ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕಾಲ ಯೋಜನೆಯಲ್ಲಿ ಉಡುಪಿ ರಾಜ್ಯಕ್ಕೆ ಪ್ರಥಮ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಉಡುಪಿ, ಡಿಸೆಂಬರ್ 03 : ಸಕಾಲ ಯೋಜನೆಯಡಿ ಉಡುಪಿ ಜಿಲ್ಲೆಯು ವಿಳಂಬ ರಹಿತವಾಗಿ ಅರ್ಜಿಗಳ ವಿಲೇವಾರಿಯಲ್ಲಿ ನವೆಂಬರ್ ತಿಂಗಳಿನಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಸಕಾಲ ಯೋಜನೆಯಡಿ ಒಟ್ಟು 668 ಸೇವೆಗಳನ್ನು ನೀಡಲಾಗುತ್ತಿದೆ.

ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅಧಿನಿಯಮ (ಸಕಾಲ)ಯೋಜನೆಯಡಿ ನವೆಂಬರ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ 48,914 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಂದಾಯ ಇಲಾಖೆ 12,800 ಅರ್ಜಿಗಳನ್ನು ಸ್ವೀಕರಿಸಿದ್ದು, ನಿಗದಿತ ಸಮಯದಲ್ಲಿ ಅವುಗಳನ್ನು ವಿಲೇವಾರಿಗೊಳಿಸಿ ಅರ್ಜಿಗಳ ವಿಲೇವಾರಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. [ಮೈಸೂರಿಗರೇ ಇನ್ನು ವಿವಿಯಲ್ಲೂ ಸಕಾಲ ಸೇವೆ ಪಡೆಯಿರಿ]

sakala

'ಚಿಕ್ಕಬಳ್ಳಾಪುರ ಜಿಲ್ಲೆಯು ಸತತವಾಗಿ ಎರಡು ವರ್ಷಗಳಿಮದ ಮೊದಲ ಸ್ಥಾನದಲ್ಲಿತ್ತು. ಸಕಾಲ ಸೇವೆಗಳು ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆಯು ಪ್ರಥಮ ಸ್ಥಾನಗಳಿಸಿದೆ' ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ಹೇಳಿದ್ದಾರೆ. [ಕರ್ನಾಟಕ ಸರ್ಕಾರದ 'ಸಕಾಲ' ಕ್ಕೆ ರಾಷ್ಟ್ರೀಯ ಪ್ರಶಸ್ತಿ]

ಉಡುಪಿ ಜಿಲ್ಲೆಯು ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ 36 ಸೇವೆಗಳಲ್ಲಿ ನವೆಂಬರ್ ತಿಂಗಳಿನಲ್ಲಿ ಸಕಾಲದಲ್ಲಿ ಒಟ್ಟು 8,108 ಅರ್ಜಿಗಳನ್ನು ವಿಲೇವಾರಿಗೊಳಿಸಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಡಿಸ್ಪೋಸಲ್ ಇಂಡೆಕ್ಸ್‌ನಲ್ಲೂ ಪ್ರಥಮ ಸ್ಥಾನ ಪಡೆದಿದೆ. [ಎಲ್ಲಾ ಸರ್ಕಾರಿ ಸೇವೆ ಆನ್‌ ಲೈನ್ ಮೂಲಕವೇ ನಡೆಯಲಿ]

'ಸಕಾಲ ಮತ್ತು ಅಟಲ್‍ಜೀ ಸೇವೆಗಳಲ್ಲಿ ಉಡುಪಿ ಜಿಲ್ಲೆಯು ಪ್ರಥಮ ಬರಲು ಎಲ್ಲಾ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಯವರ ಶ್ರಮ ಕಾರಣ. ಇದೇ ಪ್ರಗತಿಯನ್ನು ಮುಂದುವರೆಸುವ ಪ್ರಯತ್ನ ಜಿಲ್ಲಾಡಳಿತದಿಂದ ನಿರಂತರವಾಗಿ ನಡೆಯುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

English summary
Udupi district has topped the state in disposal of applications under the Sakala Scheme for the month of November. As many as 668 services under Sakala scheme in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X