ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ.ಕೃಷ್ಣಾ..ಅವ್ರದ್ದು ಕನಕ ನಡೆ, ಇವ್ರದ್ದು ಸ್ವಾಭಿಮಾನದ ನಡಿಗೆ

ಅಕ್ಟೋಬರ್ 23ರಂದು ಯುವ ಬ್ರಿಗೇಡ್ ' ಕನಕ ನಡೆ' ಎನ್ಜುವ ಹೆಸರಿನಲ್ಲಿ, ಅದೇ ದಿನ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ 'ಸ್ವಾಭಿಮಾನಿದ ನಡಿಗೆ' ಎನ್ನುವ ಹೆಸರಿನಲ್ಲಿ ತಿರುಗೇಟು ನೀಡಲು ಉಡುಪಿಯಲ್ಲಿ ಸಜ್ಜಾಗುತ್ತಿದೆ.

By Balaraj
|
Google Oneindia Kannada News

ಬೆಂಗಳೂರು/ಉಡುಪಿ, ಅ 20: ಅಕ್ಟೋಬರ್ ಒಂಬತ್ತರಂದು ನಾಡಿನ ಪ್ರಸಿದ್ದ ಹಿಂದೂ ಧಾರ್ಮಿಕ ಕ್ಷೇತ್ರ ಉಡುಪಿಯಲ್ಲಿ ನಡೆದ 'ಚಲೋ ಉಡುಪಿ' ಕಾರ್ಯಕ್ರಮದ ಅಡ್ಡಪರಿಣಾಮದ ಗಾಳಿ ಬಲವಾಗಿ ಬೀಸುತ್ತಿದೆ.

ಈಗಾಗಲೇ ಒಂದು ಸುತ್ತಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಉಡುಪಿಯಲ್ಲಿ, ಇದೇ ಭಾನುವಾರ (ಅ 23) ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಜ್ಜಾಗುತ್ತಿದೆ. ಅಂದು ಒಂದು ಪ್ರತಿಭಟನೆಗೆ ವಿರುದ್ದವಾಗಿ ಇನ್ನೊಂದು ಪ್ರತಿಭಟನೆ ನಡೆಯಲಿದೆ. (ಪಂಕ್ತಿಭೇದ ಇದ್ದರೆ ಉಡುಪಿಗೆ ಯಾಕೆ ಹೋಗ್ತೀರಾ, ಗೌಡ)

ಅ 9ರಂದು ನಡೆದಿದ್ದ ಚಲೋ ಉಡುಪಿ ಕಾರ್ಯಕ್ರಮಕ್ಕೆ ವಿರುದ್ದವಾಗಿ ಚಕ್ರವರ್ತಿ ಸೂಲಿಬೆಲೆ ಮುಂದಾಳುತ್ವದಲ್ಲಿ ಯುವ ಬ್ರಿಗೇಡ್ ' ಕನಕ ನಡೆ' ಎನ್ಜುವ ಹೆಸರಿನಲ್ಲಿ ಅಕ್ಟೋಬರ್ 23ರಂದು ಪ್ರತಿಭಟನೆ ಆಯೋಜಿಸಿದೆ.

ಈ ಪ್ರತಿಭಟನೆಗೆ ತಿರುಗೇಟು ನೀಡಲು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ 'ಸ್ವಾಭಿಮಾನಿದ ನಡಿಗೆ' ಎನ್ನುವ ಹೆಸರಿನಲ್ಲಿ ಅದೇ ದಿನ, ಅದೇ ಹೊತ್ತಿನಲ್ಲಿ, ಅದೇ ಜಾಗದಲ್ಲಿ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸುವ ಮೂಲಕ ತಿರುಗೇಟು ನೀಡಲು ಸಜ್ಜಾಗುತ್ತಿದೆ. (ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೆ ಸುಮ್ನೆ ಬಿಡ್ತೀವಾ)

'ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು' ಎನ್ನುವ ಮೂಲ ಉದ್ದೇಶದಿಂದ ಆಯೋಜಿಸಲಾಗಿದ್ದ ಉಡುಪಿ ಚಲೋ ಪ್ರತಿಭಟನೆ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಪಂಕ್ತಿಭೇದ, ಪೇಜಾವರ ಶ್ರೀಗಳ ಸುತ್ತಮುತ್ತ ತಿರುಗಲಾರಂಭಿಸಿತು. ಮುಂದೆ ಓದಿ..

ಉಡುಪಿ ಮಠ ಮುತ್ತಿಗೆ

ಉಡುಪಿ ಮಠ ಮುತ್ತಿಗೆ

ಇನ್ನೆರಡು ತಿಂಗಳಲ್ಲಿ ಉಡುಪಿ ಕೃಷ್ಣಮಠದಲ್ಲಿ ಪಂಕ್ತಿಭೇದ ನಿಷೇಧವಾಗದಿದ್ದರೆ, ಕೃಷ್ಣಮಠಕ್ಕೆ ಮುತ್ತಿಗೆ ಹಾಕುವುದಾಗಿ ಚಲೋ ಉಡುಪಿ ಕಾರ್ಯಕ್ರಮದಲ್ಲಿ ಘೋಷಿಸಲಾಗಿತ್ತು. ಜೊತೆಗೆ ಹಿರಿಯರು ಎನ್ನುವ ಭೇದಭಾವವಿಲ್ಲದೇ ಪೇಜಾವರ ಶ್ರೀಗಳ ವಿರುದ್ದ ಭಾಷಣಕಾರರು ಹೇಳಿಕೆ ನೀಡಿದ್ದರು.

ಚಕ್ರವರ್ತಿ ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆ

ಈ ಎಚ್ಚರಿಕೆಗೆ ವಿರುದ್ದವಾಗಿ, ಉಡುಪಿ ಚಲೋ ಕಾರ್ಯಕ್ರಮದ ನಂತರ ಉಡುಪಿಯನ್ನು ಸ್ಚಚ್ಚಗೊಳಿಸುತ್ತೇವೆ ಎನ್ನುವ ಮೂಲ ಉದ್ದೇಶವನ್ನು ಇಟ್ಟುಕೊಂಡು, ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ 'ಕನಕ ನಡೆ' ಕಾರ್ಯಕ್ರಮವನ್ನು ಅ.23ರಂದು ಆಯೋಜಿಸಿದೆ.

ಪೇಜಾವರ ಶ್ರೀ

ಪೇಜಾವರ ಶ್ರೀ

ಯುವ ಬ್ರಿಗೇಡ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು, ಕನಕ ನಡೆ ಪ್ರತಿಭಟನೆಯನ್ನು ರದ್ದುಗೊಳಿಸಲು ಸಂಘಟಕರಿಗೆ ಹೇಳಿ, ನಿಮ್ಮ ಮಾತನ್ನು ಅವರು ಕೇಳುತ್ತಾರೆಂದು ಪೇಜಾವರ ಶ್ರೀಗಳಲ್ಲಿ ಮನವಿ ಮಾಡಿದ್ದರು. ಅನಾವಶ್ಯಕವಾಗಿ ಕೆಲವರು ನನ್ನ ಹೆಸರನ್ನು ಎಳೆ ತರುತ್ತಿದ್ದಾರೆ. ಹಾಗಾಗಿ, ಪ್ರತಿಭಟನಾಕಾರರಲ್ಲಿ ಮನವಿ ಮಾಡಲು ಸಾಧ್ಯವಿಲ್ಲ ಎಂದು ಪೇಜಾವರ ಶ್ರೀಗಳು ಪೊಲೀಸರಿಗೆ ಹೇಳಿದ್ದರು.

ಕನಕನ ನಡೆ Vs ಸ್ವಾಭಿಮಾನದ ನಡಿಗೆ

ಕನಕನ ನಡೆ Vs ಸ್ವಾಭಿಮಾನದ ನಡಿಗೆ

ಈಗ ಇದಕ್ಕೆ ಪ್ರತಿಯಾಗಿ ಸ್ವಾಭಿಮಾನದ ನಡಿಗೆ ಎನ್ನುವ ಪ್ರತಿಭಟನಾ ಕಾರ್ಯಕ್ರಮವನ್ನು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಕಾರ್ಯಕ್ರಮ ಅಂದೇ ಆಯೋಜಿಸುವ ಮೂಲಕ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ.

ಪೋಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್

ಪೋಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್

ಪೋಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರನ್ನು ಭೇಟಿ ಮಾಡಿದ ದಲಿತ-ದಮನಿತರ ಹೋರಾಟ ಸಮಿತಿ, ದಲಿತರು ನಡೆದು ಹೋದ ಹಾದಿಯನ್ನು ಸ್ವಚ್ಚ ಮಾಡೋಣ ಬನ್ನಿ ಎಂದು ಹೇಳಿಕೆ ನೀಡಿ ಅಸ್ಪೃಶ್ಯತಾ ಆಚರಣೆಗೆ ಕರೆ ನೀಡಿದ ಚಕ್ರವರ್ತಿ ಸೂಲಿಬೆಲೆ ಮತ್ತು ಕನಕ ನಡೆ ವಿರೋಧಿಸಿ ಉಡುಪಿಗೆ ಬಂದವರು ವಾಪಸ್ ಯಾರೂ ಹೋಗಲ್ಲ ಎಂಬ ಉದ್ದಟತನದ ಹೇಳಿಕೆ ನೀಡಿರುವವರ ವಿರುದ್ದ ದೂರು ನೀಡಿದೆ.

ಮುತಾಲಿಕ್, ಸೂಲಿಬೆಲೆ ಇತರರು

ಮುತಾಲಿಕ್, ಸೂಲಿಬೆಲೆ ಇತರರು

ಸಮಿತಿ, ಚಕ್ರವರ್ತಿ ಸೂಲಿಬೆಲೆ, ಪ್ರಮೋದ್ ಮುತಾಲಿಕ್, ಉಡುಪಿ ಭಜರಂಗದಳದ ಜಿಲ್ಲಾ ಸಂಚಾಲಕ, ಉಡುಪಿ ವಿಎಚ್ಪಿ ಜಿಲ್ಲಾಧ್ಯಕ್ಷರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆ, ಸಂವಿಧಾನ ವಿರೋಧಿ ನಡೆ ಮತ್ತು ಕೊಲೆ ಬೆದರಿಕೆ ಆಪಾದನೆಯ ಮೇಲೆ ಬಂಧಿಸಲು ದೂರು ನೀಡಲಾಗಿದೆ.

English summary
Udupi Chalo effect: Two protest i.e. Kanakana Nadige and Swabhimanada Nadige protest organized by two different organizations on Oct 23rd at Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X