ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ಗಾಂಧಿ ಅಚ್ಚರಿ ನಿರ್ಧಾರದ ಹಿಂದಿದೆ ಈ ಮೂರು ಕಾರಣಗಳು

|
Google Oneindia Kannada News

ಎಐಸಿಸಿ ಮತ್ತು ಕೆಪಿಸಿಸಿಯಲ್ಲಿ ಹಲವು ಬದಲಾವಣೆಗಳು ನಿಧಾನವಾಗಿಯಾದರೂ ಆಗುತ್ತಿದೆ. ವಿವಿಧ ಹುದ್ದೆಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಗುತ್ತಿದೆ. ಪಕ್ಷದ ಹಿರಿಯ ಮುಖಂಡರ ಒತ್ತಡವೂ ಕೂಡಾ ಇದೇ ಆಗಿತ್ತು.

ಕೆಪಿಸಿಸಿ ಅಧ್ಯಕ್ಷರನ್ನಾಗಿ ಡಿ.ಕೆ.ಶಿವಕುಮಾರ್ ಅವರನ್ನು ನೇಮಿಸಿದ್ದಾಗ, ಅವರ ಜೊತೆ ಮೂವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅದರಲ್ಲಿ ಈಶ್ವರ ಖಂಡ್ರೆಯವರು ಕಲ್ಯಾಣ ಕರ್ನಾಟಕದವರಾದರೆ, ಸಲೀಂ ಅಹ್ಮದ್ ಮತ್ತು ಸತೀಶ್ ಜಾರಕಿಹೊಳಿ ಉತ್ತರ ಕರ್ನಾಟಕದ ಭಾಗದವರು.

ಕೃಷಿ ಕಾಯ್ದೆ: ಕೇಂದ್ರ ಸರ್ಕಾರದ ಕಿವಿ ಹಿಂಡುವ ಪ್ರಶ್ನೆ ಕೇಳಿದ ಕೆಪಿಸಿಸಿ! ಕೃಷಿ ಕಾಯ್ದೆ: ಕೇಂದ್ರ ಸರ್ಕಾರದ ಕಿವಿ ಹಿಂಡುವ ಪ್ರಶ್ನೆ ಕೇಳಿದ ಕೆಪಿಸಿಸಿ!

ಈಗ ಪಕ್ಷದ ಹಿರಿಯ ಮುಖಂಡರಾದ ರಾಮಲಿಂಗಾ ರೆಡ್ಡಿ ಮತ್ತು ಧೃವನಾರಾಯಣ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

ರಾಮಲಿಂಗಾ ರೆಡ್ಡಿಯವರು ಬೆಂಗಳೂರು ಮೂಲದವರಾದರೆ, ಧೃವನಾರಾಯಣ ಅವರು ಚಾಮರಾಜನಗರದವರು. ಈ ಇಬ್ಬರು ಅಚ್ಚರಿ ಆಯ್ಕೆಯ ಹಿಂದೆ ಮೂರು ಕಾರಣಗಳು ಸ್ಪಷ್ಟ. ಮುಂದೆ ಓದಿ..

ಕಾಂಗ್ರೆಸ್‌ನಿಂದ ರಾಜಭವನ ಚಲೋ: ಹೆದ್ದಾರಿ ತಡೆದು ಪ್ರತಿಭಟನೆ ಕಾಂಗ್ರೆಸ್‌ನಿಂದ ರಾಜಭವನ ಚಲೋ: ಹೆದ್ದಾರಿ ತಡೆದು ಪ್ರತಿಭಟನೆ

ಹಳೇ ಮೈಸೂರು ಭಾಗ

ಹಳೇ ಮೈಸೂರು ಭಾಗ

ಈಗಿರುವ ಮೂವರು ಕಾರ್ಯಾಧ್ಯಕ್ಷರು ಕಲ್ಯಾಣ ಮತ್ತು ಮುಂಬೈ ಕರ್ನಾಟಕದವರು. ಹಾಗಾಗಿ, ಹಳೇ ಮೈಸೂರು ಭಾಗದವರು ಈ ಹುದ್ದೆಯಲ್ಲಿ ಇಲ್ಲ ಎನ್ನುವ ಕೂಗು ಪಕ್ಷದಲ್ಲಿ ಕೇಳಿಬರುತ್ತಿತ್ತು. ಪಕ್ಷ ಸಂಘಟನೆಯ ದೃಷ್ಟಿಯಿಂದಲೂ ಇದು ಮುಖ್ಯವಾಗಿರುವುದರಿಂದ, ಹಳೇ ಮೈಸೂರು ವ್ಯಾಪ್ತಿಯ ಈ ಇಬ್ಬರು ಮುಖಂಡರಿಗೆ ಕಾರ್ಯಾಧ್ಯಕ್ಷ ಹುದ್ದೆಯನ್ನು ನೀಡಲಾಗಿದೆ.

ರಾಮಲಿಂಗ ರೆಡ್ಡಿ ಮತ್ತು ಧೃವನಾರಾಯಣ

ರಾಮಲಿಂಗ ರೆಡ್ಡಿ ಮತ್ತು ಧೃವನಾರಾಯಣ

ಈಗ ಕಾರ್ಯಾಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವ ರಾಮಲಿಂಗಾ ರೆಡ್ಡಿ (ಏಳು ಬಾರಿ ಶಾಸಕ, ಆರು ಬಾರಿ ಸಚಿವ) ಮತ್ತು ಧೃವನಾರಾಯಣ (ಎರಡು ಬಾರಿ ಶಾಸಕ, ಎರಡು ಬಾರಿ ಸಂಸದ), ಈ ಇಬ್ಬರು ನಾಯಕರೂ ವಿದ್ಯಾರ್ಥಿ ಚಳುವಳಿಯ ಮೂಲಕ ಸಕ್ರಿಯ ರಾಜಕೀಯಕ್ಕೆ ಇಳಿದವರು. ತಮ್ಮತಮ್ಮ ಭಾಗದಲ್ಲಿ ಉತ್ತಮ ಹಿಡಿತವನ್ನು ಹೊಂದಿರುವ ಇವರ ಅನುಭವವದ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಈಗ ಮುಂದಾಗಿದೆ.

ರಾಮಲಿಂಗಾ ರೆಡ್ಡಿ ಆಯ್ಕೆಯ ಹಿಂದೆ ಇನ್ನೊಂದು ಕಾರಣ

ರಾಮಲಿಂಗಾ ರೆಡ್ಡಿ ಆಯ್ಕೆಯ ಹಿಂದೆ ಇನ್ನೊಂದು ಕಾರಣ

ರಾಮಲಿಂಗಾ ರೆಡ್ಡಿ ಆಯ್ಕೆಯ ಹಿಂದೆ ಇನ್ನೊಂದು ಕಾರಣವೆಂದರೆ ಬೆಂಗಳೂರು ನಗರದ ಮೇಲೆ ಅವರಿಗಿರುವ ಹಿಡಿತ. ಈ ಹಿಂದೆ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗಲೂ, ಇವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಒಂದು ಹಂತದಲ್ಲಿ ಇವರು ಬಿಜೆಪಿಗೆ ಸೇರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇವರ ಹಿರಿತನಕ್ಕೆ ಬೆಲೆಕೊಟ್ಟು ಈ ಆಯ್ಕೆಯನ್ನು ಮಾಡಲಾಗಿದೆ.

Recommended Video

Vijayapura: ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ padayatraಗೆ ಚಾಲನೆ | Oneindia Kannada
ಬಿಬಿಎಂಪಿ ಚುನಾವಣೆ

ಬಿಬಿಎಂಪಿ ಚುನಾವಣೆ

ಇನ್ನೊಂದು ಪ್ರಮುಖ ಕಾರಣವೆಂದರೆ ಬಿಬಿಎಂಪಿ ಚುನಾವಣೆ. ಈ ಚುನಾವಣೆ ಇನ್ನೇನು ಕೆಲವು ತಿಂಗಳಲ್ಲಿ ನಡೆಯಬಹುದು. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಬೆಂಗಳೂರು ಮುಖ್ಯ. ಯಾಕೆಂದರೆ, ಬೆಂಗಳೂರು ನಗರ ವ್ಯಾಪ್ತಿಯಲ್ಲೇ 28 ಅಸೆಂಬ್ಲಿ ಕ್ಷೇತ್ರಗಳಿವೆ. ಹಾಗಾಗಿ, ಬಿಬಿಎಂಪಿಯಲ್ಲಿ ಹಿಡಿತ ಸಾಧಿಸಿದರೆ, ನಗರದ ಅಸೆಂಬ್ಲಿ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲು ಸುಲಭವಾಗಬಹುದು ಎನ್ನುವುದು ಇನ್ನೊಂದು ಲೆಕ್ಕಾಚಾರ.

English summary
Two More Appointment For KPCC Working President Post, Three Reasons,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X