ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವೀಟರ್‌ನಲ್ಲಿ ಸಿದ್ದರಾಮಯ್ಯ, ಸುರೇಶ್ ಕುಮಾರ್ ಜಟಾಪಟಿ

|
Google Oneindia Kannada News

ಬೆಂಗಳೂರು, ಜುಲೈ 10 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕ ಸುರೇಶ್ ಕುಮಾರ್ ನಡುವೆ ಟ್ವೀಟರ್‌ನಲ್ಲಿ ಏಟು-ತಿರುಗೇಟು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ವಿಚಾರಕ್ಕೆ ಇಬ್ಬರೂ ಟ್ವೀಟ್ ಮಾಡುತ್ತಿದ್ದಾರೆ.

ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್‌ಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದರು. ಬಳಿಕ ಕೆಪಿಸಿಸಿ ವತಿಯಿಂದ ಸ್ಪೀಕರ್‌ಗೆ ಮನವಿ ಮಾಡಲಾಗಿತ್ತು.

ಸಿದ್ದರಾಮಯ್ಯ, ಗುಲಾಂ ನಬಿ ಆಜಾದ್ ಪೊಲೀಸರ ವಶಕ್ಕೆಸಿದ್ದರಾಮಯ್ಯ, ಗುಲಾಂ ನಬಿ ಆಜಾದ್ ಪೊಲೀಸರ ವಶಕ್ಕೆ

ಸಿದ್ದರಾಮಯ್ಯ ಅವರ ಹೇಳಿಕೆ ಬಳಿಕ ಸುರೇಶ್ ಕುಮಾರ್ ಅವರು 'ವ್ಯಾಕರಣ ಮೇಸ್ಟ್ರೇ' ಎಂದು ಹೇಳಿ ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬಳಿಕ ಸಿದ್ದರಾಮಯ್ಯ, ಸುರೇಶ್ ಕುಮಾರ್ ಅವರ ನಡುವೆ ಜಟಾಪಟಿ ನಡೆಯುತ್ತಿದೆ.

ಆಪ್ತ ಸಿದ್ದರಾಮಯ್ಯ ಮೇಲೆ ಮಾತಿನ ಚಾಟಿ ಬೀಸಿದ ಭೈರತಿ ಬಸವರಾಜುಆಪ್ತ ಸಿದ್ದರಾಮಯ್ಯ ಮೇಲೆ ಮಾತಿನ ಚಾಟಿ ಬೀಸಿದ ಭೈರತಿ ಬಸವರಾಜು

ಬುಧವಾರ ಸಿದ್ದರಾಮಯ್ಯ ಅವರು ಸುರೇಶ್ ಕುಮಾರ್ ಅವರ ಟ್ವೀಟ್‌ಗೆ ತಿರುಗೇಟು ನೀಡಿದ್ದಾರೆ. ಇಬ್ಬರು ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಎಳೆದು ತಂದಿದ್ದಾರೆ. ಸಿದ್ದರಾಮಯ್ಯ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗಲೂ ಸುರೇಶ್ ಕುಮಾರ್ ಅವರ ಹೆಸರನ್ನು ಮಂಗಳವಾರ ಪ್ರಸ್ತಾಪಿಸಿದ್ದರು....

ಗಾಂಧಿ ಪ್ರತಿಮೆ ಮುಂದೆ ಧರಣಿ ಕುಳಿತ ಕಾಂಗ್ರೆಸ್ ನಾಯಕರುಗಾಂಧಿ ಪ್ರತಿಮೆ ಮುಂದೆ ಧರಣಿ ಕುಳಿತ ಕಾಂಗ್ರೆಸ್ ನಾಯಕರು

ಸುರೇಶ್ ಕುಮಾರ್ ಟ್ವೀಟ್

ಸುರೇಶ್ ಕುಮಾರ್ ಟ್ವೀಟ್

'ವ್ಯಾಕರಣ ಮೇಸ್ಟ್ರೇ. ..ಆ ಕೆಲವು ಶಾಸಕರು ರಾಜಿನಾಮೆ ನೀಡಿರುವುದು ತಮ್ಮ ಶಾಸಕ ಸ್ಥಾನಕ್ಕೆ, ತಮ್ಮ ಪಕ್ಷಕ್ಕಲ್ಲ(ಕಾಂಗ್ರೆಸಿ ಗಲ್ಲ). ಇದು ಹೇಗೆ ಪಕ್ಷಾಂತರ ವಿರೋಧಿ ಕಾಯ್ದೆ (Anti-defection law) ಉಲ್ಲಂಘನೆ ಆಗುತ್ತದೆ? ಅವರ ವಿರುದ್ಧ ಯಾವುದೇ ಕ್ರಮ ಸಾಧ್ಯವೇ?' ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದರು.

ಸಿದ್ದರಾಮಯ್ಯ ಟ್ವೀಟ್

ಸಿದ್ದರಾಮಯ್ಯ ಟ್ವೀಟ್

ಸಿದ್ದರಾಮಯ್ಯ ಅವರು, 'ಕಾನೂನಿನ ಮೇಷ್ಟ್ರೇ, ಶಾಸಕರು ತಮ್ಮ ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿದರೆ ಇಲ್ಲವೇ ಇನ್ನೊಂದು ಪಕ್ಷ ಸೇರಿದರೆ, ಅದನ್ನು ರಾಜೀನಾಮೆ ಎಂದು ತೀರ್ಮಾನಿಸಿ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ‌ಕೈಗೊಳ್ಳಬಹುದು ಎಂದು ನ್ಯಾಯಾಲಯದ ತೀರ್ಪುಗಳು ಹೇಳಿವೆ. ಸ್ವಲ್ಪ ಓದಿಕೊಳ್ಳಿ' ಎಂದು ತಿರುಗೇಟು ನೀಡಿದ್ದರು.

ಮೋದಿ ವಿರುದ್ಧ ಟೀಕೆ ಮಾಡಿದರೆ ಆಯಿತು

ಮೋದಿ ವಿರುದ್ಧ ಟೀಕೆ ಮಾಡಿದರೆ ಆಯಿತು

ಸುರೇಶ್ ಕುಮಾರ್ ಅವರು, 'ಸಿದ್ದರಾಮಯ್ಯನವರು ಇಂದು ಬೆಳಿಗ್ಗೆ ತಿಂದದ್ದು ಜೀರ್ಣವಾಯಿತು. ಏಕೆಂದರೆ ಮತ್ತೆ ಮೋದಿಯವರ ಮೇಲೆ ಟೀಕೆ ಮಾಡಿಯಾಯಿತು' ಎಂದು ಟ್ವೀಟ್ ಮಾಡಿ ಲೇವಡಿ ಮಾಡಿದ್ದರು.

ಸುರೇಶ್ ಕುಮಾರ್ ಕಾಳೆಲೆದ ಸಿದ್ದರಾಮಯ್ಯ

ಸುರೇಶ್ ಕುಮಾರ್ ಕಾಳೆಲೆದ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರು ಸುರೇಶ್ ಕುಮಾರ್ ಅವರಿಗೆ ತಿರುಗೇಟು ನೀಡಿ, 'ಸುರೇಶ್ ಕುಮಾರ್ ಅವರು ರಾತ್ರಿ ತಿಂದದ್ದು ಇಂದು ಬೆಳಿಗ್ಗೆ ನಿತ್ಯಕರ್ಮದಲ್ಲಿ ನಿರ್ಗಮನವಾಯಿತು. ಏಕೆಂದರೆ ಬೆಳಿಗ್ಗೆ ಅರ್ಧಗಂಟೆ‌ ಅವರು ಮೋದಿ ಭಜನೆ ಮಾಡಿಯಾಯಿತು' ಎಂದು ಕಾಳೆದಿದ್ದರು.

English summary
Twitter war between Karnataka Former CM Siddaramaiah and BJP leader Suresh Kumar. Both leaders argument about prime minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X