ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್: ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿಗೆ ಹೇಳಿದ್ದೇನು?

|
Google Oneindia Kannada News

Recommended Video

Union Budget 2020 : ಬಜೆಟ್ ನಂತರ ಸುದ್ದಿಗೋಷ್ಠಿ ನಡೆಸಿದ ನಿರ್ಮಲಾ ಸೀತಾರಾಮನ್ | Nirmalaseetharam | Pressmeet

ಬೆಂಗಳೂರು, ಫೆ. 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2020-2021ನೇ ಸಾಲಿನ ಆಯವ್ಯಯ ಜನಸ್ನೇಹಿಯಾಗಿದ್ದು, ಕೃಷಿಕರು, ಬಡವರ ಪರವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ. ದೇಶಕ್ಕೆ ಅತ್ಯುತ್ತಮ ಬಜೆಟ್ ಕೊಟ್ಟಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದಿಸಿದ್ದಾರೆ.

ಮೊದಲನೇ ಬಾರಿಗೆ ದೇಶದ ಇತಿಹಾಸದಲ್ಲಿ ರೈತರಿಗೆ, ಬಡವರಿಗೆ ಮತ್ತು ಹಳ್ಳಿಗಳಿಗೆ ಇಷ್ಟೊಂದು ಆದ್ಯತೆ ನೀಡಿದ ಆಯವ್ಯಯ ಎಂದೂ ಬಂದಿಲ್ಲ. ರೈತರಿಗೆ ಈ ಆಯವ್ಯಯ ವರದಾನವಾಗಲಿದೆ.

2022ರಲ್ಲಿ ರೈತರ ಆದಾಯ ದ್ವಿಗುಣ

2022ರಲ್ಲಿ ರೈತರ ಆದಾಯ ದ್ವಿಗುಣ

2022ರಲ್ಲಿ ರೈತರ ಆದಾಯ ದ್ವಿಗುಣ ಮಾಡುವ ಗುರಿ ಸಾಧನೆಗೆ ಈ ಆಯವ್ಯಯದಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಪೂರಕವಾಗಿವೆ. 100 ಜಲಕ್ಷಾಮ ಜಿಲ್ಲೆಗಳಲ್ಲಿ ವಿಶೇಷ ಯೋಜನೆ ರೈತರಿಗೆ ಅನುಕೂಲವಾಗಲಿದೆ. ವಿದ್ಯುತ್ ಸ್ವಾವಲಂಬನೆ ನಿಟ್ಟಿನಲ್ಲಿ ಬಂಜರು ಭೂಮಿಯಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ, 20 ಲಕ್ಷ ರೈತರಿಗೆ ಸೌರ ಪಂಪ್‍ಸೆಟ್‌ಗಳನ್ನು ಒದಗಿಸಲು ನೆರವು, ಜಮೀನುಗಳಲ್ಲಿ ರೈತರು ರಸಾಯನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡುವುದು ಮೊದಲಾದ ಕಾರ್ಯಕ್ರಮಗಳು ಕೃಷಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ. ಕೃಷಿ ಉತ್ಪನ್ನಗಳ ಸಾಗಾಣಿಕೆ ಮತ್ತು ರಫ್ತು ಮಾಡಲು ಕಿಸಾನ್ ರೈಲ್, ಕಿಸಾನ್ ಉಡಾನ್ ಯೋಜನೆ ಸಹಾಯಕವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

"ಕೇಂದ್ರ ಬಜೆಟ್ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ನಿರಾಸೆ'

2.83 ಲಕ್ಷ ಕೋಟಿ ರೂ. ದೊಡ್ಡ ಬಜೆಟ್

2.83 ಲಕ್ಷ ಕೋಟಿ ರೂ. ದೊಡ್ಡ ಬಜೆಟ್

2.83 ಲಕ್ಷ ಕೋಟಿ ರೂ. ದೊಡ್ಡ ಬಜೆಟ್ ಮಂಡನೆಯನ್ನು ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ. ಕೃಷಿ ವಲಯಕ್ಕೆ ಆದ್ಯತೆಯನ್ನು ಕೊಡಲಾಗಿದೆ. ಕ್ಷಯ ರೋಗ ನಿವಾರಣೆ, ಜನ ಔಷಧಿ ಕೇಂದ್ರಗಳ ವಿಸ್ತರಣೆ, ಆರೋಗ್ಯ ಸೇವೆ ಸುಧಾರಣೆಗೆ ಆದ್ಯತೆ, ವೈದ್ಯಕೀಯ ಶಿಕ್ಷಣಕ್ಕೆ ಒತ್ತು ನೀಡಿರುವುದು ಶ್ಲಾಘನೀಯ.

ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹಾಗೂ ವಿದೇಶಿ ಸಾಲ ಪಡೆಯಲು ಅನುಮತಿ ದೊರೆತಿರುವುದು ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬಹಳ ಅನುಕೂಲವಾಗಲಿದೆ. ಅಲ್ಲದೆ ಆನ್‍ಲೈನ್ ಶಿಕ್ಷಣ ವ್ಯವಸ್ಥೆಯನ್ನು ಘೋಷಿಸಿರುವುದು ಒಂದು ಮಹತ್ವಪೂರ್ಣ ಬೆಳವಣಿಗೆಯಾಗಿದೆ. ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಜನೆಗೆ ಪೂರಕ ಆಯವ್ಯಯ ಇದಾಗಿದ್ದು, ಮಾನವ ಸಂಪನ್ಮೂಲ ಬಳಕೆಗೆ ಉತ್ತೇಜನಕಾರಿಯಾಗಿದೆ.

ಉತ್ಪಾದನಾ ವಲಯ, ರಫ್ತಿಗೆ ಉತ್ತೇಜನ

ಉತ್ಪಾದನಾ ವಲಯ, ರಫ್ತಿಗೆ ಉತ್ತೇಜನ

ಉತ್ಪಾದನಾ ವಲಯ, ರಫ್ತಿಗೆ ಉತ್ತೇಜನ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಒದಗಿಸಿರುವುದು ಹೂಡಿಕೆದಾರರಿಗೆ ಉತ್ತಮ ಸಂದೇಶ ನೀಡಿದೆ. 18600 ಕೋಟಿ ರೂ. ಅಂದಾಜು ವೆಚ್ಚದ ಬೆಂಗಳೂರು ಸಬರ್ಬನ್ ರೈಲಿಗೆ ಅನುಮೋದನೆ ನೀಡಿದ್ದು. ಭಾರತ ಸರ್ಕಾರದ ಶೇ. 20 ಪಾಲು, ರಾಜ್ಯ ಸರ್ಕಾರದ ಶೇ.20 ಪಾಲು ಹಾಗೂ ಶೇ. 60 ರ ಬಾಹ್ಯ ನೆರವಿನ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಲಾಗಿದ್ದು, ರಾಜಧಾನಿಯ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬಹಳ ಅನುಕೂಲವಾಗಿದೆ.

ದೇಶದ ಪ್ರಗತಿಗೆ ಅತ್ಯಂತ ಮಾರಕ ಕೇಂದ್ರ ಬಜೆಟ್ದೇಶದ ಪ್ರಗತಿಗೆ ಅತ್ಯಂತ ಮಾರಕ ಕೇಂದ್ರ ಬಜೆಟ್

ತೆರಿಗೆದಾರರಿಗೆ ಕಿರುಕುಳ ತಡೆ

ತೆರಿಗೆದಾರರಿಗೆ ಕಿರುಕುಳ ತಡೆ

ಆದಾಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆ ಇಳಿಕೆ, ತೆರಿಗೆದಾರರಿಗೆ ಕಿರುಕುಳ ತಡೆಯುವ ನಿಟ್ಟಿನಲ್ಲಿ "tax payers charter' ಕೇಂದ್ರದ ಮಹತ್ವಪೂರ್ಣ ಕ್ರಮಗಳಾಗಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಯಾವ ಇಲಾಖೆಗೆ ಎಷ್ಟು ಕೊಟ್ಟರು ನಿರ್ಮಲಾ ಸೀತಾರಾಮನ್ಯಾವ ಇಲಾಖೆಗೆ ಎಷ್ಟು ಕೊಟ್ಟರು ನಿರ್ಮಲಾ ಸೀತಾರಾಮನ್

ರಾಷ್ಟ್ರೀಯ ನೇಮಕಾತಿ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ನಾನ್ ಗಜೆಟೆಡ್ ಹುದ್ದೆಗಳ ನೇಮಕಾತಿಯನ್ನು ಸರಳಗೊಳಿಸುವ ಕೇಂದ್ರದ ತೀರ್ಮಾನವೂ ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.

English summary
Union Finance Minister Nirmala Sitharaman presented the Janasnehi Budget as a pro-poor budget for agriculture and the poor Said Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X