ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಪ್ರಚಾರಕ್ಕೆ ಅಪ್ಪನ ಕೈಹಿಡಿದ ದಿವ್ಯಾ ಹೆಗ್ಡೆ

By Srinath
|
Google Oneindia Kannada News

ಕುಂದಾಪುರ, ಏ. 2: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮತ್ತೊಮ್ಮೆ ಜಯದ ನಗೆ ಬೀರಲು ಶ್ರಮಿಸುತ್ತಿರುವ ಹಾಲಿ ಸಂಸದ, ಕಾಂಗ್ರೆಸ್ಸಿನ ಕೆ ಜಯಪ್ರಕಾಶ್ ಹೆಗ್ಡೆಗೆ ಅವರ ಪುತ್ರಿ ದಿವ್ಯಾ ಹೆಗ್ಡೆ ಸಾಥ್ ನೀಡಿದ್ದಾರೆ.

Brand JP Hegde: 2012ರಲ್ಲಿ ನಡೆದ ಉಪಚುನಾವಣೆಯಲ್ಲಿ ಅಪ್ಪ ಜಯಪ್ರಕಾಶ್ ಹೆಗ್ಡೆ ಅವರನ್ನು ಚುನಾವಣಾ ಕಣದಲ್ಲಿ ಯಶಸ್ವಿಯಾಗಿ ಮಾರುಕಟ್ಟೆ ಮಾಡಿದ್ದ ದಿವ್ಯಾ ಜಯಪ್ರಕಾಶ್ ಹೆಗ್ಡೆ, ಈಗ ಮತ್ತೊಮ್ಮೆ ಎರಡೂ ಜಿಲ್ಲೆಗಳಲ್ಲಿ ಮತದಾರರ ಮನೆಮನೆಗೆ ತೆರಳಿ ಮತಬೇಟೆಯಲ್ಲಿ ತೊಡಗಿದ್ದಾರೆ.

ಪುರಾತನ ಕಾಂಗ್ರೆಸ್ ಪಕ್ಷವು ಪರಂಪರಾಗತ ಮತ ಬ್ಯಾಂಕ್ ಅನ್ನು ಹೊಂದಿದೆ. ಆದರೆ ಬದಲಾದ ಕಾಲಮಾನದಲ್ಲಿ ಅದನ್ನೇ ನೆಚ್ಚಿಕೊಳ್ಳುವ ಹಾಗಿಲ್ಲ. ಇದು ಈಗಿನ ಪೀಳಿಗೆಯ ದಿವ್ಯಾ ಹೆಗ್ಡೆಗೆ ಚೆನ್ನಾಗಿ ಅರ್ಥವಾದಂತಿದೆ. ಹಾಗಾಗಿ, ಅಪ್ಪನ ಗೆಲುವಿಗಾಗಿ ಮತದಾರರನ್ನು ತಲುಪಲು ಮಾಹಿತಿ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Lok Sabha Polls 2014- Udupi-Chikmagalur constituency: Divya Hegde marketing brand Jayaprakash Hegde

social media ಮೂಲಕ ಮತದಾರರ ಜತೆ ಸೋಷಿಯಲ್ ಆಗಿರುವ ದಿವ್ಯಾ, ಅಮೆರಿಕದ Chicago North Western Universityಯಲ್ಲಿ ಮಾರುಕಟ್ಟೆ ಮತ್ತು ಸಂವಹನ ವಿಷಯದಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 1.5 ಲಕ್ಷ ಮಂದಿ Facebook ಬಳಕೆದಾರರಿದ್ದಾರೆ ಎಂಬುದನ್ನು ಅರಿತಿರುವ ದಿವ್ಯಾ, ಅಪ್ಪನಿಗಾಗಿ ಸಾಕಷ್ಟು ಹೋಂವರ್ಕ್ ಮಾಡುತ್ತಿದ್ದಾರೆ. ಅಂದರೆ ಮನೆಯಿಂದಲೇ ಆನ್ ಲೈನ್ ಮುಖಾಂತರ ಲಕ್ಷಾಂತರ ಮಂದಿಯನ್ನು ತಲುಪಿ, ಅಪ್ಪನ ಸಾಧನೆಗಳನ್ನು ಪರಿಚಯಿಸುತ್ತಿದ್ದಾರೆ.

ಅಂದಹಾಗೆ 28 ವರ್ಷದ ದಿವ್ಯಾ, ಬೆಂಗಳೂರಿನಲ್ಲಿ ಸ್ವಂತದ marketing and branding consultancy ಸಂಸ್ಥೆಯನ್ನು ಹೊಂದಿದ್ದಾರೆ. ಮೂಲತಃ ಕುಂದಾಪುರದವರಾದ ಕುಂದಾಪುರ ಜಯಪ್ರಕಾಶ್ ಹೆಗ್ಡೆ 2008ರಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಮತ್ತು 2009ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸೋತಿದ್ದರು. ಅದಾದ ನಂತರ ಎಚ್ಚೆತ್ತ ಮಗಳು ದಿವ್ಯಾ social media ಮೂಲಕ ರಂಗ ಪ್ರವೇಶ ಮಾಡಿದರು.

ತತ್ಫಲವಾಗಿ ಇಂದು, ಸಾಮಾಜಿಕ ಜಾಲತಾಣವೇ ಅಂತಿಮ ಅಲ್ಲದಿದ್ದರೂ ಅಪ್ಪನ ಹೆಸರು (brand JP Hegde) ಜನಗಳ ಮಧ್ಯೆ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೊನೆಯ ಹಂತದಲ್ಲಿ ಧನಂಜಯ ಕುಮಾರ್ ಅವರು ಬಿಜೆಪಿಯಿಂದ ಸಿಡಿದೆದ್ದು ಜೆಡಿಎಸ್ ಕೈಹಿಡಿದಿದ್ದರಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್ಸಿಂದ ಹಾಲಿ ಸಂಸದ ಜಯಪ್ರಕಾಶ್ ಹೆಗ್ಡೆ ಸ್ಪರ್ಧಿಸಿದ್ದಾರೆ.

English summary
Lok Sabha Polls 2014- Udupi Chikmagalur constituency: Divya Hegde marketing brand Jayaprakash Hegde. Divya Hegde successfully 'marketing' her father Jayaprakash Hegde, both online and offline, to reach voters in the constituency spread over two districts. Divya, The MP's daughter, who holds an MS in integrated marketing and communications from North Western University, Chicago, US, has done her homework. She says there are a minimum of 1.5 lakh Facebook users in the two districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X