ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಭಾಗೆ ಟಿಕೆಟ್ ಸಿಕ್ಕಾಯ್ತು, ಗೆಲುವಿನ ಸಾಧ್ಯತೆ ಹೆಂಗೆ?

By Srinath
|
Google Oneindia Kannada News

ಚಿಕ್ಕಮಗಳೂರು, ಮಾರ್ಚ್ 14: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೊನೆಗೂ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿರುವ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ತಮ್ಮ ರಾಜಕೀಯ ಗುರು ಬಿಎಸ್ ಯಡಿಯೂರಪ್ಪ ಅವರ ಜತೆಜತೆಗೆ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದ್ದಾರೆ.

ಮಲೆನಾಡು, ಬಯಲುಸೀಮೆ ಮತ್ತು ಕರಾವಳಿ ಪ್ರದೇಶಗಳನ್ನೊಳಗೊಂಡ ಲೋಕಸಭಾ ಕ್ಷೇತ್ರ ಉಡುಪಿ-ಚಿಕ್ಕಮಗಳೂರು. ಮೊದಲಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಕುತೂಹಲದ ಕ್ಷೇತ್ರವಾಗಿದೆ. ಈ ಕ್ಷೇತ್ರದ ಮಹಿಮೆ ಅಪಾರ. ಎಂತೆಂಥವರನ್ನೋ ಗೆಲ್ಲಿಸಿದೆ; ಎಂತೆಂಥವರನ್ನೋ ಸೋಲಿಸಿದೆ.

ಈ ಸಂದರ್ಭದಲ್ಲಿ, ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆ ಅವರ ವಿರುದ್ಧ ಶೋಭಾ ಕರಂದ್ಲಾಜೆ ಗೆಲುವಿನ ಸಾಧ್ಯಾಸಾಧ್ಯತೆಗಳು ಮತ್ತು ಕ್ಷೇತ್ರ ಮಹಿಮೆ ಬಗ್ಗೆ ಒಂದಿಷ್ಟು:

ಜಯಪ್ರಕಾಶ ಹೆಗ್ಡೆ ಗೆಲುವಿಗೆ ಕಾರಣವಾಗಿದ್ದ ಯಡಿಯೂರಪ್ಪ

ಜಯಪ್ರಕಾಶ ಹೆಗ್ಡೆ ಗೆಲುವಿಗೆ ಕಾರಣವಾಗಿದ್ದ ಯಡಿಯೂರಪ್ಪ

ಹಿಂದಿನ (ಉಪ) ಚುನಾವಣೆಯಿಂದಲೇ ಆರಂಭಿಸಿದರೆ ಕಾಂಗ್ರೆಸ್ಸಿನ ಜಯಪ್ರಕಾಶ ಹೆಗ್ಡೆ ಅವರಿಗೆ ನಿರಾಯಾಸದ ಗೆಲುವು ದಕ್ಕಿತ್ತು. ಬಿಜೆಪಿಯಿಂದ ಸಿಡಿದಿದ್ದ ಅದೇತಾನೆ ಮಾಜಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕಾಂಗ್ರೆಸ್ಸಿಗೆ ಜಯ ದಕ್ಕಿಸಿಕೊಟ್ಟರು ಅನ್ನುವುದಕ್ಕಿಂತ ಬಿಜೆಪಿಯನ್ನು ಮಣಿಸಿದರು ಅಂದರೆ ಹೆಚ್ಚು ಸೂಕ್ತವಾದೀತು. ಏಕೆಂದರೆ ಕ್ಷೇತ್ರದಲ್ಲಿ ಯಡಿಯೂರಪ್ಪನವರ ಹಿಡಿತ ಬಲವಾಗಿದ್ದು, ತಮ್ಮ ಸಿಟ್ಟನ್ನು ಬಿಜೆಪಿ ಸೋಲನ್ನಾಗಿ ಪರಿವರ್ತಿಸಿದರು.

ಮೋದಿ ಬಸ್ಸೇರಿರುವ ಶೋಭಾ-ಯಡಿಯೂರಪ್ಪ

ಮೋದಿ ಬಸ್ಸೇರಿರುವ ಶೋಭಾ-ಯಡಿಯೂರಪ್ಪ

ಆದರೆ ಇಂದಿಗೂ ಯಡಿಯೂರಪ್ಪನವರ ಹಿಡಿತ ಹಾಗೆ ಇದೆಯಾ? ಅವರು ಪ್ರಸ್ತುತವಾ? ಅಂದರೆ ಹಿಂದಿಗಿಂತಲೂ ಅವರೀಗ ಪಕ್ಷದಲ್ಲಿ/ ಕ್ಷೇತ್ರದಲ್ಲಿ ಹೆಚ್ಚು ಪ್ರಸ್ತುರತಾಗಿದ್ದಾರೆ. ಹಾಗಾಗಿಯೇ ಹಠಕ್ಕೆ ಬಿದ್ದು ತಮ್ಮ ಆಪ್ತರಾದ ಶೋಭಾ ಕರಂದ್ಲಾಜೆಗೆ ಟಿಕೆಟ್ ದಯಪಾಲಿಸಿ, ಹೆಲುವು ದಕ್ಕಿಸಿಕೊಡುವುದಾಗಿ ಘೋಷಿಸಿದ್ದಾರೆ.

ವೈಯಕ್ತಿಕವಾಗಿ ಶೋಭಾ ಹೆಗ್ಗಳಿಕೆ ಏನು?

ವೈಯಕ್ತಿಕವಾಗಿ ಶೋಭಾ ಹೆಗ್ಗಳಿಕೆ ಏನು?

ಇದರ ಹೊರತಾಗಿ, ವೈಯಕ್ತಿಕವಾಗಿ ಶೋಭಾ ಹೆಗ್ಗಳಿಕೆ ಏನು? ಅಂತ ನೋಡಿದಾಗ ...
ಶೋಭಾ ಇದೇ ಕರಾವಳಿಯ ಕೂಸು. ಜತೆಗೆ, ಆರೆಸ್ಸೆಸ್ ಕೂಸು ಸಹ. ಬಿಜೆಪಿ ಮತ್ತು ಆರೆಸ್ಸೆಸ್ ಅತ್ಯಂತ ಸಕ್ರಿಯವಾಗಿರುವ ಕ್ಷೇತ್ರದಲ್ಲಿ ಸಂಘ ಪರಿವಾರದಲ್ಲಿ ಆರಂಭದ ದಿನಗಳಿಂದಲೂ ಚೆನ್ನಾಗಿ ಗುರುತಿಸಿಕೊಂಡವರು. ಜಾತಿ ಸಮೀಕರಣದಲ್ಲೂ ಇವರದು ಮೇಲುಗೈ. ಜತೆಗೆ ಯಡಿಯೂರಪ್ಪನವರ ಶ್ರೀರಾಮರಕ್ಷೆ ಇದೆ. ಇದಕ್ಕೆಲ್ಲ ಪುಟವಿಟ್ಟಂತೆ ಮೋದಿ ಅಲೆಯೂ ಬಲವಾಗಿ ಬೀಸುತ್ತಿದೆ.

 ಜಯಪ್ರಕಾಶ್ ಹೆಗ್ಡೆ ಪ್ರಯಾಸ ಪಡದೆ ಗೆದ್ದಿದ್ದರು

ಜಯಪ್ರಕಾಶ್ ಹೆಗ್ಡೆ ಪ್ರಯಾಸ ಪಡದೆ ಗೆದ್ದಿದ್ದರು

ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ 2009ರಲ್ಲಿ ಡಿವಿ ಸದಾನಂದ ಗೌಡರು ನಿರಾಯಾಸವಾಗಿ ಗೆದ್ದುಬಂದಿದ್ದರು. ಆದರೆ ತಮ್ಮ ಗೆಲುವಿಗೆ ಕಾರಣವಾಗಿದ್ದವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ತಾವೇ ಮುಖ್ಯಮಂತ್ರಿಯಾದರು. ತತ್ಫಲವಾಗಿ ಉಪಚುನಾವಣೆ ನಡೆದಾಗ ಕಾಂಗ್ರೆಸ್ಸಿನ ಸಜ್ಜನ ಜಯಪ್ರಕಾಶ್ ಹೆಗ್ಡೆ ಅವರಿಗೆ ಬೆಳ್ಳಿತಟ್ಟೆಯಲ್ಲಿ ಕ್ಷೇತ್ರವನ್ನು ಕಾಣಿಕೆಯಾಗಿ ನೀಡುವಂತ ಪರಿಸ್ಥಿತಿಯನ್ನು ಬಿಜೆಪಿ ತಂದುಕೊಂಡಿತು. 2012ರಲ್ಲಿ ಕೆ ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯ ವಿ ಸುನೀಲ್ ಕುಮಾರ್ ವಿರುದ್ಧ ಹೆಚ್ಚು ಪ್ರಯಾಸ ಪಡದೆ ಗೆದ್ದರು.

ಅಖಂಡ ಕ್ಷೇತ್ರದಲ್ಲಿ ಮಹಿಳೆಯರದ್ದೇ ಕಲರವ:

ಅಖಂಡ ಕ್ಷೇತ್ರದಲ್ಲಿ ಮಹಿಳೆಯರದ್ದೇ ಕಲರವ:

ಉಡುಪಿ ಮತ್ತು ಚಿಕ್ಕಮಗಳೂರು ಪ್ರತ್ಯೇಕ ಕ್ಷೇತ್ರಗಳಲ್ಲಿ ಪ್ರಬುದ್ಧ ಮತದಾರರು ಇದುವರೆಗೂ ನಾಲ್ಕು ಬಾರಿ ಮಹಿಳೆಯರನ್ನು ಆರಿಸಿ, ಕಳುಹಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ 1978ರಲ್ಲಿ ಸಂಸದರಾಗಿದ್ದ ಡಿಬಿ ಚಂದ್ರೇಗೌಡರು ರಾಜೀನಾಮೆ ನೀಡಿ, ಇಂದಿರಾಗಾಂಧಿ ಸ್ಪರ್ಧೆಗೆ ಅವಕಾಶ ನೀಡಿ, ಅವರ ರಾಜಕೀಯ ಪುನರ್ಜನ್ಮಕ್ಕೆ ತ್ಯಾಗ ಮಾಡಿದ್ದರು.
ಅದಾದನಂತರ, 1984ರಲ್ಲಿ ಕಂಗ್ರೆಸ್ಸಿನ ಡಿಕೆ ತಾರಾದೇವಿ ಸಿಪಿಐನ ಬಿಕೆ ಸುಂದರೇಶ್ ವಿರುದ್ಧ ಗೆಲುವು ಸಾಧಿಸಿದ್ದರು. ಮತ್ತೆ, 1991ರಲ್ಲಿ ತಾರಾದೇವಿ, ಬಿಜೆಪಿಯ ಡಿಸಿ ಶ್ರೀಕಂಠಪ್ಪ ಅವರನ್ನು ಸೋಲಿಸಿದ್ದರು.

ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಿಂದ 4 ಬಾರಿ ಮಹಿಳೆಯರು

ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಿಂದ 4 ಬಾರಿ ಮಹಿಳೆಯರು

2004ರಲ್ಲಿ ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಮನೋರಮಾ ಮಧ್ವರಾಜ್ ಕಾಂಗ್ರೆಸ್ಸಿನ ವಿನಯಕುಮಾರ್ ಸೊರಕೆಯನ್ನು ಮಣಿಸಿದ್ದರು. ಒಟ್ಟಿನಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಿಂದ ನಾಲ್ಕು ಬಾರಿ ಮಹಿಳೆಯರು ಗೆದ್ದಿದ್ದಾರೆ.

ಹೆಗ್ಡೆ ಮತ್ತು ಶೋಭಾ ಇಬ್ಬರಿಗೂ ಆಲ್ ದಿ ಬೆಸ್ಟ್

ಹೆಗ್ಡೆ ಮತ್ತು ಶೋಭಾ ಇಬ್ಬರಿಗೂ ಆಲ್ ದಿ ಬೆಸ್ಟ್

ಈ ಬಾರಿಯೂ ಜಯಪ್ರಕಾಶ್ ಹೆಗ್ಡೆ ಅವರು ಅದೇ ಗೆಲುವನ್ನು ಸಾಧಿಸುತ್ತಾರಾ? ಅಥವಾ ಬಿಜೆಪಿ ಹವಾ ಜೋರಾಗಿದ್ದು, ಸೋಲೊಪ್ಪುತ್ತಾರಾ? ಮತದಾರರು ನೀಡುವ ತೀರ್ಪು ಮೇ 16ರಂದು ಹೊರಬೀಳಲಿದೆ, ಅಲ್ಲಿಯವರೆಗೂ ಕಾಯೋಣ. ಈ ಮಧ್ಯೆ ನೇರ ಹಣಾಹಣಿಗೆ ಇಳಿದಿರುವ ಜಯಪ್ರಕಾಶ್ ಹೆಗ್ಡೆ ಮತ್ತು ಶೋಭಾ ಕರಂದ್ಲಾಜೆ ಇಬ್ಬರಿಗೂ ಆಲ್ ದಿ ಬೆಸ್ಟ್ ಹೇಳುವ.

English summary
Lok Sabha polls 2014- Udupi-Chikmagalur constituency fight between BJP's Ex Minister Shobha Karandlaje and Congress sitting MP Jayaprakash Hegde.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X