ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UG-NEET 2021: ಪರಿಷ್ಕತ ಸೀಟು ಹಂಚಿಕೆ ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ಫೆ.4: ಯುಜಿನೀಟ್ 2021ನೇ ಸಾಲಿನ ವೈದ್ಯಕೀಯ, ದಂತವೈದ್ಯಕೀಯ, ಆಯುಷ್ ಕೋರ್ಸ್‌ಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಫೆ.4ರಂದು ಅಣಕು ಸೀಟು ಹಂಚಿಕೆ ಮಾಡಲಾಗಿದೆ.

ವೈದ್ಯಕೀಯ, ದಂತವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳಿಗೆ ಅಣಕು ಸೀಟು ಹಂಚಿಕೆ ಮಾಡಿ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (https://cetonline.karnataka.gov.in) ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಫಲಿತಾಂಶವನ್ನು ಗಮನಿಸಿ, ನಂತರ ಅವಶ್ಯವಿದ್ದಲ್ಲಿ ಸೀಟು ಆಯ್ಕೆಯ ಇಚ್ಛೆಗಳನ್ನು ಬದಲಿಸಬಹುದು, ಸೇರಿಸಬಹುದು ಅಥವಾ ಅಳಿಸಬಹುದು ಎಂದು ಸೂಚಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಫೆ.7ರ ಬೆಳಗ್ಗೆ 8ರೊಳಗೆ ಇಚ್ಛೆ (ಆಪ್ಷನ್ಸ್) ದಾಖಲಿಸಬಹುದು. ನಿಗದಿತ ಸಮಯದ ನಂತರ ಆಯ್ಕೆ ಬದಲಾವಣೆಗೆ ಅವಕಾಶ ಇರುವುದಿಲ್ಲ. ಈ ಪ್ರಕಾರವೇ ಮೊದಲ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

UGNEET 2021: Revised schedule for first round seat allotment

ವೇಳಾಪಟ್ಟಿ ಹೀಗಿದೆ:

ಫೆ.4 (ಸಂಜೆ 7): ಅಣಕು ಸೀಟು ಹಂಚಿಕೆಯ ಫಲಿತಾಂಶ

ಫೆ.4ರಿಂದ 7 (ಬೆಳಗ್ಗೆ 8): ಆಯ್ಕೆಗಳನ್ನು ಬದಲಾಯಿಸಲು ಅವಕಾಶ

ಫೆ. (ರಾತ್ರಿ 8): ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟ

ಫೆ.9 (ರಾತ್ರಿ 8): ಪೋಷಕರ ಜೊತೆ ಚರ್ಚಿಸಿ ಸೂಕ್ತವಾದ ಚಾಯ್ಸ್ ಆಯ್ಕೆ ಮಾಡಿಕೊಳ್ಳಬಹುದು

ಫೆ.8ರಿಂದ ಫೆ.10 (ಸಂಜೆ 4): ಚಾಯ್ಸ್-1, ಚಾಯ್ಸ್-2 ಆಯ್ಕೆ ಮಾಡಿದ ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಬೇಕು

ಫೆ.8ರಿಂದ ಫೆ.10 (ಸಂಜೆ 4): ಚಾಯ್ಸ್-1 ಆಯ್ಕೆ ಮಾಡಿದ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಸಲ್ಲಿಸುವುದು, ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಮತ್ತು ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು.

Recommended Video

Ramesh Jarkiholiಯದ್ದು ಏನೂ ತಪ್ಪಿಲ್ಲ ಎಂದ ನ್ಯಾಯಾಲಯ | Oneindia Kannada

ಫೆ.11 (ಸಂಜೆ 5.30): ಚಾಯ್ಸ್-1 ಮೂಲಕ ಸೀಟು ಪಡೆದ ವಿದ್ಯಾರ್ಥಿಗಳು ನಿಗದಿತ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜಿಗೆ ತೆರಳಿ ಪ್ರವೇಶ ಪಡೆಯಲು ಕೊನೆಯ ಅವಕಾಶ

English summary
For admission to Medical, Dental, Ayush courses through UGNEET 2021 Mock seat allotment has been conducted. Revised time table for first rount seat allotment. Details here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X