ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2021: ಮತ್ತೆಮತ್ತೆ ಶೋಷಣೆ, ತುಳಿತಕ್ಕೆ ಒಳಗಾದ ಮದ್ಯಪ್ರಿಯರು

|
Google Oneindia Kannada News

ಬೆಂಗಳೂರು, ಫೆ 1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22 ರ ಸಾಲಿನ ಕೇಂದ್ರ ಆಯವ್ಯಯ ಪತ್ರವನ್ನು ಮಂಡಿಸಿದ್ದಾರೆ. ಈ ವರ್ಷ ಚುನಾವಣೆ ನಡೆಯುತ್ತಿರುವ ರಾಜ್ಯಗಳಿಗೆ ಬಜೆಟ್ ನಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ.

ನಿರೀಕ್ಷೆಯಂತೆ, ಪ್ರತೀ ವರ್ಷದಂತೆ ಆಲ್ಕೋಹಾಲ್ ಮೇಲೆ ಟ್ಯಾಕ್ಸ್ ಅನ್ನು ಕೇಂದ್ರ ಸರಕಾರ ಹೆಚ್ಚಿಸಿದೆ. ಇದರ ಜೊತೆಗೆ, ತಂಬಾಕು ಉತ್ಪನ್ನಗಳ ಮೇಲಿನ ಶುಂಕವೂ ಹೆಚ್ಚಾಗಿದೆ. ಇನ್ನು, ಮುಂದಿನ ತಿಂಗಳು ರಾಜ್ಯ ಸರಕಾರದ ಬಜೆಟ್ ಅನ್ನು ಮುಖ್ಯಮಂತ್ರಿಗಳು ಮಂಡಿಸಲಿದ್ದಾರೆ.

 ಬಜೆಟ್ 2021: ಚಿನ್ನದ ಮೇಲಿನ ಆಮದು ಸುಂಕ ಇಳಿಕೆಗೆ ವಿಶ್ವ ಚಿನ್ನ ಮಂಡಳಿ ಸ್ವಾಗತ ಬಜೆಟ್ 2021: ಚಿನ್ನದ ಮೇಲಿನ ಆಮದು ಸುಂಕ ಇಳಿಕೆಗೆ ವಿಶ್ವ ಚಿನ್ನ ಮಂಡಳಿ ಸ್ವಾಗತ

ರಾಜ್ಯ ಬಜೆಟ್ ನಲ್ಲಾದರೂ ಮದ್ಯ ಮತ್ತು ತಂಬಾಕು ಉತ್ಪನ್ನಗಳ ಮೇಲಿನ ಟ್ಯಾಕ್ಸ್ ಕಮ್ಮಿಯಾಗಬಹುದೇ ಎಂದು ಊಹಿಸುವುದೂ ತಪ್ಪಾಗುತ್ತದೆ. ಹಾಗಾಗಿ, ಕೇಂದ್ರ ಮತ್ತು ರಾಜ್ಯ ಬಜೆಟ್ ನಂತರ ಪ್ರತೀವರ್ಷ ಮದ್ಯ, ತಂಬಾಕು ಪ್ರಿಯರ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ.

ಕರ್ನಾಟಕದಲ್ಲಿ ಬರೀ ಬಜೆಟ್ ನಲ್ಲಿ ಮಾತ್ರ ಮದ್ಯ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಪರಿಪಾಠವೇನೂ ಇಲ್ಲ. ಲಾಕ್ ಡೌನ್ ವೇಳೆ ಬಂದ್ ಆಗಿದ್ದ ಮದ್ಯದಂಗಡಿಯನ್ನು ರಾಜ್ಯ ಸರಕಾರ ತೆರೆಯಲು ಅನುಮತಿ ಕೊಟ್ಟಾಗ ಸರಿಯಾದ ಟ್ಯಾಕ್ಸ್ ಜಡಾಯಿಸಿತ್ತು. ಈ ಬಾರಿಯ ಕೇಂದ್ರದ ಬಜೆಟ್ ನಲ್ಲೂ ಅದೇ ಆಗಿದೆ.

ಬಜೆಟ್ 2021: ರಕ್ಷಣಾ ಕ್ಷೇತ್ರಕ್ಕೆ 4.78 ಲಕ್ಷ ಕೋಟಿ ರೂ. ಹಂಚಿಕೆಬಜೆಟ್ 2021: ರಕ್ಷಣಾ ಕ್ಷೇತ್ರಕ್ಕೆ 4.78 ಲಕ್ಷ ಕೋಟಿ ರೂ. ಹಂಚಿಕೆ

ಕೇಂದ್ರ ಬಜೆಟ್

ಕೇಂದ್ರ ಬಜೆಟ್

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಭಾರೀ ಎನ್ನಬಹುದಾದ ಮದ್ಯ ಉತ್ಪನ್ನಗಳ ಮೇಲೆ ಶೇ.100 ಸೆಸ್ ವಿಧಿಸಲಾಗಿದೆ. ಚಿನ್ನ, ಬೆಳ್ಳಿ, ಸೇಬು ಸೇರಿದಂತೆ ಹಲವು ವಸ್ತುಗಳ ಮೇಲೆ ಸೆಸ್ ಹೇರಲಾಗಿದ್ದು, ಇದರಲ್ಲಿ ಗರಿಷ್ಠ ಸೆಸ್ ಮದ್ಯ ಉತ್ಪನ್ನಗಳ ಮೇಲೆ ಬಿದ್ದಿದೆ. ಇನ್ನು ಬಟಾಣಿಯ ಮೇಲೂ ಶೇ. 40 ಸೆಸ್ ವಿಧಿಸಲಾಗಿದೆ.

ಮದ್ಯ ಉತ್ಪನ್ನಗಳ ಮೇಲಿನ ತೆರಿಗೆ

ಮದ್ಯ ಉತ್ಪನ್ನಗಳ ಮೇಲಿನ ತೆರಿಗೆ

ತೈಲ ಉತ್ಪನ್ನಗಳ ಹಾಗೇ ಮದ್ಯ ಉತ್ಪನ್ನಗಳ ಮೇಲಿನ ತೆರಿಗೆಯೂ ಬಜೆಟ್ ಹೊರತಾಗಿಯೂ ಹೆಚ್ಚಾಗುತ್ತಲೇ ಇರುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಭರ್ಜರಿ ಆದಾಯ ತಂದು ಕೊಡುವ ಉತ್ಪನ್ನ ಇದಾಗಿರುವುದರಿಂದ, ಜೊತೆಗೆ, ಬೆಲೆ ಎಷ್ಟೇ ಏರಿಕೆಯಾದರೂ, ಜನರು ಇದರ ಹಿಂದೆ ಬೀಳುತ್ತಾರೆ ಎನ್ನುವ ಖಚಿತ ವಿಶ್ವಾಸ ಸರಕಾರಕ್ಕೆ ಇರುವುದರಿಂದ ತೆರಿಗೆ ಏರುತ್ತಲೇ ಇರುತ್ತದೆ.

ಮೂರು ಸಾವಿರ ಕೋಟಿ ಆದಾಯ ಸರಕಾರದ ಬೊಕ್ಕಸಕ್ಕೆ

ಮೂರು ಸಾವಿರ ಕೋಟಿ ಆದಾಯ ಸರಕಾರದ ಬೊಕ್ಕಸಕ್ಕೆ

ಕಳೆದ ಮೇ ತಿಂಗಳಲ್ಲಿ ಕರ್ನಾಟಕ ಸರಕಾರ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ. 17-25ರವರೆಗೆ ಹೆಚ್ಚಿಸಿತ್ತು. ಹೆಚ್ಚುವರಿ ಮೂರು ಸಾವಿರ ಕೋಟಿ ಆದಾಯ ಸರಕಾರದ ಬೊಕ್ಕಸಕ್ಕೆ ಹರಿದು ಬಂದಿತ್ತು.

Recommended Video

Union Budget 2021 : ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ಬದಲಾವಣೆ! | Oneindia Kannada
ಸೆಸ್ ವಿಧಿಸಿರುವುದರಿಂದ ಮದ್ಯ ಉತ್ಪನ್ನಗಳ ಬೆಲೆ ಮತ್ತೆ ಏರಲಿದೆ

ಸೆಸ್ ವಿಧಿಸಿರುವುದರಿಂದ ಮದ್ಯ ಉತ್ಪನ್ನಗಳ ಬೆಲೆ ಮತ್ತೆ ಏರಲಿದೆ

ರೂಪಾಯಿ 559 ವರೆಗಿನ ಮದ್ಯಕ್ಕೆ ಶೇ. 17, 560-1,199 ರೂಪಾಯಿವರೆಗಿನ ಮದ್ಯಕ್ಕೆ ಶೇ. 21, 1,200 - 15,000 ರೂಪಾಯಿವರೆಗಿನ ಮದ್ಯಕ್ಕೆ ಶೇ. 25 ಹೆಚ್ಚುವರಿ ತೆರಿಗೆಯನ್ನು ಕೆಲವು ತಿಂಗಳ ಹಿಂದೆ ರಾಜ್ಯ ಸರಕಾರ ವಿಧಿಸಿತ್ತು. ಈಗ, ಮತ್ತೆ ಕೇಂದ್ರ ಸರಕಾರ ಶೇ. 100 ಸೆಸ್ ವಿಧಿಸಿರುವುದರಿಂದ ಮದ್ಯ ಉತ್ಪನ್ನಗಳ ಬೆಲೆ ಮತ್ತೆ ಏರಲಿದೆ.

English summary
Union Budget 2021: Hundred Persent Cess Imposed On Liquor Products,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X