ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಮೈಸೂರು ನಡುವೆ ಇನ್ನೆರಡು ಮೆಮು ರೈಲು ಸಂಚಾರ

|
Google Oneindia Kannada News

ಬೆಂಗಳೂರು, ಜೂನ್ 20 : ಬೆಂಗಳೂರು-ಮೈಸೂರು ನಡುವೆ ಇನ್ನೆರಡು ಮೆಮು ರೈಲುಗಳ ಸಂಚಾರ ಆರಂಭವಾಗಲಿದೆ. ನೈಋತ್ಯ ರೈಲ್ವೆ ಬೆಂಗಳೂರು ವಲಯ ಹಾಲಿ ಸಂಚಾರ ನಡೆಸುತ್ತಿರುವ ಎರಡು ಪ್ಯಾಸೆಂಜರ್ ರೈಲುಗಳನ್ನು ಮೆಮು ರೈಲುಗಳಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸಿದೆ.

ಡೀಸೆಲ್ ಇಂಜಿನ್ ಹೊಂದಿರುವ ಪ್ಯಾಸೆಂಜರ್ ರೈಲುಗಳಾದ 56237/38, 56231/32 ಬೆಳಗ್ಗೆ ಮತ್ತು ಸಂಜೆ ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುತ್ತಿವೆ. ಇವುಗಳನ್ನು ವಿಶೇಷ ವಿದ್ಯುತ್ ಚಾಲಿತ ಮೆಮು ರೈಲುಗಳಾಗಿ ಪರಿವರ್ತನೆ ಮಾಡಲಾಗುತ್ತದೆ.

ತುಮಕೂರು-ಗುಬ್ಬಿ ಜೋಡಿ ಹಳಿ ರೈಲು ಸಂಚಾರಕ್ಕೆ ಮುಕ್ತತುಮಕೂರು-ಗುಬ್ಬಿ ಜೋಡಿ ಹಳಿ ರೈಲು ಸಂಚಾರಕ್ಕೆ ಮುಕ್ತ

2018ರ ಡಿಸೆಂಬರ್ 26ರಿಂದ ಒಂದು ಮೆಮು ರೈಲು ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುತ್ತಿದೆ. ಈಗ ಎರಡು ಪ್ಯಾಸೆಂಜರ್ ರೈಲುಗಳನ್ನು ಮೆಮು ರೈಲುಗಳಾಗಿ ಪರಿವರ್ತಿಸಿ ಉಭಯ ನಗರಗಳ ನಡುವೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ರೈಲುಗಳಲ್ಲಿ ಟಿ.ವಿ ಇದೆ, ಆದರೆ ಪ್ರಯೋಜನ ಇಲ್ಲರೈಲುಗಳಲ್ಲಿ ಟಿ.ವಿ ಇದೆ, ಆದರೆ ಪ್ರಯೋಜನ ಇಲ್ಲ

Two more MEMU train between Bengaluru-Mysuru

ಪ್ಯಾಸೆಂಜರ್ ರೈಲಿನಲ್ಲಿ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ದರ 30 ರೂ. ಇದೆ. ಮೆಮು ರೈಲುಗಳಾಗಿ ಪರಿವರ್ತನೆ ಮಾಡಿದರೆ ರೈಲು ಸಂಚಾರದ ಸಮಯ ಮಾತ್ರ ಬದಲಾವಣೆಯಾಗಲಿದೆ. ದರವನ್ನು ಹೆಚ್ಚಳ ಮಾಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗ ಕಾಮಗಾರಿ ಆರಂಭಿಸಿತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗ ಕಾಮಗಾರಿ ಆರಂಭಿಸಿ

ವೇಳಾಪಟ್ಟಿ : ಪ್ರಸ್ತುತ 56231/32 ರೈಲು ಮೈಸೂರಿನಿಂದ ಬೆಳಗ್ಗೆ 6.10ಕ್ಕೆ ಹೊರಟು ಬೆಂಗಳೂರಿಗೆ 9.15ಕ್ಕೆ ತಲುಪುತ್ತಿದೆ. ಬೆಂಗಳೂರಿನಿಂದ ಬೆಳಗ್ಗೆ 9.20ಕ್ಕೆ ಹೊರಟು ಮಧ್ಯಾಹ್ನ 12.45ಕ್ಕೆ ಮೈಸೂರಿಗೆ ತಲುಪುತ್ತಿದೆ.

56237/38 ರೈಲು ಮಧ್ಯಾಹ್ನ 3 ಗಂಟೆಗೆ ಮೈಸೂರನ್ನು ಬಿಟ್ಟು 6.15ಕ್ಕೆ ಬೆಂಗಳೂರಿಗೆ ಬರುತ್ತಿದೆ. ಸಂಜೆ 7 ಗಂಟೆಗೆ ಬೆಂಗಳೂರು ಬಿಟ್ಟು ರಾತ್ರಿ 10.20ಕ್ಕೆ ಮೈಸೂರಿಗೆ ತಲುಪುತ್ತಿದೆ.

ಬದಲಾದ ವೇಳಾಪಟ್ಟಿ : ನೈಋತ್ಯ ರೈಲ್ವೆ ಪ್ಯಾಸೆಂಜರ್ ರೈಲುಗಳನ್ನು ಮೆಮು ರೈಲುಗಳಾಗಿ ಪರಿವರ್ತನೆ ಮಾಡಿದ ಬಳಿಕ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಿದೆ.

56231/32 ರೈಲು ಬೆಳಗ್ಗೆ 5.50ಕ್ಕೆ ಮೈಸೂರಿನಿಂದ ಹೊರಟು ಬೆಳಗ್ಗೆ 9ಕ್ಕೆ ಬೆಂಗಳೂರು ತಲುಪಲಿದೆ. ಬೆಳಗ್ಗೆ 9.10ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12.30ಕ್ಕೆ ಮೈಸೂರು ತಲುಪಲಿದೆ.

56237/38 ರೈಲು ಮಧ್ಯಾಹ್ನ 1.45ಕ್ಕೆ ಮೈಸೂರಿನಿಂದ ಹೊರಟು ಸಂಜೆ 5ಕ್ಕೆ ಬೆಂಗಳೂರು ತಲುಪಲಿದೆ. ಸಂಜೆ 7ಕ್ಕೆ ಬೆಂಗಳೂರು ಬಿಟ್ಟು ರಾತ್ರಿ 11ಕ್ಕೆ ಮೈಸೂರು ತಲುಪಲಿದೆ.

English summary
Two more MEMU train will run between Bengaluru-Mysuru soon. South western railway soon convert two passenger train as MEMU rail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X