯೋಜನೆಯಿಂದಾಗಿ ಗೋವಾದ ನೈಸರ್ಗಿಕ ವೈವಿದ್ಯತೆಗೆ ಧಕ್ಕೆಯಾಗಲಿದೆ ಎಂದು ರಾಜ್ಯ ಆತಂಕ ವ್ಯಕ್ತಪಡಿಸಿದೆ.

ಮಹದಾಯಿ ನ್ಯಾಯಾಧೀಕರಣದ ತೀರ್ಪು

ಮಹದಾಯಿ ನ್ಯಾಯಾಧೀಕರಣದ ತೀರ್ಪು

ಮೂರು ರಾಜ್ಯಗಳ ನಡುವೆ ಮಹದಾಯಿ ಯೋಜನೆ ವಿಚಾರದಲ್ಲಿ ಒಮ್ಮತವಿಲ್ಲ. 2018ರ ಆಗಸ್ಟ್‌ನಲ್ಲಿ ಮಹದಾಯಿ ನ್ಯಾಯಾಧೀಕರಣ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದೆ. ನ್ಯಾಯಮೂರ್ತಿ ಜೆ. ಎಂ. ಪಾಂಚಾಲ್ ನೇತೃತ್ವದ ಪೀಠ ಕರ್ನಾಟಕಕ್ಕೆ 13.42 ಟಿಎಂಸಿ, ಗೋವಾಕ್ಕೆ 24 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 1.30 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ.

ಕರ್ನಾಟಕದ ಬೇಡಿಕೆ ಏನು?

ಕರ್ನಾಟಕದ ಬೇಡಿಕೆ ಏನು?

ಮಹದಾಯಿ ನ್ಯಾಯಾಧೀಕರಣದ ಮುಂದೆ ಕರ್ನಾಟಕ ಹೆಚ್ಚಿನ ನೀರು ಬೇಕು ಎಂದು ಬೇಡಿಕೆ ಇಟ್ಟಿತ್ತು. ಹುಬ್ಬಳ್ಳಿ-ಧಾರವಾಡ. ಬೆಳಗಾವಿ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು 7.5 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು. ಆದರೆ, ನ್ಯಾಯಾಧೀಕರಣ ಇದನ್ನು ತಳ್ಳಿ ಹಾಕಿತ್ತು. ಕುಡಿಯುವ ನೀರಿನ ಉದ್ದೇಶಕ್ಕೆ 5.5 ಟಿಎಂಸಿ ನೀರನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ.

English summary
After Supreme Court direction union government issued gazette notification for Mahadayi project of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X