ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2021: ಕಾಂಗ್ರೆಸ್ಸಿನ ಆರ್.ವಿ ದೇಶಪಾಂಡೆ ಹೇಳಿದ್ದೇನು?

|
Google Oneindia Kannada News

ಕಾರವಾರ, ಫೆಬ್ರವರಿ 1: ಸೋಮವಾರ ಕೇಂದ್ರದ 2020-21ರ ಮುಂಗಡ ಪತ್ರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವುದು ಸ್ವಾಗತಾರ್ಹ ಎಂದು ಹಳಿಯಾಳ ಕಾಂಗ್ರೆಸ್ ಶಾಸಕ ಆರ್.ವಿ ದೇಶಪಾಂಡೆ ತಿಳಿಸಿದರು.

ಕೋವಿಡ್-19 ಹಾಗೂ ಲಾಕ್‌ಡೌನ್ ನಿಂದ ದೇಶದ ಪರಿಸ್ಥಿತಿಯು ವಿಭಿನ್ನವಾಗಿದ್ದು, ಆರ್ಥಿಕತೆಯನ್ನು ಚೇತರಿಸುವ ದೃಷ್ಟಿಯಲ್ಲಿ ಸಮಗ್ರ ದೃಷ್ಟಿಕೋನ ಒಳಗೊಂಡ ಬಜೆಟ್ ಇದಾಗಿದೆ. ಬಹುಶಃ ಕೋವಿಡ್‌ನಿಂದ ಕಲಿತ ಪಾಠವನ್ನು ಬಿಂಬಿಸುತ್ತದೆ. ಒಟ್ಟಾರೆಯಾಗಿ ಈ ಬಜೆಟ್ ಮೂಲಭೂತ ಸೌಕರ್ಯಗಳನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ ಬೆಳವಣಿಗೆಗೆ ಹೆಚ್ಚು ಒತ್ತುಕೊಡಲಾಗಿದ್ದು, ಇದರಿಂದ ಸುಸ್ಥಿರ ಅಭಿವೃದ್ಧಿ ಸಾಧಿಸಬಹುದಾಗಿದೆ ಎಂದಿದ್ದಾರೆ.

ಕೇಂದ್ರ ಬಜೆಟ್ 2021: ಜನಪರ ಹೊರತು ಜನಪ್ರಿಯ ಬಜೆಟ್ ಅಲ್ಲಕೇಂದ್ರ ಬಜೆಟ್ 2021: ಜನಪರ ಹೊರತು ಜನಪ್ರಿಯ ಬಜೆಟ್ ಅಲ್ಲ

ಕೃಷಿ, ಆರೋಗ್ಯ, ಮೂಲಸೌಕರ್ಯ, ನೈರ್ಮಲ್ಯ, ಶಿಕ್ಷಣ, ಉತ್ಪಾದನಾ ಕ್ಷೇತ್ರ ಮತ್ತು ಜವಳಿ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದ್ದು, ಖರ್ಚಿನ ಬಹುಪಾಲನ್ನು ಬಂಡವಾಳ ವೆಚ್ಚವಾಗಿ ಪರಿವರ್ತಿಸಿದ್ದು ಒಳ್ಳೆಯ ಬೆಳವಣಿಗೆ.

Union Budget 2021: What Did Congressman RV Deshpande Say?

ವಾಹನದ ಮಾಲಿನ್ಯ ನಿಯಂತ್ರಣ ತಡೆಗಟ್ಟುವ ಸಲುವಾಗಿ ಸ್ವಯಂ ಪ್ರೇರಿತವಾಗಿ ಹಳೆಯ ವಾಹನಗಳನ್ನು ಗುಜರಿಗೆ ಸೇರಿಸುವ ಕಾನೂನು, ಅಟೋ ಮೊಬೈಲ್ ಕ್ಷೇತ್ರ ಮತ್ತು ಪರಿಸರಕ್ಕೆ ವರದಾನವಾಗಬಹುದು.

2020-21 ನೇ ಸಾಲಿನಲ್ಲಿ ವಿತ್ತಿಯ ಕೊರೆತೆ ಜಿ.ಡಿ.ಪಿ.ಯ 9.5% ಮತ್ತು ಭವಿಷ್ಯದ 2022ಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯು 6.8% ಅಂದಾಜಿಸಿದ್ದು, ಇದು ತೀವ್ರ ಕಳವಳಕ್ಕೆ ಕಾರಣವಾಗಿದೆ ಎಂದು ಆರ್.ವಿ ದೇಶಪಾಂಡೆ ಹೇಳಿದ್ದಾರೆ.

ಕೇಂದ್ರ ಬಜೆಟ್ 2021; ಮಾಜಿ ಸಿಎಂ ಕುಮಾರಸ್ವಾಮಿ ಹೇಳುವುದೇನು?ಕೇಂದ್ರ ಬಜೆಟ್ 2021; ಮಾಜಿ ಸಿಎಂ ಕುಮಾರಸ್ವಾಮಿ ಹೇಳುವುದೇನು?

ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಬಹಳ ಜ್ವಲಂತವಾಗಿದೆ. ಇದಕ್ಕೆ ದೇಶದ ಯುವಕರ ಉಜ್ವಲ ಭವಿಷ್ಯದ ದೃಷ್ಟಿಯಿಂದ ಮತ್ತು ರಾಷ್ಟ್ರದ ಸರ್ವಾಂಗೀಣ ಪ್ರಗತಿಗೆ ಈ ಮುಂಗಡ ಪತ್ರ ಸ್ಪಂದಿಸಿ, ಉತ್ತರ ಕಂಡಹಿಡಿಯಬೇಕಾಗಿದೆ. ಈ ಮುಂಗಡ ಪತ್ರದಲ್ಲಿ ವ್ಯಾಪಾರಸ್ಥರು, ಸಣ್ಣ ಕೈಗಾರಿಕೆಗಳು ಮತ್ತು ಮಧ್ಯಮ ವರ್ಗದ ಜನರಿಗೆ ಪರಿಹಾರ ಸಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.

ಇದರ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಕೋವಿಡ್ ಸಂಕಷ್ಟದಲ್ಲಿ ಜನಸಾಮಾನ್ಯರಿಂದ ಹೆಚ್ಚಿನ ನಿರೀಕ್ಷೆ ಇದ್ದು, ಈ ಬಜೆಟ್‌ನ ಮುಖಾಂತರ ಪೂರೈಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಎಡವಿದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

Recommended Video

Budget 2021 : ಮೋದಿ ಸರ್ಕಾರ ಕೊಟ್ಟ ದೊಡ್ಡ ಶಾಕ್ ಇದೆ | Oneindia Kannada

English summary
Finance Minister Nirmala Sitharaman presented the Center's 2020-21 advance letter on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X