ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರ್ಗಿ ಜಯಪ್ರಕಾಶ್ ಹೆಗ್ಡೆ ವ್ಯಕ್ತಿ ಪರಿಚಯ

By Mahesh
|
Google Oneindia Kannada News

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ 2012ರ ಉಪಚುನಾವಣೆಯ ಮೂಲಕ ಆಯ್ಕೆಯಾದ ಸಂಸತ್ ಸದಸ್ಯ ಕೊರ್ಗಿ ಜಯಪ್ರಕಾಶ್ ಹೆಗ್ಡೆಯವರು ವೃತ್ತಿಯಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಯುವ ಮನಸ್ಸಿನ ಅನುಭವಿ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಅವರು ಲೋಕಸಭೆ ಚುನಾವಣೆ 2014ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮತ್ತೊಮ್ಮೆ ಸಂಸತ್ ಪ್ರವೇಶ ಬಯಸಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಕಣದಲ್ಲಿರುವುದರಿಂದ ಬಿರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ.

ಸಾಮಾಜಿಕ ಜಾಲತಾಣ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಭಾರತ್ ನಿರ್ಮಾಣ್ ಯಾತ್ರೆ ಪಾದಯಾತ್ರೆಗಳ ಬಗ್ಗೆ ಅಭಿಮಾನಿಗಳಿಗೆ ಮತದಾರರಿಗೆ ಕಾಲ ಕಾಲಕ್ಕೆ ಸೂಚನೆ ನೀಡುವ ಮೂಲಕ ಜೆಪಿ ಹೆಗ್ಡೆ ಅವರು ಜನಪ್ರಿಯತೆ ಗಳಿಸಿದ್ದಾರೆ. ಯುವ ಸಮುದಾಯ ಹಾಗೂ ಕ್ಷೇತ್ರದಲ್ಲಿ ಹೆಚ್ಚಿರುವ ಮಹಿಳಾ ಮತದಾರರ ಮೆಚ್ಚುಗೆ ಪಡೆದಿರುವ ಜೆಪಿ ಹೆಗ್ಡೆ ಅವರು ಮತ್ತೊಮ್ಮೆ ಜನ ಮನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. [ಸಂಸದ ಜೆಪಿ ಹೆಗ್ಡೆ ಪಾದಯಾತ್ರೆ ವರದಿ]

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಂಟ ಸಮುದಾಯದ ಚಂದ್ರಶೇಖರ್ ಹೆಗ್ಡೆ ದಂಪತಿಗಳಿಗೆ ಜಯಪ್ರಕಾಶ್ ಅವರು ಜನಿಸಿದರು. ಯುವ ನಾಯಕರಾಗಿ ಬೆಳೆದ ಹೆಗ್ಡೆ, ಚಿಕ್ಕ ವಯಸ್ಸಿನಲ್ಲೇ ರಾಜಕೀಯದತ್ತ ಆಕರ್ಷಿತರಾಗಿದ್ದರು. ಹೆಗ್ಡೆ ಅವರ ಕುಟುಂಬದಲ್ಲಿ ಪತ್ನಿ ಶೋಭಾ ಹೆಗ್ಡೆ ಹಾಗೂ ಪುತ್ರ ನಿಶಾಂತ್ ಮತ್ತು ಪುತ್ರಿ ದಿವ್ಯಾ ಇದ್ದಾರೆ. ಜೆಪಿ ಹೆಗ್ಡೆ ಅವರ ವ್ಯಕ್ತಿ ಚಿತ್ರದ ಪರಿಚಯ ಮುಂದೆ ಓದಿ... [ಬಿರುಸಿನ ಮತಯಾಚನೆ ಚಿತ್ರಗಳು]

ಬ್ಯಾಂಕ್ ವೃತ್ತಿ, ಯುವಜನೋತ್ಸವ ನೇತೃತ್ವ

ಬ್ಯಾಂಕ್ ವೃತ್ತಿ, ಯುವಜನೋತ್ಸವ ನೇತೃತ್ವ

* 1972-78ರ ಅವಧಿಯಲ್ಲಿ ವಿಜಯ ಬ್ಯಾಂಕ್ ನೌಕರರ ಯೂನಿಯನ್ ‌ನ ಉಪಾಧ್ಯಕ್ಷರಾಗಿ ನಂತರ ಅಧ್ಯಕ್ಷರಾಗಿ ದುಡಿದರು.
* ಅಖಿಲ ಭಾರತ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಪ್ರವೇಶಿಸಿದರು.
* 1987ರಲ್ಲಿ ಸ್ಪೈನ್ ‌ನ ವೆಲೆನ್ಸಿಯಾದಲ್ಲಿ ನಡೆದ ಇಂಟರ್ ‌ನ್ಯಾಷನಲ್ ಯೂನಿಯನ್ ಆಫ್ ಸೋಷಿಯಲಿಸ್ಟ್ ಯೂತ್ ‌ನ 'ಯುವಜನೋತ್ಸವ"ದಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು.
* ಯುವ ರಾಜಕೀಯ ನೇತಾರರ ಅಮೆರಿಕನ್ ಕೌನ್ಸಿಲ್ ಏರ್ಪಡಿಸಿದ ಪ್ರಜಾಪ್ರಭುತ್ವ ಸಮ್ಮೇಳನದಲ್ಲಿ ಹೆಗ್ಡೆ ಅವರು ಎರಡು ಬಾರಿ(1986, 1989) ಭಾರತವನ್ನು ಪ್ರತಿನಿಧಿಸಿದ್ದರು.
* 1991ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾಮನ್ವೆಲ್ತ್ ಯುವ ಕಾರ್ಯಕ್ರಮದಲ್ಲೂ ಅವರು ಭಾರತದ ಪ್ರತಿನಿಧಿಯಾಗಿದ್ದರು.

ಸೋಲುಗಳನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡರು

ಸೋಲುಗಳನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡರು

* ಜನತಾದಳದ ಮೂಲಕ ರಾಜ್ಯದ ರಾಜಕೀಯ ರಂಗಕ್ಕೆ ಪ್ರವೇಶ ಪಡೆದ ಜಯಪ್ರಕಾಶ್ ಹೆಗ್ಡೆ, 1985ರ ಮೊದಲ ಪ್ರಯತ್ನದಲ್ಲೇ ಸೋಲುಂಡಿದ್ದರು.
* 1994ರಲ್ಲಿ ಬ್ರಹ್ಮಾವರ ಕ್ಷೇತ್ರದಲ್ಲೇ ಮೊದಲ ಬಾರಿ ಜಯಗಳಿಸುವ ಮೂಲಕ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದರು. ನಂತರ ಬ್ರಹ್ಮಾವರ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವವರೆಗೆ ಸತತ 11 ವರ್ಷ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
* 1994-99ರ ಅವಧಿಯಲ್ಲಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿ ಜನ ಮೆಚ್ಚುಗೆ ಕಾರ್ಯಗಳನ್ನು ಮಾಡಿದರು.
* 1999ರಲ್ಲಿ ಅವರು ಮತ್ತೆ ಇದೇ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದರು.
* 2004 ರಲ್ಲಿ ನಡೆದ 12ನೇ ವಿಧಾನಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧಿಸಿದರು.

ಸೋಲುಂಡರೂ ಕ್ಷೇತ್ರದ ಜನತೆ ಪರ ದುಡಿದರು

ಸೋಲುಂಡರೂ ಕ್ಷೇತ್ರದ ಜನತೆ ಪರ ದುಡಿದರು

* 2008 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಂದಾಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಹಾಲಾಡಿ ಶ್ರೀನಿವಾಸ ಶೆಟ್ಟರ ವಿರುದ್ಧ ಸೋಲನುಭವಿಸಿದರು.
* 2009ರ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಅವರು ಡಿ.ವಿ.ಸದಾನಂದ ಗೌಡರಿಂದ ಕೇವಲ 27,018 ಮತಗಳಿಂದ ಸೋತರು.
* ಡಿವಿ ಸದಾನಂದ ಗೌಡ ಅವರ ರಾಜೀನಾಮೆಯಿಂದ 2012ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿ ಸುನಿಲ್ ಕುಮಾರ್ ಕಟೀಲ್ ಅವರನ್ನು 45,000 ಮತಗಳ ಅಂತರದಿಂದ ಸೋಲಿಸಿದರು.

 ಕ್ರೀಡಾಪ್ರೇಮಿ ಜಯಪ್ರಕಾಶ್ ಹೆಗ್ಡೆ:

ಕ್ರೀಡಾಪ್ರೇಮಿ ಜಯಪ್ರಕಾಶ್ ಹೆಗ್ಡೆ:

ಕ್ರೀಡಾಪ್ರೇಮಿ ಜಯಪ್ರಕಾಶ್ ಹೆಗ್ಡೆ: ಉಡುಪಿಯ ಬ್ರಹ್ಮಾವರದಲ್ಲಿ ಹಲವು ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಕ್ರಿಕೆಟ್ ಪ್ರೇಮಿಯಾಗಿ ಕರ್ನಾಟಕ ಪ್ರೀಮಿಯರ್ ಲೀಗ್ ‌ನಲ್ಲಿ ಶಿವಮೊಗ್ಗ ತಂಡ (ಮಲ್ನಾಡ್ ಗ್ಲ್ಯಾಡಿಯೇಟರ್ಸ್)ದ ಮಾಲೀಕರಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಮತ್ತೊಮ್ಮೆ ಕೆಪಿಲ್ ಟೂರ್ನಿ ನಡೆಸುವ ವಿಶ್ವಾಸ ವ್ಯಕ್ತಪಡಿಸಿರುವ ಕೆಎಸ್ ಸಿಎಗೆ ಜೆಪಿ ಹೆಗ್ಡೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜನನಾಯಕರಾಗಿ ಬೆಳೆದ ಜಯಪ್ರಕಾಶ್

ಜನನಾಯಕರಾಗಿ ಬೆಳೆದ ಜಯಪ್ರಕಾಶ್

ಜಡ್ಜ್ ಚಂದ್ರಶೇಖರ್ ಹೆಗ್ದೆ ಅವರ ಪುತ್ರರಾಗಿ ವಕೀಲ ವೃತ್ತಿಯನ್ನು ಮೊದಲಿಗೆ ಅಪ್ಪಿಕೊಂಡ ಜಯಪ್ರಕಾಶ್ ಅವರು ನಂತರದ ದಿನಗಳಲ್ಲಿ ಜನನಾಯಕರಾಗಿ ಬೆಳೆದರು. ಸುಮಾರು 25 ವರ್ಷಗಳ ಕಾಲದಿಂದ ರಾಜಕೀಯದಲ್ಲಿ ಉತ್ತಮ ಹೆಸರು ಪಡೆದಿರುವ ಹೆಗ್ಡೆ ಅವರಿಗೆ ಈ ಬಾರಿ ಅಗ್ನಿಪರೀಕ್ಷೆಯಲ್ಲಿ ಗೆಲ್ಲುವ ವಿಶ್ವಾಸವಿದೆ.

ಜೆಪಿ ಸಾಧನೆಗಳ ಬಗ್ಗೆ ವಿಭಿನ್ನ ಪ್ರಚಾರ

ಜೆಪಿ ಸಾಧನೆಗಳ ಬಗ್ಗೆ ವಿಭಿನ್ನ ಪ್ರಚಾರ

ಜೆಪಿ ಹೆಗ್ಡೆ ಅವರು ತಮ್ಮ ಸಂಸತ್ ಸದಸ್ಯತ್ವದ ಅವಧಿಯಲ್ಲಿ ಮಾಡಿರುವ ಸಾಧನೆಗಳ ಪಟ್ಟಿಯನ್ನು ಹಾಗೂ ಈ ಬಾರಿ ಚುನಾವಣೆ ಪ್ರಚಾರ ಕಾರ್ಯದ ಬಗ್ಗೆ ಮಾಹಿತಿಯನ್ನು ತಮ್ಮ ಯುವ ಮತದಾರರಿಗೆ ಫೇಸ್ ಬುಕ್, ಟ್ವಿಟ್ಟರ್ ಮೂಲಕ ತಲುಪಿಸುತ್ತಿದ್ದಾರೆ. ಜೆಪಿ ಹೆಗ್ಡೆ ಅವರ ಅಧಿಕೃತ ಖಾತೆಗಳ ವಿವರ ಚಿತ್ರದಲ್ಲಿದೆ ನೋಡಿ

English summary
Korgi Jayaprakash Hegde is an Indian politician who has been a Minister for Ports and Fisheries in the Government of Karnataka. He is currently a Member of Parliament representing Udupi Chikmagalur (Lok Sabha constituency) following by elections in 2012. Now he is contesting for Lok Sabha Elections 2014 with same constituency here is the brief profile
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X