ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುದ್ದಿಜೀವಿಗಳಿಗೆ ಪೇಜಾವರ ಶ್ರೀಗಳ ಓಪನ್ ಚಾಲೆಂಜ್

|
Google Oneindia Kannada News

ಮೈಸೂರು, ಮೇ 09: ಅಸಂಬದ್ದ ಹೇಳಿಗಳನ್ನು ನೀಡುತ್ತಾ ಸಮಾಜದಲ್ಲಿ ಬುದ್ದಿಜೀವಿಗಳು ಒಡಕು ಮೂಡಿಸುತ್ತಿದ್ದಾರೆ ಎಂದು ಉಡುಪಿ ಪೇಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ (ಮೇ 8) ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದ ಪೇಜಾವರ ಶ್ರೀಗಳು, ಬುದ್ದಿಜೀವಿಗಳು ಹಿಂದೂ ಸಮಾಜದಲ್ಲಿ ಒಡಕನ್ನು ಮೂಡಿಸುತ್ತಿದ್ದಾರೆ. ನಾವು ಹಿಂದೂ ಸಮಾಜವನ್ನು ಒಗ್ಗೂಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಭಗವದ್ಗೀತೆಯ ಬಗ್ಗೆ ಕೆಲವರು ಆಕ್ಷೇಪಾರ್ಹ, ಅವಹೇಳನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಅವರು ಉಡುಪಿಗೆ ಬರಲಿ, ಅವರೊಂದಿಗೆ ಮುಕ್ತ ಮನಸ್ಸಿನಿಂದ ಚರ್ಚಿಸುತ್ತೇನೆ ಎಂದು ಬುದ್ದಿಜೀವಿಗಳಿಗೆ ಪೇಜಾವರ ಶ್ರೀಗಳು ಸವಾಲೆಸೆದಿದ್ದಾರೆ. (ಪೇಜಾವರ ಶ್ರೀಗಳ ದಾಖಲೆಯ ಪರ್ಯಾಯ)

ನನ್ನನ್ನು ಕೋಮುವಾದಿ ಎಂದು ಬುದ್ದಿಜೀವಿಗಳು ಬಿಂಬಿಸುತ್ತಿದ್ದಾರೆ. ಜಾತಿ, ಸಮಾನತೆ, ಸಾಮರಸ್ಯದ ನಡುವೆ ವಿಷಬೀಜ ಬಿತ್ತುತ್ತಿರುವವರು ಯಾರು ಎಂದು ಬುದ್ದಿಜೀವಿಗಳನ್ನು ಪೇಜಾವರ ಶ್ರೀಗಳು ಪ್ರಶ್ನಿಸಿದ್ದಾರೆ.

ಮುಂದಿನ ವರ್ಷ (ಜನವರಿ 2016) ಉಡುಪಿಯಲ್ಲಿ ಪರ್ಯಾಯ ನಡೆಯಲಿದ್ದು, ನಾನೇ ಸರ್ವಜ್ಞ ಪೀಠವನ್ನೇರಲಿದ್ದೇನೆ. ವಾದಿರಾಜ ಗುರುಗಳ ನಂತರ ಐದನೇ ಬಾರಿ ಪೀಠಾರೋಹಣ ಮಾಡುತ್ತಿರುವುದು ನಾವೇ ಎಂದು ಶ್ರೀಗಳು ಹೇಳಿದ್ದಾರೆ.

ರಾಮಜನ್ಮಭೂಮಿ ಇರುವುದು ಪಾಕಿಸ್ತಾನದಲ್ಲಿ? ಮುಂದೆ ಓದಿ..

ಭಗವದ್ಗೀತೆಯ ಸಂದೇಶ

ಭಗವದ್ಗೀತೆಯ ಸಂದೇಶ

ಬುದ್ದಿಜೀವಿಗಳು ನನ್ನ ಸವಾಲನ್ನು ಸ್ವೀಕರಿಸಿ ಉಡುಪಿ ಮಠಕ್ಕೆ ಬಂದರೆ, ಅವರಿಗೆ ಶ್ರೀಕೃಷ್ಣ ನೀಡಿದ ಸಂದೇಶ ಮತ್ತು ಶ್ರೀರಾಮಚಂದ್ರನ ಚಾರಿತ್ರ್ಯದ ಬಗ್ಗೆ ವಿವರಿಸುತ್ತೇವೆ. ಗೀತೆಯ ಬಗ್ಗೆ ಅವರಿಗಿರುವ ಗೊಂದಲಗಳನ್ನು ನಿವಾರಿಸಲು ನಾವು ಸಿದ್ದರಿದ್ದೇವೆ - ಪೇಜಾವರ ಶ್ರೀ

ರಾಮಜನ್ಮಭೂಮಿ ಇರುವುದು ಪಾಕ್ ನಲ್ಲಿ

ರಾಮಜನ್ಮಭೂಮಿ ಇರುವುದು ಪಾಕ್ ನಲ್ಲಿ

ಅಸಂಖ್ಯಾತ ಹಿಂದೂಗಳು ಪ್ರಭು ಶ್ರೀರಾಮಚಂದ್ರ ಜನಿಸಿದ್ದು ಅಯೋಧ್ಯೆಯಲ್ಲಿ ಎಂದು ನಂಬಿದ್ದಾರೆ. ಆದರೆ ಅಯೋಧ್ಯೆ ಇರುವುದು ಭಾರತದಲ್ಲಿ ಅಲ್ಲ ಬದಲಿಗೆ ಪಾಕಿಸ್ತಾನದಲ್ಲಿ ಎಂದು ಪುಸ್ತಕವೊಂದರಲ್ಲಿ ಪ್ರತಿಪಾದಿಸಲಾಗಿದೆ.

ಮುಸ್ಲಿಂ ಕಾನೂನು ಮಂಡಳಿ

ಮುಸ್ಲಿಂ ಕಾನೂನು ಮಂಡಳಿ

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸಹಾಯಕ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ ರಹೀಂ ಖುರೇಶಿ ಅವರು ಬರೆದಿರುವ "Fact About Ayodya Episode" ಎನ್ನುವ ಕೃತಿಯಲ್ಲಿ, ರಾಮ ಜನ್ಮಭೂಮಿ ಇರುವುದು ಪಾಕಿಸ್ತಾನದಲ್ಲಿ ಎಂದು ಪ್ರತಿಪಾದಿಸಲಾಗಿದೆ.

ರಾಮಜನ್ಮಭೂಮಿ

ರಾಮಜನ್ಮಭೂಮಿ

ರಾಮನ ಜನ್ಮಭೂಮಿ ಎಂದೇ ನಂಬಲಾಗಿರುವ ಅಯೋಧ್ಯೆ ನಗರ ಉತ್ತರಪ್ರದೇಶದ ಫೈಜಾಬಾದ್ ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ, ಅದು ನಿಜವಾದ ಅಯೋಧ್ಯೆ ಅಲ್ಲ. ಈಗಿನ ರಾಮಜನ್ಮಭೂಮಿ ಎಂದು ಹೇಳಲಾಗುವ ಅಯೋಧ್ಯೆಯಲ್ಲಿ ಜನವಸತಿ ಆರಂಭವಾದದ್ದೇ ಕ್ರಿ.ಪೂ ಏಳನೇ ಶತಮಾನದಲ್ಲಿ ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ರಾಮನ ಜನನ ಲಕ್ಷ ವರ್ಷಗಳ ಹಿಂದೆ

ರಾಮನ ಜನನ ಲಕ್ಷ ವರ್ಷಗಳ ಹಿಂದೆ

ರಾಮನ ಜನನ ಮತ್ತು ಆತನ ವೃತ್ತಾಂತದ ಅವಧಿ ಸುಮಾರು 180 ಲಕ್ಷ ವರ್ಷಗಳ ಹಿಂದೆ, ಹಾಗಿದ್ದಾಗ ಈಗಿನ ಅಯೋಧ್ಯೆ ರಾಮಜನ್ಮಭೂಮಿಯಾಗಲು ಹೇಗೆ ಸಾಧ್ಯ. ಪುರಾತತ್ವ ತಜ್ಞರ ಸಂಶೋಧನಾ ಕೃತಿಗಳ ಪ್ರಕಾರ ಎರಡು ಅಯೋಧ್ಯೆಗಳಿವೆ. ಆ ಎರಡೂ ನಗರಗಳು ಪಾಕಿಸ್ತಾನದ ಖೈಬರ್ ಪ್ರಾಂತ್ಯದ ದೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿವೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

English summary
Udupi Pejawar seer open challenge to those who are opposing Bhagavad Geetha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X