ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೂಲ್ಯಳನ್ನು ಜೀವನ ಪರ್ಯಂತ ಅಂಡಮಾನ್ ಜೈಲಿನಲ್ಲಿಡಬೇಕು: ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ಫೆ. 21: ವೈರಿ ರಾಷ್ಟ್ರದ ಬಗ್ಗೆ ಜೈಕಾರ ಹಾಕಿರುವ ಅಮೂಲ್ಯಳನ್ನು ಅಂಡಮಾನ್ ಜೈಲಿನಲ್ಲಿಡುವುದು ಸೂಕ್ತ ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಈ ರೀತಿಯ ವ್ಯಕ್ತಿಯನ್ನು ಅಂಡಮಾನ್ ಜೈಲಿನಲ್ಲಿ ಇಡುವುದು ಸೂಕ್ತ. ಆಕೆಯ ವಿರುದ್ಧ ಜೀವನ ಪರ್ಯಂತ ಜೈಲಿನಲ್ಲಿ ಉಳಿಯುವಂತೆ ಕ್ರಮ ಕೈಗೊಳ್ಳಬಹುದು. ಒಬ್ಬ ಹೆಣ್ಣುಮಗಳು ಪಾಕಿಸ್ತಾನ ಪರ ಜಿಂದಾಬಾದ್ ಹಾಕಿರುವುದು ಅಕ್ಷಮ್ಯ ಅಪರಾಧ. ಯಾವುದೇ ಭಾರತೀಯರು ಇದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ. ಆಕೆ ಮಾತನಾಡುವ ಧಾಟಿ ನೋಡಿದರೆ ಯೋಚನೆ ಮಾಡಿಯೇ ಮಾತನಾಡಿದಂತಿದೆ. ಪ್ರಕರಣವನ್ನು ಶೀಘ್ರ ವಿಚಾರಸೆಗೊಳಪಡಿಸಿ ಕಠಿಣ ಶಿಕ್ಷೆ ನೀಡಬೇಕು. ಇದಕ್ಕೆ ವಿಶೇಷ ಕೋರ್ಟ್ ಸ್ಥಾಪಿಸಿ ಶೀಘ್ರ ತೀರ್ಪು ನೀಡುವಂತಾಗಬೇಕು. ನಮಗೆ ದೇಶ ಮೊದಲು ನಮ್ಮ. ಶತ್ರು ರಾಷ್ಟ್ರಗಳ ಪರ ಘೋಷಣೆ ಕೂಗುವವರಿಗೆ ಭಾರತದಲ್ಲಿ ಸ್ಥಾನ ಇಲ್ಲ. ಈ ರೀತಿಯ ಹೇಳಿಕೆ ನೀಡುವವರ ಬಗ್ಗೆ ಮಾಹಿತಿ ಪಡೆಯಲು ಬೇಹುಗಾರಿಕೆ ಇಲಾಖೆ ಹೆಚ್ಚು ಬಲಿಷ್ಠಗೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದಾರೆ.

'ಸಂಸದ ಓವೈಸಿಗೆ ಸಂಕಷ್ಟ ತಂದ ಪಾಕಿಸ್ತಾನ್ ಜಿಂದಾಬಾದ್''ಸಂಸದ ಓವೈಸಿಗೆ ಸಂಕಷ್ಟ ತಂದ ಪಾಕಿಸ್ತಾನ್ ಜಿಂದಾಬಾದ್'

ನಾವು ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಹೋಗಿಲ್ಲ: ನಾವು ಬಿರಿಯಾನಿ ತಿನ್ನಲು, ಜರತಾರಿ ಸೀರೆ ಕೊಡಲು ಪಾಕಿಸ್ತಾನಕ್ಕೆ ಹೋಗಿಲ್ಲ ಎನ್ನುವ ಮೂಲಕಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾಕಿಸ್ತಾನ ಭೇಟಿಯನ್ನು ವಿ.ಎಸ್. ಉಗ್ರಪ್ಪ ಅವರು ಪರೋಕ್ಷವಾಗಿ ಟೀಕಿಸಿದ್ದಾರೆ. ನಾವು ಸ್ಟಂಟ್ ಮಾಡಲು ಕಾಶ್ಮೀರ ಪರವಾಗಿಲ್ಲ. ಬಿಜೆಪಿಯವರು ಈಗಲೂ ತಮ್ಮ ಕಚೇರಿಗಳಲ್ಲಿ ರಾಷ್ಟ್ರ ಧ್ವಜ ಹಾರಿಸುವುದಿಲ್ಲ. ಕಾಂಗ್ರೆಸ್ ರಾಷ್ಟ್ರ ರಕ್ಷಣೆ ವಿಚಾರದಲ್ಲಿ ಕಾಂಗ್ರೆಸ್ ಯಾವತ್ತು ಆಟ ಆಡುವುದಿಲ್ಲ ಎಂದಿದ್ದಾರೆ.

Ugrappa held indirect barrage over Prime Minister Narendra Modi

ಇನ್ನು ಹುಬ್ಬಳ್ಳಿ ಹಾಗೂ ಬೆಂಗಳೂರು ಘಟನೆಗಳ್ನು ಕಾಂಗ್ರೆಸ್ ಖಂಡಿಸುತ್ತದೆ: ಹುಬ್ಬಳ್ಳಿಯಲ್ಲಿ ನಡೆದ ಘಟನೆ ಹಾಗೂ ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಕಾಂಗ್ರೆಸ್ ಯಾವತ್ತೂ ಕಾಶ್ಮೀರ ಪ್ರತ್ಯೇಕತೆಗೆ ಬೆಂಬಲ ಸೂಚಿಸಿಲ್ಲ. ನಮಗೆ ದೇಶ ಮುಖ್ಯ. ಫ್ರೀ ಕಾಶ್ಮೀರ್ ಎಂದರೆ ಅಲ್ಲಿ ತಡೆ ಹಿಡಿದಿದ್ದ ಇಂಟರ್‌ನೆಟ್ ಹಾಗೂ ಬೇರೆ ಸೌಲಭ್ಯಗಳನ್ನು ನೀಡುವಂತೆ ಒತ್ತಾಯ ಮಾಡಿದ್ದು. ಕಾಶ್ಮೀರ್ ಭಾರತದ ಅವಿಭಾಜ್ಯ ಅಂಗ ಎಂದು ಉಗ್ರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ.

English summary
Congress leader, Former MP VS Ugrappa says we have not gone to Pakistan to eat biryani. Ugrappa held indirect barrage over Prime Minister Narendra Modi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X