ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಂಪುಟ ವಿಸ್ತರಣೆ: ರಾಜ್ಯದ ಈ ಇಬ್ಬರು ಸಂಸದರ ಸೇರ್ಪಡೆ ಖಚಿತ

|
Google Oneindia Kannada News

ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಎರಡು ವರ್ಷದ ನಂತರ ಕೇಂದ್ರ ಸಂಪುಟ ಪುನಾರಚನೆಗೆ/ವಿಸ್ತರಣೆಗೆ ವೇದಿಕೆ ಸಿದ್ದವಾಗುತ್ತಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಸಂಬಂಧ ಸರಣಿ ಸಭೆಯನ್ನು ನಡೆಸುತ್ತಿದ್ದಾರೆ.

ಮುಂದಿನ ವರ್ಷ ಏಳು ರಾಜ್ಯಗಳ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ, ಅತ್ಯಂತ ಪ್ರಮುಖವಾದ ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳು ಕೂಡಾ ಸೇರಿದೆ. ಇದರ ಜೊತೆಗೆ, ಪಂಜಾಬ್, ಹಿಮಾಚಲ ಪ್ರದೇಶಗಳ ಚುನಾವಣೆಯೂ ನಡೆಯಬೇಕಿದೆ.

ಸಂಪುಟ ಪುನಾರಚನೆ ವದಂತಿ ನಡುವೆ ಸಚಿವರೊಂದಿಗೆ ಮೋದಿ ಸರಣಿ ಸಭೆಸಂಪುಟ ಪುನಾರಚನೆ ವದಂತಿ ನಡುವೆ ಸಚಿವರೊಂದಿಗೆ ಮೋದಿ ಸರಣಿ ಸಭೆ

ಈ ನಡುವೆ, ರಾಜ್ಯದಲ್ಲಿನ ಯಾವ ಸಂಸದರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಲಭಿಸಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿಯವರ ನಿಧನದಿಂದ ತೆರವಾದ ಸಚಿವ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗಲಿದೆ.

ಸದ್ಯ, ಕೇಂದ್ರ ಸಂಪುಟದಲ್ಲಿ ರಾಜ್ಯದಿಂದ ಡಿ.ವಿ.ಸದಾನಂದ ಗೌಡ ಮತ್ತು ಪ್ರಲ್ಹಾದ್ ಜೋಶಿ ಇಬ್ಬರು ಮಾತ್ರ ಇದ್ದಾರೆ. 25ಜನ ಸಂಸದರು ರಾಜ್ಯದಿಂದ ಆಯ್ಕೆಯಾದರೂ, ಕರ್ನಾಟಕಕ್ಕೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎನ್ನುವ ಕೂಗು ಇದ್ದೇ ಇದೆ.

ಕೊರೊನಾ ನಿರ್ವಹಣೆ: ಅನುಮೋದನೆ ಕುಸಿದರೂ ಇವರೇ ವಿಶ್ವದ ಜನಪ್ರಿಯ ನಾಯಕಕೊರೊನಾ ನಿರ್ವಹಣೆ: ಅನುಮೋದನೆ ಕುಸಿದರೂ ಇವರೇ ವಿಶ್ವದ ಜನಪ್ರಿಯ ನಾಯಕ

 ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ವರುಣ್ ಗಾಂಧಿ ಸೇರ್ಪಡೆ

ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ವರುಣ್ ಗಾಂಧಿ ಸೇರ್ಪಡೆ

ಕರ್ನಾಟಕದಿಂದ ಹೊರತಾಗಿ ಬಿಜೆಪಿ ಸೇರಿರುವ ಮಧ್ಯಪ್ರದೇಶದ ಪ್ರಭಾವೀ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಕೇಂದ್ರ ಸಂಪುಟ ಸೇರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದರ ಜೊತೆಗೆ, ಒಂದು ಕಾಲದಲ್ಲಿ ಪಕ್ಷದ ಫೈರ್ ಬ್ರಾಂಡ್ ಆಗಿದ್ದ ವರುಣ್ ಗಾಂಧಿ ಕೂಡಾ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

 ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ

ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ

ರಾಜ್ಯದಿಂದ ಹಲವು ಸಂಸದರ ಹೆಸರು ಕೇಳಿ ಬರುತ್ತಿದೆ. ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹೆಸರು ಕೇಳಿ ಬರುತ್ತಿದೆ. ಆದರೆ, ಈ ಇಬ್ಬರು ಮುಖಂಡರು ಆಯ್ಕೆಯಾಗುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ.

 ಲಿಂಗಾಯತ ಸಮುದಾಯದ ಶಿವಕುಮಾರ್ ಉದಾಸಿ ಹೆಸರು ಮಂಚೂಣಿಯಲ್ಲಿ

ಲಿಂಗಾಯತ ಸಮುದಾಯದ ಶಿವಕುಮಾರ್ ಉದಾಸಿ ಹೆಸರು ಮಂಚೂಣಿಯಲ್ಲಿ

ಹಾವೇರಿಯಿಂದ ಮೂರು ಬಾರಿ ಆಯ್ಕೆಯಾಗಿರುವ, ಲಿಂಗಾಯತ ಸಮುದಾಯದ ಶಿವಕುಮಾರ್ ಉದಾಸಿ ಹೆಸರು ಮಂಚೂಣಿಯಲ್ಲಿ ಕೇಳಿ ಬರುತ್ತಿದೆ. ಸಂಸದೀಯ ಸ್ಥಾಯೀ ಸಮಿತಿಯಲ್ಲಿ ಸಕ್ರಿಯರಾಗಿರುವ ಉದಾಸಿ ಮೋದಿ ಸಂಪುಟಕ್ಕೆ ಆಯ್ಕೆಯಾಗಬಹುದು.

 ಉದಾಸಿ ಜೊತೆಗೆ ಕಲಬುರಗಿ ಸಂಸದ ಉಮೇಶ್ ಜಾಧವ್ ಹೆಸರು

ಉದಾಸಿ ಜೊತೆಗೆ ಕಲಬುರಗಿ ಸಂಸದ ಉಮೇಶ್ ಜಾಧವ್ ಹೆಸರು

ಉದಾಸಿ ಜೊತೆಗೆ ಕಲಬುರಗಿ ಸಂಸದ ಉಮೇಶ್ ಜಾಧವ್ ಹೆಸರು ಕೂಡಾ ಕೇಳಿ ಬರುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ಮಣಿಸಿದ್ದ ಜಾಧವ್, ಲಂಬಾಣಿ ಸಮುದಾಯದ ಪ್ರಭಾವೀ ಮುಖಂಡರಾಗಿದ್ದಾರೆ.

Recommended Video

ನಮ್ಮ ದೇಶ ಕಾಂಗ್ರೆಸ್ಸ್ ಕೈಗೆ ಸಿಕ್ಕಾಗ ಹೇಗಿತ್ತು? ಈಗ ಹೇಗಾಗಿದೆ ಗೊತ್ತಾ? | Oneindia Kannada

English summary
Union Cabinet expansion, 2 Karnataka MPs to get Minister Post
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X