• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದಲ್ಲಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ಮೋದಿ

|

ಬೆಂಗಳೂರು, ಏಪ್ರಿಲ್ 13; ದೇಶದಲ್ಲಿ ಕೋವಿಡ್ ಭೀತಿಯ ನಡುವೆಯೇ ಯುಗಾದಿ ಹಬ್ಬ ಬಂದಿದೆ. ಹಿಂದೂ ಪುರಾಣಗಳ ಪ್ರಕಾರ ಈ ದಿನ ಬ್ರಹ್ಮ ಬ್ರಹ್ಮಾಂಡವನ್ನು ಸೃಷ್ಟಿಸಿದನು. ಆದ್ದರಿಂದ, ಯುಗಾದಿಯನ್ನು ಹೊಸ ವರ್ಷದ ಆರಂಭ ಎಂದು ಆಚರಣೆ ಮಾಡಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಕರ್ನಾಟಕದ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಮಂಗಳವಾರ ಅವರು ಈ ಕುರಿತು ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ.

ಮಲೆ ಮಾದೇಶ್ವರ ಯುಗಾದಿ ಜಾತ್ರೆ; ಭಕ್ತರಿಗೆ ಪ್ರವೇಶ ನಿರ್ಬಂಧ ಮಲೆ ಮಾದೇಶ್ವರ ಯುಗಾದಿ ಜಾತ್ರೆ; ಭಕ್ತರಿಗೆ ಪ್ರವೇಶ ನಿರ್ಬಂಧ

"ನಿಮ್ಮೆಲ್ಲರಿಗೂ ಯುಗಾದಿಯ ಶುಭಕಾಮನೆಗಳು. ಮುಂಬರುವ ವರ್ಷ ಅದ್ಭುತವಾಗಲಿ. ನೀವೆಲ್ಲರೂ ಆರೋಗ್ಯ ಹಾಗು ಸಂತಸದಿಂದಿರಿ. ಎಲ್ಲೆಡೆ ಸಮೃದ್ಧಿ ಹಾಗು ಸಂತೋಷ ಪಸರಿಸಲಿ" ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಹಳ್ಳಿ ದೇವಾಲಯಗಳಿಗೂ ಬೀಗ: ಮನೆಯಲ್ಲೇ ಯುಗಾದಿ ಹಬ್ಬಹಳ್ಳಿ ದೇವಾಲಯಗಳಿಗೂ ಬೀಗ: ಮನೆಯಲ್ಲೇ ಯುಗಾದಿ ಹಬ್ಬ

ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಜನರು ಯುಗಾದಿ ಹಬ್ಬವನ್ನು ಹೆಚ್ಚು ಸಂಭ್ರಮದಿಂದಲೇ ಆಚರಣೆ ಮಾಡುತ್ತಾರೆ. ಮನೆಯ ಮುಂದೆ ಬಣ್ಣ-ಬಣ್ಣದ ರಂಗೋಲಿ ಬರೆದು, ಬಾಗಿಲಿಗೆ ಹಸಿರು ತೋರಣವನ್ನು ಕಟ್ಟಿ, ಹೊಸ ಬಟ್ಟೆ ತೊಟ್ಟು ಹಬ್ಬವನ್ನು ಆಚರಿಸುತ್ತಾರೆ.

ಕೊರೊನಾ 2ನೇ ಅಲೆ ಭೀತಿ: ಯುಗಾದಿ ಸೇರಿದಂತೆ ಎಲ್ಲ ಹಬ್ಬಗಳ ಅದ್ದೂರಿ ಆಚರಣೆಗೆ ಸರ್ಕಾರ ಬ್ರೇಕ್ಕೊರೊನಾ 2ನೇ ಅಲೆ ಭೀತಿ: ಯುಗಾದಿ ಸೇರಿದಂತೆ ಎಲ್ಲ ಹಬ್ಬಗಳ ಅದ್ದೂರಿ ಆಚರಣೆಗೆ ಸರ್ಕಾರ ಬ್ರೇಕ್

   ರಾಜ್ಯದಲ್ಲಿ ಅಗತ್ಯವಿದ್ದರೆ ರಾತ್ರಿ ಲಾಕ್ಡೌನ್ ಎಂದ CM | Oneindia Kannada

   ಯುಗಾದಿಯ ದಿನ ಹೊಸ ವರ್ಷದ ಆರಂಭ ಎಂಬ ನಂಬಿಕೆ ಇದೆ. ಯುಗಾಯ ದಿನ ಜನರು ಎಣ್ಣೆ ಸ್ನಾನವನ್ನು ಮಾಡಿ, ಹೊಸ ಬಟ್ಟೆ ತೊಡುತ್ತಾರೆ. ಬೇವು, ಬೆಲ್ಲ ತಿಂದು ಜೀವನ ಸಿಹಿ ಮತ್ತು ಕಹಿಯಿಂದ ಕೂಡಿರುತ್ತದೆ ಎಂಬ ಸಂದೇಶ ಕೊಡುತ್ತಾರೆ. ವರ್ಷದ ಭವಿಷ್ಯವನ್ನು ಪಂಚಾಗದಲ್ಲಿ ಓದಿ ತಿಳಿದುಕೊಳ್ಳುತ್ತಾರೆ.

   English summary
   Prime minister Narendra Modi wished people of Karnataka on the day of Ugadi. Modi tweeted wished in Kannada.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X