ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸಿಜನ್ ಪೂರೈಕೆ; ಕರ್ನಾಟಕಕ್ಕೆ ಕೊಡುಗೆ ಕೊಟ್ಟ ಕೇಂದ್ರ

|
Google Oneindia Kannada News

ನವದೆಹಲಿ, ಮೇ 10; ಕರ್ನಾಟಕದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಅಗತ್ಯವಿದೆ. ಆದರೆ ಆಕ್ಸಿಜನ್ ಸಾಗಾಟ ಮಾಡುವುದು ರಾಜ್ಯದ ಪಾಲಿಗೆ ಸವಾಲಾಗಿದೆ. ಆಮ್ಲಜನಕ ತುರ್ತು ಸಾಗಾಟ ವ್ಯವಸ್ಥೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮತ್ತಷ್ಟು ಸಹಾಯವನ್ನು ಮಾಡಿದೆ.

ಕರ್ನಾಟಕದಲ್ಲಿ ಆಕ್ಸಿಜನ್ ಪೂರೈಕೆ ಜವಾಬ್ದಾರಿ ಹೊತ್ತಿರುವ ಸಚಿವ ಜಗದೀಶ್ ಶೆಟ್ಟರ್ ಸೋಮವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಆಕ್ಸಿಜನ್ ಸಾಗಾಟಕ್ಕಾಗಿಯೇ ಕೇಂದ್ರ ಸರ್ಕಾರ ರಾಜ್ಯಕ್ಕೆ 4 ಟ್ಯಾಂಕರ್‌ಗಳನ್ನು ನೀಡಿದೆ.

ಮೇ 11ರಂದು ಬೆಂಗಳೂರಿಗೆ ಬರಲಿದೆ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್ ಮೇ 11ರಂದು ಬೆಂಗಳೂರಿಗೆ ಬರಲಿದೆ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್

ಫೇಸ್ ಬುಕ್‌ನಲ್ಲಿ ಜಗದೀಶ್ ಶೆಟ್ಟರ್, "ಕೇಂದ್ರ ಸರ್ಕಾರವು ಐ. ಒ. ಸಿ. ಎಲ್ ಕಂಪನಿಯ 20 ಎಮ್. ಟಿ. ಸಾಮರ್ಥ್ಯದ 4 ಟ್ಯಾಂಕರ್ ಗಳನ್ನು ನೀಡಿದ್ದು, ಇವು ಜೆ. ಎಸ್. ಡಬ್ಲ್ಯೂ ಘಟಕದಿಂದ ಪ್ರತಿನಿತ್ಯ ಅನೀಲಿಕೃತ ಆಮ್ಲಜನಕವನ್ನು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲು ನೆರವಾಗಲಿವೆ" ಎಂದು ಹೇಳಿದ್ದಾರೆ.

ಆಪರೇಷನ್ ಸಮುದ್ರ ಸೇತು: ವಿದೇಶದಿಂದ ಆಕ್ಸಿಜನ್ ಹೊತ್ತುಬಂದ ಭಾರತೀಯ ನೌಕಾಪಡೆ ಆಪರೇಷನ್ ಸಮುದ್ರ ಸೇತು: ವಿದೇಶದಿಂದ ಆಕ್ಸಿಜನ್ ಹೊತ್ತುಬಂದ ಭಾರತೀಯ ನೌಕಾಪಡೆ

Union Govt Allotted 4 Oxygen Carrying Tankers For Karnataka

ಕೇಂದ್ರ ಸರ್ಕಾರ ಕರ್ನಾಟಕಕ್ಕೆ 4, ಪಂಜಾಬ್‌ಗೆ 2, ಆಂಧ್ರ ಪ್ರದೇಶಕ್ಕೆ 2, ಉತ್ತರಾಖಂಡ್‌ಗೆ 2 ಮತ್ತು ಹರ್ಯಾಣ ರಾಜ್ಯಕ್ಕೆ 2 ಟ್ಯಾಂಕರ್‌ಗಳನ್ನು ನೀಡಿದೆ. ಮೇ 15ರಂದು ಈ ಟ್ಯಾಂಕರ್‌ಗಳು ನಿಗದಿಪಡಿಸಿದ ರಾಜ್ಯಕ್ಕೆ ಆಗಮಿಸಲಿವೆ.

ಉಚಿತವಾಗಿ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಮನೆಗೆ ತರಲಿದೆ ಓಲಾ ಉಚಿತವಾಗಿ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಮನೆಗೆ ತರಲಿದೆ ಓಲಾ

ಈ ಟ್ಯಾಂಕರ್‌ಗಳ ಮೂಲಕ ಆಸ್ಪತ್ರೆಗಳಿಗೆ ಸಕಾಲಕ್ಕೆ ಆಕ್ಸಿಜನ್ ಪೂರೈಸಲು ಅನುಕೂಲವಾಗಲಿದೆ. ಕೋವಿಡ್ ಪರಿಸ್ಥಿತಿ ನಿಭಾಯಿಸಲು ಸೂಕ್ತ ಮಾರ್ಗದರ್ಶನ ಹಾಗೂ ಸಹಕಾರ ‌ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನ್ನಡಿಗರ ಪರವಾಗಿ ಜಗದೀಶ್ ಶೆಟ್ಟರ್ ಧನ್ಯವಾದಗಳನ್ನು ತಿಳಿಸಿದ್ದಾರೆ.

Recommended Video

#Covid19Updates, Bengaluru: 24 ಗಂಟೆಯಲ್ಲಿ 15,000 ಸೋಂಕಿತರು ಗುಣಮುಖ | Oneindia Kannada

ವಿವಿಧ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ. ಸುಮಾರು 120 ಟನ್ ಆಕ್ಸಿಜನ್ ಹೊತ್ತ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು ಜೆಮ್‌ಶೆಡ್‌ಪುರ್‌ನಿಂದ ಸೋಮವಾರ ಹೊರಟಿದ್ದು, ಮಂಗಳವಾರ ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಬರಲಿದೆ. ರಾಜ್ಯಕ್ಕೆ ಬರುತ್ತಿರುವ ಮೊದಲ ರೈಲು ಇದಾಗಿದೆ.

English summary
Union govt allotted IOCL company's 4 oxygen-carrying tankers to Karnataka. Each one has 20 MT capacity. These tankers will be supplying medical oxygen to hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X