ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಪ್ರಕ್ರಿಯೆ ಆರಂಭ

By Manjunatha
|
Google Oneindia Kannada News

ಕಾರವಾರ, ನವೆಂಬರ್ 18 : ರಾಜ್ಯದ ವಿದ್ಯುತ್ ಭರ ನೀಗಿಸಲು ಸತತ ಪ್ರಯತ್ನ ಜಾರಿಯಲ್ಲಿದ್ದು ಅದಕ್ಕೆ ಪೂರಕವೆಂಬಂತೆ ಕೈಗಾದಲ್ಲಿ 5 ಮತ್ತು 6ನೇ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಪ್ರಕ್ರಿಯೆ ಚಾಲನೆ ಗೊಳಿಸಲಾಗಿದೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೈಗಾ ಪ್ರಭಾರ ಸ್ಥಾನಿಕ ನಿರ್ದೇಶಕ ಸಂಜಯಕುಮಾರ್ ಜನವರಿ ತಿಂಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪರಿಸರ ಅಧ್ಯಯನ ವರದಿ ಜತೆಗೆ ಅರ್ಜಿ ಸಲ್ಲಿಸಲಾಗುವುದು ಹಾಗೂ ಪರಿಸರ ಸಚಿವಾಲಯದ ಅನುಮತಿ ಪಡೆದು, ಸಾರ್ವಜನಿಕ ಅಹವಾಲು ಸಭೆ ನಡೆಸಲಾಗುವುದು ಎಂದರು.

Two new nuclear plant contraction is on

ಕೈಗಾ ವಿಸ್ತರಣೆಗೆ ಈಗಾಗಲೇ ಅಗತ್ಯ ಭೂಮಿ ಲಭ್ಯವಿದ್ದು, ಹೊಸದಾಗಿ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಸ್ಥಾವರದಿಂದ ಭೂಮಿ ಕಳೆದುಕೊಳ್ಳುವೆವೆಂಬ ಭಯದಲ್ಲಿದ್ದ ರೈತರಿಗೆ ಅಭಯ ನೀಡಿದರು.

ಹೊಸ ಘಟಕಗಳು ತಲಾ 700 ಮೆಗಾವಾಟ್ ಸಾಮರ್ಥ್ಯದ್ದಾಗಿದ್ದು ಹೊಸ ಸ್ಥಾವರ ನಿರ್ಮಾಣಗೊಂಡರೆ ರಾಜ್ಯಕ್ಕೆ ಇನ್ನಷ್ಟು ವಿದ್ಯುತ್ ಲಭ್ಯವಾಗಲಿದ್ದು, ಇದು ಪರೋಕ್ಷವಾಗಿ ರಾಜ್ಯದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೈಗಾ ಅಣು ಘಟಕಗಳು ಹೆಚ್ಚು ಸುರಕ್ಷಿತವಾದ ಘಟಕಗಳಾಗಿದ್ದು ಸ್ಥಳೀಯರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

English summary
Two New Nuclear plant construction is on at Kaiga. Kaiga director committee already submitted the necessary papers to green ministry
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X