ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿವಿ ಸೇರಿ 28 ವಿವಿಗಳ ಮಾರ್ಕ್ಸ್‌ ಕಾರ್ಡ್‌ ಆನ್‌ಲೈನ್‌ನಲ್ಲಿ

By Nayana
|
Google Oneindia Kannada News

ಬೆಂಗಳೂರು, ಜು.9: ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಇನ್ನುಮುಂದೆ ಆನ್‌ಲೈನ್‌ ಮೂಲಕವೇ ಅಂಕಪಟ್ಟಿಯನ್ನು ಪಡೆಯಬಹುದಾಗಿದೆ. ಇನ್ನುಮುಂದೆ ರಾಜ್ಯದ ಎಲ್ಲ 28 ಸರ್ಕಾರಿ ವಿಶ್ವವಿದ್ಯಾಲಯಗಳು ಅಂಕಪಟ್ಟಿ ಮುದ್ರಿಸುವ ಬದಲು ಅಂಕಪಟ್ಟಿಯ ಸಾಫ್ಟ್‌ ಕಾಪಿ ರೂಪಿಸಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಡಿಜಿಟಲ್‌ ಇಂಡಿಯಾಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು ಆನ್‌ಲೈನ್‌ನಲ್ಲೆ ದೊರೆಯುವಂತೆ ಮಾಡಲು ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ. ಎಂಎಚ್‌ಆರ್‌ಡಿ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಶೈಕ್ಷಣಿಕ ಕಣಜ ವಿಶ್ವವಿದ್ಯಾಲಯಗಳಿಂದ ಮಾಹಿತಿ ಪಡೆದು ವಿದ್ಯಾರ್ಥಿಗಳ ದತ್ತಾಂಶ ಕ್ರೋಡೀಕರಣ ಮಾಡಲಿದೆ.

ಸೆಂಟ್ರಲ್‌ ಕಾಲೇಜು ಬಿಡದೇ ಬೆಂಗಳೂರು ವಿಶ್ವವಿದ್ಯಾಲಯ ಹಠ ಸೆಂಟ್ರಲ್‌ ಕಾಲೇಜು ಬಿಡದೇ ಬೆಂಗಳೂರು ವಿಶ್ವವಿದ್ಯಾಲಯ ಹಠ

ನಂತರ ವಿದ್ಯಾರ್ಥಿಗಳ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ವಿವಿಧ ಕೋರ್ಸ್‌ಗಳ ಪ್ರಮಾಣಪತ್ರ ಸೇರಿ ಎಲ್ಲ ಬಗೆಯ ಶೈಕ್ಷಣಿಕ ಚಟುವಟಿಕೆಯ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ವಿದ್ಯಾರ್ಥಿಗಳು ನ್ಯಾಡ್‌ ಮೂಲಕ ಯಾವುಉದೇ ಕ್ಷಣದಲ್ಲಾದರೂ ಪ್ರಮಾಣ ಪತ್ರ ಪಡೆಯಬಹುದಾಗಿದೆ.

ಬೆಂಗಳೂರು ವಿವಿಯಲ್ಲಿ ಮೊದಲ ಪ್ರಯೋಗ

ಬೆಂಗಳೂರು ವಿವಿಯಲ್ಲಿ ಮೊದಲ ಪ್ರಯೋಗ

ರಾಜ್ಯದಲ್ಲಿರುವ 28 ಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರು ವಿಶ್ವವಿದ್ಯಾಲಯ ಮೊದಲ ಬಾರಿಗೆ ಈ ಡಿಜಿಟಲ್‌ ಅಂಕಪಟ್ಟಿ ತರಲು ನಿರ್ಧರಿಸಿದೆ. ಇತ್ತೀಚೆಗೆ ಎಂಎಚ್‌ಆರ್‌ಡಿ ಗುರುತಿಸಿರುವ ಖಾಸಗಿ ಕಂಪನಿ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇವರು ಅಂಕಪಟ್ಟಿ ಉಚಿತವಾಗಿ ವಿನ್ಯಾಸ ಮಾಡಿ ನೀಡಲಿದ್ದಾರೆ.

ಮಾರ್ಕ್ಸ್‌ಕಾರ್ಡ್‌ ನಕಲಿಗೆ ಅವಕಾಶವಿಲ್ಲ

ಮಾರ್ಕ್ಸ್‌ಕಾರ್ಡ್‌ ನಕಲಿಗೆ ಅವಕಾಶವಿಲ್ಲ

ನ್ಯಾಡ್‌ಗೆ ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆ ಲಿಂಕ್‌ ಮಾಡಲಾಗುತ್ತದೆ. ನಂತರ ಸೀಕ್ರೇಟ್‌ ಪಿನ್‌ಕೋಡ್‌ ನೀಡಲಿದೆ. ವಿದ್ಯಾರ್ಥಿಗಳು ಆ ಪಿನ್‌ಕೋಡ್‌ ಬಳಕೆ ಮಾಡಿದರೆ ಮಾತ್ರ ಅಂಕಪಟ್ಟಿ ದೊರೆಯಲಿದೆ. ಬಾರ್‌ಕೋಡ್‌, ವಿವಿಯ ಲೋಗೋ, ಡಿಜಿಟಲ್‌ ಸಹಿ ಸೇರಿ ಕನಿಷ್ಠ 10 ಅಂಶಗಳನ್ನು ಆಯಾ ವಿವಿಗಳು ನಮೂದಿಸಿರುತ್ತಾರೆ.

ವಿಶ್ವವಿದ್ಯಾಲುಗಳು ಏನು ಮಾಡಬೇಕು

ವಿಶ್ವವಿದ್ಯಾಲುಗಳು ಏನು ಮಾಡಬೇಕು

ವಿಶ್ವವಿದ್ಯಾಲಯಗಳು ಈವರೆಗೆ ಅಂಕಪಟ್ಟಿಗಳನ್ನು ಮುದ್ರಿಸುತ್ತಿದ್ದು, ಕಾಲೇಜು ಆಡಳಿತ ಮಂಡಳಿಯವರು ವಿವಿಗೆ ಆಗಮಿಸಿ ಅಂಕಪಟ್ಟಿ ಪಡೆದು ವಿದ್ಯಾರ್ಥಿಗಳಿಗೆ ರವಾನೆ ಮಾಡುತ್ತಿದ್ದರು. ಇನ್ನುಮುಂದೆ ವಿವಿಗಳು ನೇರವಾಗಿ ಅಂಕಪಟ್ಟಿ ವಿನ್ಯಾಸ ಮಾಡಿ ಅಂಕಗಳನ್ನು ನಮೂದಿಸಿದರೆ ಸಾಕು. ಮುದ್ರಣ ಮಾಡುವ ಅಗತ್ಯವಿರುವುದಿಲ್ಲ.

ಪ್ರಕ್ರಿಯೆ ಹೇಗಿರುತ್ತದೆ

ಪ್ರಕ್ರಿಯೆ ಹೇಗಿರುತ್ತದೆ

ಎಂಎಚ್‌ಆರ್‌ಡಿ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಶೈಕ್ಚಣಿಕ ಕಣಜ ಇಶ್ವವಿದ್ಯಾಲಯಗಳಿಂದ ಮಾಹಿತಿ ಪಡೆದು ವಿದ್ಯಾರ್ಥಿಗಳ ದತ್ತಾಂಶ ಕ್ರೋಡೀಕರಣ ಮಾಡಲಿದೆ. ನಂತರ ವಿದ್ಯಾರ್ಥಿಗಳ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ವಿವಿಧ ಕೋರ್ಸ್‌ಗಳ ಪ್ರಮಾಣಪತ್ರ ಸೇರಿ ಎಲ್ಲ ಬಗೆಯ ಅಂಕಪಟ್ಟಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಿದೆ.

English summary
As part of digital India program, ministry of Human Resources Development had given instructions to all the universities in the country to provide marks cards to students in online. Following this, 28 universities in the state have preparing to implement the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X