ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಎಸ್ಐ ಆಸ್ಪತ್ರೆಯಲ್ಲಿ ಎರಡು ಶವ ಕೊಳೆತ ಪ್ರಕರಣ: ಉನ್ನತಮಟ್ಟದ ತನಿಖೆಗೆ ಅಗ್ರಹ

|
Google Oneindia Kannada News

ಬೆಂಗಳೂರು, ನ. 29: ವಿಮಾ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ನೀಡುವ ರಾಜಾಜಿನಗರದ ಇಎಸ್ಐ ಆಸ್ಪತ್ರೆಯ ಕರ್ಮಕಾಂಡ ಬಯಲಾಗಿದೆ. ಹದಿನೈದು ತಿಂಗಳ ಹಿಂದೆ ಕೋವಿಡ್ ನಿಂದ ಮೃತಪಟ್ಟಿದ್ದ ಇಬ್ಬರು ಮೃತದೇಹಗಳನ್ನು ಹಸ್ತಾಂತರಿಸದೇ ಆಸ್ಪತ್ರೆಯಲ್ಲಿ ಕೊಳೆಯುವಂತೆ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತ್ಥರ ವಿರುದ್ಧ ಕ್ರಮ ಜರುಗಿಸುವಂತೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

ಅಮಾನವೀಯ ಘಟನೆ:
ಕೆಲ ದಿನಗಳ ಹಿಂದಷ್ಟೇ ಇಎಸ್ಐ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವಯೋಮಿತಿ ಕಡಿತಗೊಳಿಸಿ ನೂರಾರು ದಾದಿಯರನ್ನು ಬೀದಿ ಪಾಲು ಮಾಡಿತ್ತು. ದಾದಿಯರು ಆಸ್ಪತ್ರೆ ಮುಂದೆಯೇ ಉಪವಾಸ ಕುಳಿತು ಪ್ರತಿಭಟನೆ ನಡೆಸಿದ್ದರು. ಇದೀಗ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ರಾಜಾಜಿನಗರದಲ್ಲಿರುವ ಇಎಸ್ಐ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಚಾಮರಾಜಪೇಟೆಯ ಮಹಿಳೆ ಸೇರಿ ಇಬ್ಬರ ಮೃತ ದೇಹ ಶವಗಾರದಲ್ಲಿ ಹದಿನೈದು ತಿಂಗಳು ಕೊಳೆತರೂ ಆಸ್ಪತ್ರೆ ಸಿಬ್ಬಂದಿ ನೋಡಿಲ್ಲ. ಇದು ಆಸ್ಪತ್ರೆಯ ಅಸಲಿ ಚಿತ್ರಣವನ್ನು ಬಯಲು ಮಾಡಿದೆ.

English summary
Two dead bodies found in ESI Hospital after 15 Months in rotten state; Rajaji Nagar MLA and Former Minister S Suresh Kumar Demands High Level Investigation on ESI Hospital. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X