ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಸ್ಪುಟ್ನಿಕ್ ಲಸಿಕೆ ಪೂರೈಕೆಗೆ 2 ಕಂಪನಿಗಳ ಟೆಂಡರ್

|
Google Oneindia Kannada News

ಬೆಂಗಳೂರು, ಮೇ 26; ರಷ್ಯಾದ ಕೋವಿಡ್ ಸೋಂಕಿನ ವಿರುದ್ಧದ ಸ್ಪುಟ್ನಿಕ್ ಲಸಿಕೆಯನ್ನು ಕರ್ನಾಟಕಕ್ಕೆ ಸರಬರಾಜು ಮಾಡಲು ಎರಡು ಕಂಪನಿಗಳು ಮುಂದೆ ಬಂದಿವೆ. ಸರ್ಕಾರ ಮೇ 14ರಂದು ಜಾಗತಿಕ ಟೆಂಡರ್ ಕರೆದಿತ್ತು.

ಕರ್ನಾಟಕದಲ್ಲಿ ಕೋವಿಡ್ ಲಸಿಕೆಯ ಕೊರತೆ ಉಂಟಾಗಿದೆ. ಸರ್ಕಾರ ಲಸಿಕೆ ಪೂರೈಕೆ ಮಾಡಲು ಜಾಗತಿಕ ಟೆಂಡರ್ ಕರೆಯುವುದಾಗಿ ಹೇಳಿತ್ತು. ಮೇ 14ರಂದು ಟೆಂಡರ್ ಕರೆದಿದ್ದು, ಮೇ 24ರ ಸಂಜೆ 5.30ರ ತನಕ ಟೆಂಡರ್ ಸಲ್ಲಿಕೆಗೆ ಅವಕಾಶವಿತ್ತು.

ಧಾರವಾಡದ ಶಿಲ್ಪಾ ಮೆಡಿಕೇರ್‌ನಲ್ಲಿ ಉತ್ಪಾದನೆಯಾಗಲಿದೆ ಸ್ಪುಟ್ನಿಕ್ ವಿ ಲಸಿಕೆ ಧಾರವಾಡದ ಶಿಲ್ಪಾ ಮೆಡಿಕೇರ್‌ನಲ್ಲಿ ಉತ್ಪಾದನೆಯಾಗಲಿದೆ ಸ್ಪುಟ್ನಿಕ್ ವಿ ಲಸಿಕೆ

ಮುಂಬೈ ಮೂಲದ ಬಲ್ಕ್ ಎಂಆರ್‌ಓ ಇಂಡಸ್ಟ್ರಿಯಲ್ ಪ್ರೈವೇಟ್ ಲಿಮಿಟೆಡ್ ಸ್ಪುಟ್ನಿಕ್-ವಿ ಮತ್ತು ಬೆಂಗಳೂರು ಮೂಲದ ತುಳಸಿ ಸಿಸ್ಟಮ್ಸ್‌ ಸ್ಪುಟ್ನಿಕ್ ಪ್ಲಸ್ ಒಂದು ಡೋಸ್ ಲಸಿಕೆ ಪೂರೈಕೆ ಮಾಡುವುದಾಗಿ ಟೆಂಡರ್ ಸಲ್ಲಿಕೆ ಮಾಡಿವೆ.

2ನೇ ಹಂತದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಹೈದರಾಬಾದ್‌ಗೆ ಆಗಮನ2ನೇ ಹಂತದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಹೈದರಾಬಾದ್‌ಗೆ ಆಗಮನ

ಜಾಗತಿಕ ಮಟ್ಟದಲ್ಲಿ ಯಾವುದೇ ದೊಡ್ಡ ಕಂಪನಿಗಳು ಲಸಿಕೆ ಪೂರೈಕೆ ಮಾಡಲು ಟೆಂಡರ್ ಸಲ್ಲಿಕೆ ಮಾಡಿಲ್ಲ. ಅಧಿಕಾರಿಗಳು ಟೆಂಡರ್‌ನ ಮುಂದಿನ ಪ್ರಕ್ರಿಯೆಯ ಬಗ್ಗೆ ಸಮಾಲೋಚನೆಯನ್ನು ನಡೆಸುತ್ತಿದ್ದಾರೆ. ದೇಶದ ಹಲವಾರು ರಾಜ್ಯಗಳು ಲಸಿಕೆ ಪೂರೈಕೆಗೆ ಜಾಗತಿಕ ಟೆಂಡರ್ ಮೊರೆ ಹೋಗಿವೆ.

ರಷ್ಯಾದಿಂದ ಆಮದಾಗಿರುವ ಸ್ಪುಟ್ನಿಕ್ ವಿ ಲಸಿಕೆ ಬೆಲೆ ಇಷ್ಟಿದೆ! ರಷ್ಯಾದಿಂದ ಆಮದಾಗಿರುವ ಸ್ಪುಟ್ನಿಕ್ ವಿ ಲಸಿಕೆ ಬೆಲೆ ಇಷ್ಟಿದೆ!

ಟೆಂಡರ್ ಸಲ್ಲಿಕೆ ಅವಧಿ ವಿಸ್ತರಣೆ

ಟೆಂಡರ್ ಸಲ್ಲಿಕೆ ಅವಧಿ ವಿಸ್ತರಣೆ

ಕರ್ನಾಟಕ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವಥ ನಾರಾಯಣ ಈ ಕುರಿತು ಮಾತನಾಡಿದ್ದಾರೆ. "ಟೆಂಡರ್ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸರ್ಕಾರ ಲಸಿಕೆ ಖರೀದಿಗಾಗಿ 843 ಕೋಟಿ ಅನುದಾನ ಬಳಕೆ ಮಾಡಲು ಅನುಮತಿ ನೀಡಿದೆ" ಎಂದು ಹೇಳಿದ್ದಾರೆ.

ಹೊಸ ಟೆಂಡರ್, ಅವಧಿ ವಿಸ್ತರಣೆ

ಹೊಸ ಟೆಂಡರ್, ಅವಧಿ ವಿಸ್ತರಣೆ

ಲಸಿಕೆ ಪೂರೈಕೆ ಕರೆದಿದ್ದ ಜಾಗತಿಕ ಟೆಂಡರ್‌ ಸಲ್ಲಿಕೆ ಅವಧಿ ಪೂರ್ಣಗೊಂಡಿದೆ. ಈಗ ಹೊಸ ಟೆಂಡರ್ ಕರೆಯುವುದೋ?, ಈಗ ಕರೆದಿರುವ ಟೆಂಡರ್ ಅವಧಿಯನ್ನೇ ವಿಸ್ತರಣೆ ಮಾಡುವುದೋ ಎಂದು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಅಂತಿಮ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ.

ಕರ್ನಾಟಕದಲ್ಲಿ ಲಸಿಕೆಯ ಕೊರತೆ

ಕರ್ನಾಟಕದಲ್ಲಿ ಲಸಿಕೆಯ ಕೊರತೆ

ಕರ್ನಾಟಕದಲ್ಲಿ ಲಸಿಕೆ ಕೊರತೆ ಉಂಟಾಗಿದೆ. ಸರ್ಕಾರ 18-44 ವಯೋಮಿತಿಯ ಜನರಿಗೆ ಲಸಿಕೆ ನೀಡಲು ಪರದಾಡುತ್ತಿದೆ. ಮೇ 14ರಿಂದ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಿತ್ತು. ಈಗ ಪುನಃ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಲಸಿಕೆ ಎಲ್ಲೂ ಸಹ ಸಿಗುತ್ತಿಲ್ಲ ಎಂದು ಜನರು ಆರೋಪ ಮಾಡುತ್ತಿದ್ದಾರೆ.

ಹೊಸ ಸಾಫ್ಟ್‌ವೇರ್ ರಚನೆ ಮಾಡಲಿದೆ

ಹೊಸ ಸಾಫ್ಟ್‌ವೇರ್ ರಚನೆ ಮಾಡಲಿದೆ

ಕರ್ನಾಟಕ ಸರ್ಕಾರ ಲಸಿಕೆ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಜೂನ್ 1ರಿಂದ ಹೊಸ ಸಾಫ್ಟ್‌ವೇರ್ ರಚನೆ ಮಾಡಲಿದೆ. ಕೊವ್ಯಾಕ್ಸಿನ್, ಕೋವಿಶೀಲ್ಡ್‌ ಸೇರಿದಂತೆ ವಿಶ್ವದಾದ್ಯಂತ ಸುಮಾರು 15 ಲಸಿಕೆಗಳು ಇವೆ. ಇವುಗಳನ್ನು ಪೂರೈಕೆ ಮಾಡಲು ವಿವಿಧ ರಾಜ್ಯಗಳು ಸಹ ಜಾಗತಿಕ ಟೆಂಡರ್‌ ಕರೆದಿವೆ.

Recommended Video

ತನ್ನ ಕ್ರಿಕೆಟ್ ಭವಿಷ್ಯ ಮಂಕಾಗಿದ್ದಕ್ಕೆ ಕಾರಣ ಕೊಟ್ಟ ಉತ್ತಪ್ಪ | Oneindia Kannada

English summary
Two Indian companies have offered to supply Russia's Sputnik vaccine to Karnataka. Officials evaluating the next step.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X