ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮೇಶ್ವರ ಬೀಚ್‌ನಲ್ಲಿ ಸೂರ್ಯಾಸ್ತದ ಸೊಬಗು ನೋಡಿ!

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಉಡುಪಿಯ ಬೈಂದೂರು ಪೇಟೆಯಿಂದ ಸುಮಾರು 4 ಕಿ. ಮೀ. ಪಶ್ಚಿಮಾಭಿಮುಖವಾಗಿ ಸಾಗಿದರೆ, ವಿಶಾಲವಾದ ಕಡಲತೀರ ಜನರನ್ನು ಆಹ್ವಾನಿಸುತ್ತದೆ. ಸೂರ್ಯಾಸ್ತವನ್ನು ನೋಡಲು ಇದು ಬಹಳ ಪ್ರಶಸ್ತವಾದ ಸ್ಥಳ. ಸೈರ್ಯಾಸ್ತವನ್ನು ನೋಡಲು ಎಲ್ಲಿಗೆ ಹೋಗಬೇಕು? ಎಂದು ಆಲೋಚಿಸುತ್ತಿದ್ದರೆ ಸೋಮೇಶ್ವರ ಕಡಲ ತೀರಕ್ಕೆ ಬನ್ನಿ.

ಜಿಲ್ಲೆಯ ಅತ್ಯಂತ ಸುರಕ್ಷಿತ ಬೀಚ್ ಎಂದೇ ಹೆಸರಾದ ಬೈಂದೂರಿನ ಸೋಮೇಶ್ವರ ಬೀಚ್ ಅರ್ಥಾತ್ ಒತ್ತಿನೆಣೆ ಬೀಚ್, ನೇಸರನ ಆಗಮನದ ಹಾಗೂ ನಿರ್ಗಮನದ ವೀಕ್ಷಣೆಗೆ ಹೇಳಿ ಮಾಡಿಸಿದ ತಾಣವಾಗಿದೆ. ಬೀಚ್‌ನ ಸಮೀಪದ ಮರಗಿಡಗಳು, ಗಾಳಿ ಮರತೋಪುಗಳು, ಸಮುದ್ರ ತೀರದ ಬಂಡೆಕಲ್ಲುಗಳು, ಕಲ್ಲು ಬೆಂಚುಗಳು ಬೀಚ್‌ನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. [ಅರಶಿನಗುಂಡಿ ಜಲಪಾತಕ್ಕೆ ಚಾರಣ ಹೋಗೋಣ ಬನ್ನಿ]

someshwar beach

ನದಿ ಸಮುದ್ರವನ್ನು ಸೇರುವ ಅಳಿವೆ ಪ್ರದೇಶವಿದು. ಜಿಲ್ಲೆಯ ಇತರ ಬೀಚ್‌ಗಳಿಗಿಂತ ವಿಸ್ತಾರವಾದ ತೀರ ಪ್ರದೇಶ ಇಲ್ಲಿದೆ. ಸಮುದ್ರಕ್ಕೆ ಹೊಂದಿಕೊಂಡಿರುವ ಒತ್ತಿನೆಣೆ ಗುಡ್ಡದಲ್ಲಿರುವ ಕ್ಷಿತಿಜ ನೇಸರ ಧಾಮ ಪ್ರಮುಖ ಆಕರ್ಷಣೆ. ಮರಗಿಡಗಳಿಂದ ತುಂಬಿರುವ ಈ ಗ್ರಾಮ ಪ್ರವಾಸಿಗರಿಗೆ, ಪ್ರಕೃತಿ ಪ್ರಿಯರಿಗೆ ರಸದೌತಣ ಬಡಿಸುತ್ತದೆ. ತಂಪಾದ ಸೌಂದರ್ಯವನ್ನು ಇಲ್ಲಿ ಆಸ್ವಾದಿಸಬಹುದು. ಸೋಮೇಶ್ವರ ಬೀಚ್‌ಗೆ ಕಳಸವಿಟ್ಟಂತೆ ಶಿವನ ದೇವಸ್ಥಾನವಿದೆ. [ಕಪಿಲ ತೀರದಲ್ಲಿರುವ ಶಿಶಿಲೇಶ್ವರಕ್ಕೆ ಒಮ್ಮೆ ಭೇಟಿ ಕೊಡಿ]

ಬೀಚ್‌ಗೆ ಭೇಟಿ ನೀಡಿದ ಬಳಿಕ ಬೈಂದೂರಿನಿಂದ ಪುರಾಣ ಪ್ರಸಿದ್ದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮರವಂತೆ ಬೀಚ್, ತ್ರಾಸಿ ಬೀಚ್, ಗುಹೇಶ್ವರ ಗುಹಾಂತರ ದೇವಾಲಯಗಳಿಗೆ ಭೇಟಿ ನೀಡಬಹುದು. [ಬೇಕಲ ಕೋಟೆಗೆ ಒಂದು ದಿನದ ಪ್ರವಾಸ ಹೋಗಿ ಬನ್ನಿ]

ಬೀಚ್ ಎಲ್ಲಿದೆ? : ಉಡುಪಿ ಜಿಲ್ಲೆಯ ಬೈಂದೂರಿನ ಪಡುವರಿ ಗ್ರಾಮದಲ್ಲಿ ಸೋಮೇಶ್ವರ ಬೀಚ್ ಇದೆ.
ಕುಂದಾಪುರದಿಂದ 45 ಕಿ.ಮೀ . ಉಡುಪಿಯಿಂದ 80 ಕಿ.ಮೀ. ಮತ್ತು ಮಂಗಳೂರಿನಿಂದ 135 ಕಿ.ಮೀ.ದೂರದಲ್ಲಿ ಬೀಚ್ ಇದೆ.

ಪ್ರಯಾಣ ಹೇಗೆ? : ಮಂಗಳೂರಿನಿಂದ ಮಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 17ರ ಮೂಲಕ ಕುಂದಾಪುರಕ್ಕೆ ಬಂದು, ಅಲ್ಲಿಂದ ತೆರಳಬಹುದು.

English summary
The scenic beauty of Someshwar beach in Byndoor, Udupi district that lies on the Arabian Sea is beyond words. It is also best place for Watch the Sunset.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X