ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯಗೆ ಭಾರತ ರತ್ನಕ್ಕೆ ಶಿಫಾರಸು ಮಾಡುತ್ತಾರಾ?

|
Google Oneindia Kannada News

Recommended Video

Siddaramaiah VS KS Eeshwarappa Twitter war | OneIndia Kannada

ಬೆಂಗಳೂರು, ನವೆಂಬರ್ 22 : ಉಪ ಚುನಾವಣೆ ಪ್ರಚಾರ ಕಾವು ಪಡೆದುಕೊಳ್ಳುತ್ತಿದೆ. ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪಗಳು ಮುಗಿಲು ಮುಟ್ಟಿದೆ. ಅದರಲ್ಲೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಟೀಕಾ ಪ್ರಕಾರವನ್ನು ಮಾಡುತ್ತಿದ್ದಾರೆ.

"ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ?" ಎಂದು ಸಿದ್ದರಾಮಯ್ಯ ಟ್ವಿಟರ್ ಮೂಲಕ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಹಲವು ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧವೇ ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ.

 ನನ್ನ ಅತಿ ಹೆಚ್ಚು ಟೀಕಿಸಿದವರಿಗೆ ಪ್ರಧಾನಿ ಬಹುಮಾನ ಕೊಡ್ತಾರಾ?: ಸಿದ್ದರಾಮಯ್ಯ ನನ್ನ ಅತಿ ಹೆಚ್ಚು ಟೀಕಿಸಿದವರಿಗೆ ಪ್ರಧಾನಿ ಬಹುಮಾನ ಕೊಡ್ತಾರಾ?: ಸಿದ್ದರಾಮಯ್ಯ

"ದಿನದ 24 ಗಂಟೆನೂ ಮೋದಿ, ಬಿಜೆಪಿ ಅಂತಾನೇ ದಿನ ಶುರು ಮಾಡುತ್ತೀರಲ್ಲ, ನಿಮಗೂ ಬಿಜೆಪಿ ಅಂದರೆ ಭಯನಾ?" ಎಂದು ಸಚಿವ ಕೆ. ಎಸ್. ಈಶ್ವರಪ್ಪ ಸಿದ್ದರಾಮಯ್ಯರನ್ನು ಟ್ವಿಟರ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಟ್ವೀಟರ್‌ನಲ್ಲಿ ನಾಯಕರ ಮಾತಿನ ಸಮರ ಜೋರಾಗಿದೆ.

ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ: ಸದಾನಂದಗೌಡ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ: ಸದಾನಂದಗೌಡ

15 ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರ ಕಣ ರಂಗು ಪಡೆಯುತ್ತಿದೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಉಪ ಚುನಾವಣೆ; ಅಪ್ಪ ಜೆಡಿಎಸ್‌ ಅಭ್ಯರ್ಥಿ, ಮಗ ಪಕ್ಷೇತರ! ಉಪ ಚುನಾವಣೆ; ಅಪ್ಪ ಜೆಡಿಎಸ್‌ ಅಭ್ಯರ್ಥಿ, ಮಗ ಪಕ್ಷೇತರ!

ಇವರಿಗ್ಯಾಕೆ ನನ್ನ ಬಗ್ಗೆ ಭಯ?

ಇವರಿಗ್ಯಾಕೆ ನನ್ನ ಬಗ್ಗೆ ಭಯ?

"ರಾಜ್ಯದ @BJP4Karnataka ನಾಯಕರೆಲ್ಲರೂ ನನ್ನ ಮೇಲೆಯೇ ಮುಗಿಬೀಳುತ್ತಿರುವುದು ನೋಡಿದರೆ,
ನನ್ನನ್ನು ಅತಿಹೆಚ್ಚು ಟೀಕಿಸಿದವರಿಗೆ ಏನೋ ಬಹುಮಾನ ಕೊಡ್ತೇವೆ ಎಂದು @narendramodi
ಮತ್ತು @AmitShah ಭರವಸೆ ನೀಡಿದ ಹಾಗಿದೆ. ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ?" ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

ಹೈಕಮಾಂಡ್ ಭಾರತ ರತ್ನ ಕೊಡಲಿದೆಯೇ?

ಹೈಕಮಾಂಡ್ ಭಾರತ ರತ್ನ ಕೊಡಲಿದೆಯೇ?

ಸಚಿವ ಈಶ್ವರಪ್ಪ ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಅಯ್ಯೋ @siddaramaiahನವರೇ ನಿಮ್ಮ ದುರಹಂಕಾರನ ವಿರೋಧಿಸಿದರೆ ಟಾರ್ಗೆಟ್ ಅಂತೀರಾ, ನಿಮ್ಮ ನಡೆಯನ್ನು ವಿರೋಧಿಸಿದರೆ ಭಯ ಅಂತೀರ. ದಿನದ 24 ಗಂಟೆನೂ ಮೋದಿ, ಬಿಜೆಪಿ ಅಂತಾನೇ ದಿನ ಶುರು ಮಾಡುತ್ತೀರಲ್ಲ, ನಿಮಗೂ ಬಿಜೆಪಿ ಅಂದರೆ ಭಯನಾ? ಅಥವಾ ನೀವು ಏಕವಚನದಲ್ಲಿ ಟೀಕಿಸಿದರೆ ನಿಮ್ಮ ಹೈ ಕಮಾಂಡ್ ಭಾರತ ರತ್ನ ಕ್ಕೆ ಶಿಫಾರಸು ಮಾಡುತ್ತಾರಾ?" ಎಂದು ತಿರುಗೇಟು ನೀಡಿದ್ದಾರೆ.

ಡಿವಿಎಸ್ ಗೊಬ್ಬರವಾಗಿ ಹೋಗಿದ್ದಾರೆ

ಡಿವಿಎಸ್ ಗೊಬ್ಬರವಾಗಿ ಹೋಗಿದ್ದಾರೆ

"ನನ್ನ ಮಾನಸಿಕ ಸ್ಥಿತಿ ಬಗ್ಗೆ ಬಡಬಡಿಸುತ್ತಿರುವ @DVSadanandGowda
ಬಗ್ಗೆ ಅನುಕಂಪ ಇದೆ. ಮೊದಲು ಮುಖ್ಯಮಂತ್ರಿ ಸ್ಥಾನದಿಂದ ನಂತರ ರೈಲ್ವೆ, ಕಾನೂನು, ಅಂಕಿ ಅಂಶ ಹೀಗೆ ಎಲ್ಲ ಕಡೆಗಳಲ್ಲಿಯೂ ತಿರಸ್ಕೃತಗೊಂಡ ಗೌಡರು ಈಗ ಪಕ್ಷದಲ್ಲಿ 'ಗೊಬ್ಬರ'ವಾಗಿ ಹೋಗಿದ್ದಾರೆ" ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಸದಾನಂದ ಗೌಡರು ಏಕಾಂಗಿ

ಸದಾನಂದ ಗೌಡರು ಏಕಾಂಗಿ

"ಏಕಾಂಗಿಯಾಗಿ ಹೋಗಿರುವ @DVSadanandGowda ಅವರನ್ನು @BJP4Karnataka ದಲ್ಲಿ ಯಾರೂ ಗಂಭೀರವಾಗಿ ಸ್ವೀಕರಿಸುತ್ತಿಲ್ಲ" ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

English summary
Opposition leader Siddaramaiah and minister K.S.Eshwarappa twitter war ahead of the 15 seats by elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X