ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಗಡೆ-ರಾಹುಲ್ ಟ್ವೀಟ್ ಸಮರ: ಪರಸ್ಪರ ಯೋಗ್ಯತೆಯ ಲೆಕ್ಕಾಚಾರ!

|
Google Oneindia Kannada News

ಬೆಂಗಳೂರು, ಜನವರಿ 30: ವಿವಾದಾತ್ಮಕ ಹೇಳಿಕೆಯಿಂದಲೇ ಖ್ಯಾತಿ ಗಳಿಸಿದ ಕೇಂದ್ರ ಸಚಿವ, ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಟ್ವಿಟ್ಟರ್ ಸಮರ ಆರಂಭವಾಗಿದೆ. ಇಬ್ಬರೂ ಪರಸ್ಪರರ ಯೋಗ್ಯತೆಯ ಬಗ್ಗೆ ಮಾತನಾಡಿ, ಕಾಲೀಯುವ ಕೆಲಸ ಮಾಡಿದ್ದಾರೆ.

ಎರಡು ದಿನಗಳಿಂದ ಹಿಂದೆ ಕೊಡಗಿನಲ್ಲಿ ಮಾತನಾಡುತ್ತಿದ್ದ ಹೆಗಡೆ, ಹಿಂದು ಯುವತಿಯರನ್ನು ಮುಟ್ಟಿದರೆ ಅಂಥವರ ಕೈ ಅಸ್ತಿತ್ವದಲ್ಲಿರಬಾರದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಹೆಗಡೆಗೆ ಮಾತಿನ ತಪರಾಕಿ ನೀಡಿದ ದಿನೇಶ್ ಗುಂಡೂರಾವ್ ಪತ್ನಿ ಟಬುಹೆಗಡೆಗೆ ಮಾತಿನ ತಪರಾಕಿ ನೀಡಿದ ದಿನೇಶ್ ಗುಂಡೂರಾವ್ ಪತ್ನಿ ಟಬು

ಈ ಹೇಳಿಕೆ ನೀಡಿದ ಹೆಗಡೆ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತರಾಟೆಗೆ ತೆಗೆದುಕೊಂಡಿದ್ದರು. ಟ್ವಿಟ್ಟರ್ ನಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಹೆಗಡೆ, 'ಕೇವಲ ವಿವಾದಾತ್ಮಕ ಹೇಳಿಕೆ ನೀಡುವುದ್ನು ಬಿಟ್ಟರೆ ಕರ್ನಾಟಕದ ಬೆಳವಣಿಗೆಯಲ್ಲಿ ನಿಮ್ಮ ಕೊಡುಗೆ ಏನು?' ಎಂದು ಪ್ರಶ್ನಿಸಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಅನಂತ್ ಕುಮಾರ್ ಹೆಗಡೆ, ನನ್ನ ಸಾಧನೆಯನ್ನು ನಾನು ಖಂಡಿತ ಹೇಳುತ್ತೇನೆ. ಆದರೆ ಅದಕ್ಕೂ ಮೊದಲು ನೀವು ನಿಮ್ಮ ಸಾಧನೆಯ ಬಗ್ಗೆ ಹೇಳಿ. ನೀವು ಮುಸ್ಲಿಂ ಮಹಿಲೆಯ ಹಿಂದೆ ಓಡಿಹೋಗಿದ್ದು ಬಿಟ್ಟರೆ ನಿಮ್ಮ ಸಾಧನೆ ಏನು ಎಂದು ಪ್ರಶ್ನಿಸಿದ್ದರು.

ಈ ಎಲ್ಲ ಬೆಳವಣಿಗೆಯನ್ನು ಕಂಡ ರಾಹುಲ್ ಗಾಂಧಿ ಹೆಗಡೆ ಅವರಿಗೆ ಟ್ವೀಟ್ ಮಾಡಿ, ಅವರ ಹೇಳಿಕೆಯನ್ನು ಸಾರಾಸಗಟಾಗಿ ವಿರೋಧಿಸಿದ್ದರು.

ರಾಹುಲ್ ಗಾಂಧಿ ಟ್ವೀಟ್ ನಲ್ಲೇನಿತ್ತು?

"ಈ ಮನುಷ್ಯ ಎಲ್ಲ ಭಾರತೀಯರನ್ನೂ ಮುಜುಗರಕ್ಕೀಡಾಗುವಂತೆ ಮಾಡುತ್ತಿದ್ದಾರೆ. ಅವರು ಒಬ್ಬ ಕೇಂದ್ರ ಸಚಿವರಾಗಲು ಯೋಗ್ಯರಲ್ಲ. ಅವರನ್ನು ಮೊದಲು ಹುದ್ದೆಯಿಂದ ಕಿತ್ತೊಗೆಯಬೇಕು" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

Array

ನಿಮ್ಮ ಯೋಗ್ಯತೆ ಏನು ಹೇಳಿ ಮೊದಲು?!

"ಕೇವಲ ತನ್ನ ಕುಟುಂಬವನ್ನು ಓಲೈಸುವುದಕ್ಕಾಗಿ ಇರುವ ಒಬ್ಬ ವ್ಯಕ್ತಿ ಮತ್ತೊಬ್ಬರ ಯೋಗ್ಯತೆಯ ಬಗ್ಗೆ ಮಾತನಾಡುವುದು 'ವಿಪರ್ಯಾಸ' ಎಂದು ನನಗನ್ನಿಸುತ್ತೆ! ಚುನಾವಣೆಗಳಲ್ಲಿ ಸರಣಿ ಸೋಲಷ್ಟೇ ಅನ್ನಿಸುತ್ತ ಅವರ ಯೋಗ್ಯತೆ" ಎಂದು ರಾಹುಲ್ ಗಾಂಧಿ ಅವರ ಟ್ವೀಟ್ ಗೆ ಹೆಗಡೆ ಪ್ರತ್ಯುತ್ತರ ನೀಡಿದ್ದಾರೆ!

'ಹಿಂದು ಯುವತಿಯನ್ನು ಮುಟ್ಟಿದರೆ...' ಅನಂತ್ ಹೊಸ ವಿವಾದ!'ಹಿಂದು ಯುವತಿಯನ್ನು ಮುಟ್ಟಿದರೆ...' ಅನಂತ್ ಹೊಸ ವಿವಾದ!

ಸಜ್ಜನಿಕೆ ಹೆಸರಲ್ಲಿ ದಬ್ಬಾಳಿಕೆ ಸಲ್ಲ!

"ಸಜ್ಜನಿಕೆಯ ಹೆಸರಿನಲ್ಲಿ ಅನ್ಯಾಯ-ದಬ್ಬಾಳಿಕೆ-ಕುತಂತ್ರಗಳನ್ನು ಎಷ್ಟು ದಿನವೆಂದು ಸಹಿಸಿಕೊಂಡು ಆಯ್ಕೆ ಮಾಡಿದ ಜನತೆಯನ್ನು ಸುಮ್ಮನಾಗಿಸಲು ಸಾಧ್ಯ! ಒಂದು ತಲೆಮಾರಿನ ಬದಲಾವಣೆಯ ಕಾಲಘಟ್ಟದಲ್ಲಿ ಪಯಣಿಸಿದ್ದೇನೆ. ಅವರ ಅಭಿರುಚಿ-ಆಕಾಂಕ್ಷೆ ಎಲ್ಲವೂ ಬದಲಾಗಿದೆ. ಇನ್ನೂ ಸಜ್ಜನಿಕೆಯ ಹೆಸರಿನಲ್ಲಿ ಸೊಗಲಾಡಿಯಂತೆ ತೌಡು ಕುಟ್ಟುವವರು ಕುಟ್ಟುತಲಿರಲಿ" ಎಂದೂ ಹೆಗಡೆ ಟ್ವೀಟ್ ಮಾಡಿದ್ದಾರೆ.

ಟಬು ಗುಂಡೂರಾವ್ ರಿಂದ ಖಡಕ್ ಎಚ್ಚರಿಕೆ

ಅನಂತ್ ಕುಮಾರ್ ಹೆಗಡೆ ಅವರು ದಿನೇಶ್ ಗುಂಡೂರಾವ್ ಮುಸ್ಲಿಂ ಮಹಿಳೆಯ ಹಿಂದೆ ಓಡಿದ್ದು ಬಿಟ್ಟರೆ ಬೇರೆ ಸಾಧನೆ ಮಾಡಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ್ದ ದಿನೇಶ್ ಪತ್ನಿ ಟಬು ರಾವ್, ಹೆಗಡೆ ಅವರನ್ನು ಫೇಸ್ ಬುಕ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. 'ನನ್ನ ಪತಿಯನ್ನು ರಾಜಕೀಯದಲ್ಲಿ ಎದುರಿಸುವ ಸಾಮರ್ಥ್ಯ ಇಲ್ಲದ ನೀವು, ನನ್ನನ್ನು ನಿಮ್ಮ ಕೀಳುಮಟ್ಟದ ರಾಜಕಾರಣದಲ್ಲೆಳೆದು ತರಬೇಡಿ. ನಾನು ಯಾವುದೇ ಪಕ್ಷಕ್ಕಾಗಲೀ, ರಾಜಕೀಯಕ್ಕಾಗಲೀ ಸೇರಿದವಳಲ್ಲ' ಎಂದಿದ್ದರು.

ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮಕ್ಕೆ ಚಿಂತನೆ: ಎಂ.ಬಿ.ಪಾಟೀಲ್ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮಕ್ಕೆ ಚಿಂತನೆ: ಎಂ.ಬಿ.ಪಾಟೀಲ್

English summary
After Union minister Anant Kumar Hegde's provoking and controversial statement Congress president Rahul Gandhi reacted to it and even Hegde reacted Gandhi'd tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X