ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ಮೂರು ಮೂರು ಡುಪ್ಲಿಕೇಟ್ ಸುಮಲತಾ ಸೃಷ್ಟಿಸಿದವರಿಗೆ ಈ ಸಿಡಿ ಯಾವ ಲೆಕ್ಕ!

|
Google Oneindia Kannada News

ಮಂಗಳೂರು ಗಲಭೆಯ ವಿಚಾರದಲ್ಲಿ ಮಂಗಳೂರು ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ಸಾಲುಸಾಲು ವಿಡಿಯೋಗಳನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ ನಂತರ, ಜೆಡಿಎಸ್ ಮತ್ತು ಬಿಜೆಪಿ ನಡುವೆ ಟ್ವೀಟ್ ಸಮರವೇ ನಡೆಯುತ್ತಿದೆ.

ಈಶ್ವರಪ್ಪ, ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಆದಿಯಾಗಿ ಬಿಜೆಪಿ ಮುಖಂಡರು, ಕುಮಾರಸ್ವಾಮಿಯವರ ಟ್ವೀಟಿಗೆ ಪ್ರತ್ಯುತ್ತರ ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಇದೊಂದು, "ಕಟ್ ಎಂಡ್ ಪೇಸ್ಟ್" ಸಿಡಿ ಎಂದು ಲೇವಡಿ ಮಾಡಿದ್ದಾರೆ.

ಮಂಗಳೂರು ಗಲಭೆ: ಪೊಲೀಸ್ ವೇಷ ಹಾಕಿಸಿ ಕುಮಾರಸ್ವಾಮಿ ಸಿಡಿ ರೆಡಿ ಮಾಡಿಸಿದ್ರಾ?ಮಂಗಳೂರು ಗಲಭೆ: ಪೊಲೀಸ್ ವೇಷ ಹಾಕಿಸಿ ಕುಮಾರಸ್ವಾಮಿ ಸಿಡಿ ರೆಡಿ ಮಾಡಿಸಿದ್ರಾ?

"ಮಂಡ್ಯದಲ್ಲಿ ಮೂರು ಮೂರು ಸುಮಲತಾ ಅವರನ್ನು ಸೃಷ್ಟಿಸಿದವರಿಗೆ, ಈ ಡುಪ್ಲಿಕೇಟ್ ಸಿಡಿ ರೆಡಿ ಮಾಡುವುದು ಯಾವ ಲೆಕ್ಕಾ" ಇದು, ಕುಮಾರಸ್ವಾಮಿಯವರ ಟ್ವೀಟಿಗೆ ಬಂದಂತಹ ಒಂದು ರಿಪ್ಲೈನ ಸ್ಯಾಂಪಲ್.

ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋ: ಪೊಲೀಸರ ದೌರ್ಜನ್ಯ ಸೆರೆಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋ: ಪೊಲೀಸರ ದೌರ್ಜನ್ಯ ಸೆರೆ

ಎರಡು ಪಕ್ಷಗಳ ನಡುವೆ ಹೊಸ ಸುತ್ತಿನ ವಾಕ್ಸಮರಕ್ಕೆ ಈ ಸಿಡಿ ಕಾರಣವಾಗಿರುವುದು ಒಂದೆಡೆಯಾದರೆ, ಅವರವರ ಅಭಿಮಾನಿಗಳು/ಕಾರ್ಯಕರ್ತರು, 'ವರ್ಣರಂಜಿತವಾಗಿ' ಕುಮಾರಸ್ವಾಮಿ ಟ್ವೀಟಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದರ ಕೆಲವೊಂದು, ಯಥಾವತ್ ಕಟ್ ಎಂಡ್ ಪೇಸ್ಟ್ ಇಲ್ಲಿದೆ:

ಸುಮಲತಾ ಹೆಸರಿನ ಮೂವರು ಮಹಿಳೆಯರು ಕಣದಲ್ಲಿ

ಸುಮಲತಾ ಹೆಸರಿನ ಮೂವರು ಮಹಿಳೆಯರು ಕಣದಲ್ಲಿ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್, ಎದುರಾಳಿಯಾಗಿ ಜೆಡಿಎಸ್ಸಿನ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದದ್ದು ಗೊತ್ತಿರುವ ವಿಚಾರ. ಸುಮಲತಾ ಹೆಸರಿನ ಮೂವರು ಮಹಿಳೆಯರು ಕಣದಲ್ಲಿ ಇದ್ದದ್ದು ಒಂದು ಕಡೆ. ಇನ್ನೊಂದು, ಥೇಟ್ ಸುಮಲತಾರಂತೆ ಸೀರೆ ತೊಟ್ಟ ಮಹಿಳೆಯ ಫೋಟೊ, ಇವಿಎಂನಲ್ಲಿ ಸುಮಲತಾ ಪಕ್ಕದ ಸ್ಥಾನದಲ್ಲಿತ್ತು.

ಮಂಡ್ಯದಲ್ಲಿ ಡುಪ್ಲಿಕೇಟ್ ಸುಮಲತಾರವರನ್ನ ಸೃಷ್ಟಿಸಿದವರಿಗೆ ಸಿ.ಡಿ. ಸೃಷ್ಟಿಸುವುದು ಕಷ್ಟವೇ?

ಮಂಡ್ಯದಲ್ಲಿ ಡುಪ್ಲಿಕೇಟ್ ಸುಮಲತಾರವರನ್ನ ಸೃಷ್ಟಿಸಿದವರಿಗೆ ಸಿ.ಡಿ. ಸೃಷ್ಟಿಸುವುದು ಕಷ್ಟವೇ?

"ಸಾಕಪ್ಪ ನಿಮ್ಮ ಪೌರುಷ. ಮಂಡ್ಯದಲ್ಲಿ ಡುಪ್ಲಿಕೇಟ್ ಸುಮಲತಾರವರನ್ನ ಸೃಷ್ಟಿಸಿದವರಿಗೆ ಈ ಸಿ.ಡಿ. ಪುರಾಣಗಳನ್ನ ಸೃಷ್ಟಿಸುವುದೇನು ಕಷ್ಟವೇ. ನೀವುಗಳು ಹೇಳುವ ಸುಳ್ಳುಗಳನ್ನ ನಂಬಲು ಜನರೇನು ಮೂರ್ಖರಲ್ಲ. ಸಾಕುಮಾಡಿ ನಿಮ್ಮ ಸುಳ್ಳು ಸೃಷ್ಟಿಗಳನ್ನ ಮತ್ತು ಕೊಳಕು ರಾಜಕಾರಣವನ್ನ. ವೋಟಿಗಾಗಿ ಎಂತಹ ಕೊಳಕನ್ನ ಸೃಷ್ಟಿಸಲೂ ಕೂಡ ನೀವು ತಯಾರಿರುತ್ತೀರಿ".

ಜನ ನಿಮ್ಮನ್ನ ಮೆಚ್ಚಿರೋರು, ಹೆಮ್ಮೆ ಪಟ್ಟಿರೋರು

ಜನ ನಿಮ್ಮನ್ನ ಮೆಚ್ಚಿರೋರು, ಹೆಮ್ಮೆ ಪಟ್ಟಿರೋರು

"ಮಾನ್ಯ @hd_kumaraswamy ರವರೇ ಮಂಗಳೂರಿನಲ್ಲಿ ನಡೆದ ಗಲಭೆ ಬಗ್ಗೆ ಅಷ್ಟೊಂದು ಕಾಳಜಿ ವಹಿಸಿ ವಿಡಿಯೋ ಮಾಡಿಸಿ ಪೊಲೀಸರ ಮೇಲೆ ಗೂಬೆ ಕುರಿಸೋ ಅವಶ್ಯಕತೆ ಏನಿತ್ತು??? ಅದೇ ಕಾಳಜಿ ಶ್ರದ್ಧೆ ಇಟ್ಟು ಅಧಿಕಾರದಲ್ಲಿ ಇದ್ದಾಗ ಕರ್ನಾಟಕದ ಅಭಿವೃದ್ಧಿ ಪರ ಕೆಲಸ ಮಾಡಿದ್ದರೆ ಜನ ನಿಮ್ಮನ್ನ ಮೆಚ್ಚಿರೋರು, ಹೆಮ್ಮೆ ಪಟ್ಟಿರೋರು" ಟ್ವೀಟಿಗೆ ಬಂದ ಇನ್ನೊಂದು ರಿಪ್ಲೈ ಇದು.

ಕಲ್ಲು ತೂರುವವರ ಮೇಲೆ ಇರುವ ಈ ಪ್ರೀತಿ ನಮ್ಮ ಪೊಲೀಸರ ಮೇಲೆ ಯಾಕೆ ಇಲ್ಲ

ಕಲ್ಲು ತೂರುವವರ ಮೇಲೆ ಇರುವ ಈ ಪ್ರೀತಿ ನಮ್ಮ ಪೊಲೀಸರ ಮೇಲೆ ಯಾಕೆ ಇಲ್ಲ

"ಅಲ್ಲ ಸ್ವಾಮಿ ನಿಮಗೆ ಕಲ್ಲು ತೂರುವವರ ಮೇಲೆ ಇರುವ ಈ ಪ್ರೀತಿ ನಮ್ಮ ಪೊಲೀಸರ ಮೇಲೆ ಯಾಕೆ ಇಲ್ಲ", ಪೋಲಿಸರೇ ಬಿಡುಗಡೆ ಮಾಡಿದ ವಿಡಿಯೋ ತುಣುಕುಗಳನ್ನು ಅದಲು ಬದಲು ಮಾಡಿ ಅದನ್ನು ಪೋಲಿಸರ ವಿರುದ್ಧವೇ ತಿರುಗಿಸುವ ನಿಮ್ಮ ಪ್ರಯತ್ನಕ್ಕೆ ಶಭಾಷ್ ಗಿರಿ ಕೊಡಲೇಬೇಕು... ಯಾಕ್ರೀ ಬೇಕು ನಿಮಗೆ ಈ ಕೀಳು ಮಟ್ಟದ ರಾಜಕೀಯ?" - ಟ್ವೀಟಿಗೆ ಬಂದ ಪ್ರತಿಕ್ರಿಯೆ.

ಅದು ಎಡಿಟ್ ಮಾಡಿರೋದು ಎಂದು ಎಲ್ಲರಿಗೂ ಗೊತ್ತು

ಅದು ಎಡಿಟ್ ಮಾಡಿರೋದು ಎಂದು ಎಲ್ಲರಿಗೂ ಗೊತ್ತು

"ಸಿಡಿಯಲ್ಲಿ ಇರುವುದು ಸತ್ಯವಾಗಿದ್ದರೆ ಕೋರ್ಟ್ ಹೋಗೋದು ಒಳ್ಳೆಯದು. ಕೋರ್ಟ್ ನಿರ್ದೇಶನ ನೀಡಲಿ, ಪೋಲೀಸರು ನಿರ್ದೇಶನ ಪಾಲಿಸುತ್ತೆ. ನಿಮಗೆ ನ್ಯಾಯ ಒದಗಿಸುವ ಬಯಕೆ ಮತ್ತು ಸಂಕಲ್ಪ ಇದ್ದರೆ ಆಗುತ್ತಿತ್ತು". "ಮಿ. CD ಸ್ವಾಮಿ, ನೀವೇನೆ ಬಿಡುಗಡೆ ಮಾಡಿದರೂ ಅದು ಎಡಿಟ್ ಮಾಡಿರೋದು ಎಂದು ಎಲ್ಲರಿಗೂ ಗೊತ್ತು ಯಾಕಂದರೆ, ಫಿಲ್ಮ್ ಇಂಡಸ್ಟ್ರಿ ನಿಮ್ಮದೇ ಇದ್ದಾಗ ಕಟ್, ಆಕ್ಷನ್, ಎಡಿಟ್ ಅಂಡ್ ಪೇಸ್ಟ್ ಇವೆಲ್ಲಾ ನಿಮಗೆ ಕಾಮನ್ ಅಲ್ವಾ. ಹಾಗೆ ನಿಮ್ ಪಾರ್ಟಿ MLA ಗಳು ನಿಮಗೆ ಬಹಳ ಅಂಜುತ್ತಾರೆ ಯಾಕೆಂದರೆ ಅವರದು 3X ಸಿಡಿ ನಿಮ್ ಹತ್ರ ಇದೆ ಅಂತ" ಈ ರೀತಿಯ ಪ್ರತಿಕ್ರಿಯೆಗಳು ಎಚ್ಡಿಕೆ ಟ್ವೀಟಿಗೆ ಬಂದಿವೆ.

English summary
Twitterite Colorful Reply To Former CM HD Kumaraswamy Tweet Over Mangaluru Voilence CD.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X