ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ ಬಳಿಕ ಕರ್ನಾಟಕಕ್ಕೆ ಉಡುಗೊರೆ ಕೊಟ್ಟ ಕೇಂದ್ರ

|
Google Oneindia Kannada News

ಬೆಂಗಳೂರು, ಡಿಸೆಂಬರ್ 11 : 15 ಕ್ಷೇತ್ರದ ಉಪ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕರ್ನಾಟಕದ ಬಿಜೆಪಿ ಸರ್ಕಾರ ಸ್ಪಷ್ಟಬಹುಮತ ಪಡೆದಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಉಡುಗೊರೆ ನೀಡಿದ್ದು, ಪ್ರತಿಪಕ್ಷಗಳ ಬಾಯಿ ಮುಚ್ಚಿಸಿದೆ.

ಕರ್ನಾಟಕದ ವಿವಿಧ ರಸ್ತೆ ಹಾಗೂ ಹೆದ್ದಾರಿ ಯೋಜನೆಗಳಿಗೆ 50 ಸಾವಿರ ಕೋಟಿ ರೂ. ಅನುದಾನವನ್ನು ನೀಡಲು ಕೇಂದ್ರ ಸರ್ಕಾರ ಒಪ್ಪಿದೆ. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಬೆಂಗಳೂರಿನಲ್ಲಿಯೇ ವಿವಿಧ ಯೋಜನೆಗೆ ಒಪ್ಪಿಗೆ ಕೊಟ್ಟಿದ್ದಾರೆ.

ಹೆದ್ದಾರಿ ಟೋಲ್‌ಗಳ ಬೃಹತ್ ಭ್ರಷ್ಟಾಚಾರ ತೆರೆದಿಟ್ಟ ವಕೀಲರುಹೆದ್ದಾರಿ ಟೋಲ್‌ಗಳ ಬೃಹತ್ ಭ್ರಷ್ಟಾಚಾರ ತೆರೆದಿಟ್ಟ ವಕೀಲರು

ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ನಿತಿನ್ ಗಡ್ಕರಿ ಸಭೆ ನಡೆಸಿ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಹಲವು ಯೋಜನೆಗಳಿಗೆ ಒಪ್ಪಿಗೆ ಸೂಚಿಸಿದರು. ಇದರಲ್ಲಿ ಶಿವಮೊಗ್ಗ-ತುಮಕೂರು ನಡುವಿನ 4 ಪಥದ ರಸ್ತೆ ಯೋಜನೆಯೂ ಸೇರಿದೆ.

 ಹುಬ್ಬಳ್ಳಿಯಲ್ಲಿ ಧೂಳೋ ಧೂಳು; ರಸ್ತೆ ಕಥೆ ಕೇಳೋರು ಯಾರು? ಹುಬ್ಬಳ್ಳಿಯಲ್ಲಿ ಧೂಳೋ ಧೂಳು; ರಸ್ತೆ ಕಥೆ ಕೇಳೋರು ಯಾರು?

ಕರ್ನಾಟಕದಲ್ಲಿ ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಹೆದ್ದಾರಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ.

ಕೊಳ್ಳೇಗಾಲ-ಕಲ್ಲಿಕೋಟೆ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ವಿರೋಧ ಕೊಳ್ಳೇಗಾಲ-ಕಲ್ಲಿಕೋಟೆ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ವಿರೋಧ

ಯಾವ-ಯಾವ ಯೋಜನೆಗಳು

ಯಾವ-ಯಾವ ಯೋಜನೆಗಳು

ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ ಬಳಿಕ ನಿತಿನ್ ಗಡ್ಕರಿ ಅವರು ಪುಣೆ-ಬೆಂಗಳೂರು ಸಂಪರ್ಕಿಸುವ 6 ಪಥದ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದಾರೆ. ಯೋಜನೆಯ ವೆಚ್ಚ ಎಷ್ಟಾಗಲಿದೆ? ಎಂಬುದು ಶೀಘ್ರದಲ್ಲಿಯೇ ತಿಳಿಯಲಿದೆ.

ಸೋಲಾಪುರ-ಕರ್ನೂಲ್ ಹೆದ್ದಾರಿ

ಸೋಲಾಪುರ-ಕರ್ನೂಲ್ ಹೆದ್ದಾರಿ

1 ಲಕ್ಷ ಕೋಟಿ ರೂ. ಯೋಜನೆಗಳ ಪೈಕಿ 50 ಸಾವಿರ ಕೋಟಿ ರೂ. ಮೊತ್ತದ ಯೋಜನೆಗೆ ನಿತಿನ್ ಗಡ್ಕರಿ ಬೆಂಗಳೂರಿನಲ್ಲಿ ಅನುಮೋದನೆ ನೀಡಿದ್ದಾರೆ. ಕರ್ನೂಲ್-ಹುಬ್ಬಳ್ಳಿ-ಸೊಲ್ಲಾಪುರ ಚುತುಷ್ಪಥ ಎಕ್ಸ್‌ಪ್ರೆಸ್ ಯೋಜನೆ ಇದರಲ್ಲಿ ಸೇರಿದೆ.

ಶಿವಮೊಗ್ಗ-ತುಮಕೂರು ರಸ್ತೆ

ಶಿವಮೊಗ್ಗ-ತುಮಕೂರು ರಸ್ತೆ

ಬಿ. ಎಸ್. ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಿಂದ ತುಮಕೂರಿಗೆ ಸಂಪರ್ಕಿಸುವ ರಸ್ತೆಯನ್ನು 4 ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಒಪ್ಪಿಗೆ ನೀಡಲಾಗಿದೆ. ಈ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, 3269 ಕೋಟಿ ವೆಚ್ಚದಲ್ಲಿ 220 ಕಿ. ಮೀ. ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತದೆ.

ವಿವಿಧ ಯೋಜನೆಗಳು

ವಿವಿಧ ಯೋಜನೆಗಳು

ಕೇಂದ್ರ ಸರ್ಕಾರ ಸಂಪಾಜೆ, ಶಿರಾಡಿ, ಚಾರ್ಮಾಡಿ ಮತ್ತು ಆಗುಂಬೆ ಘಾಟ್ ರಸ್ತೆಗಳ ಪ್ರವಾಹ ಪೀಡಿತ ಕಾಮಗಾರಿಗಳಿಗೆ 128 ಕೋಟಿ ರೂ. ಮಂಜೂರು ಮಾಡಿದೆ. 2019-20ನೇ ಸಾಲಿನ 'ಕೇಂದ್ರ ರಸ್ತೆ ನಿಧಿ' ಯೋಜನೆಗಳಿಗೆ ತನ್ನ ಪಾಲಾಗಿ ಸರ್ಕಾರದಿಂದ ರೂ.395 ಕೋಟಿ ಹಣ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ.

English summary
Union government approved for the 5 thousand core various road and national highway projects in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X