ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವೀಟ್ಸ್ : 'ಒಡೆದು ಆಳುವ ನೀತಿ ಕಾಂಗ್ರೆಸ್ಸಿಗೆ ಬ್ರಿಟಿಷರ ಕೊಡುಗೆ'

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 19: ಬಸವ ತತ್ತ್ವದ ಮೇಲೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸರ್ಕಾರ ಮಾನ್ಯತೆ ನೀಡಿದೆ. ಬಸವ ತತ್ತ್ವವನ್ನು ಪಾಲಿಸುವವರಿಗೆ ಮಾತ್ರ ಪ್ರತ್ಯೇಕ ಧರ್ಮದ ಸೌಲಭ್ಯಗಳು ಸಿಗಲಿವೆ ಎಂದು ಕಾಂಗ್ರೆಸ್ ಸರ್ಕಾರ ಘೋಷಿಸಿದೆ.

ಆದರೆ, ಬಸವಣ್ಣ ಎಂದಿಗೂ ಧರ್ಮ ಒಡೆಯುವ ಮಾತನಾಡಿಲ್ಲ, ಕಾಂಗ್ರೆಸ್ ಸರ್ಕಾರ ಇದನ್ನು ಸಾಧಿಸಿ ಬಿಟ್ಟಿತು ಎಂದು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು : ಸಚಿವ ಸಂಪುಟದ ನಿರ್ಣಯಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು : ಸಚಿವ ಸಂಪುಟದ ನಿರ್ಣಯ

ಮಾರ್ಚ್ 19ರಂದು ನಡೆದ ಸಚಿವ ಸಂಪುಟದಲ್ಲಿ ಲಿಂಗಾಯತ ಹಾಗೂ ವೀರಶೈವ ಎರಡನ್ನು ಐಕ್ಯಗೊಳಿಸಿ ಅಲ್ಪಸಂಖ್ಯಾತ ಮಾನ್ಯತೆ ಹಾಗೂ ಪ್ರತ್ಯೇಕ ಧರ್ಮ ಮಾನ್ಯತೆ ನೀಡಲು ತೀರ್ಮಾನಿಸಲಾಯಿತು.

ಕರ್ನಾಟಕ ಅಲ್ಪಸಂಖ್ಯಾತರ ಕಾಯ್ದೆ 2 (ಸಿ) ಪ್ರಕಾರ ಲಿಂಗಾಯತ ಧರ್ಮಕ್ಕೆ ಅಲ್ಪ ಸಂಖ್ಯಾತ ಮಾನ್ಯತೆ ನೀಡುವಂತೆ ಶಿಫಾರಸು ಮಾಡಲಾಗುತ್ತದೆ.

ಲಿಂಗಾಯತ ಪ್ರತ್ಯೇಕ ಧರ್ಮ: ಯಾರು, ಏನು ಹೇಳಿದರು?ಲಿಂಗಾಯತ ಪ್ರತ್ಯೇಕ ಧರ್ಮ: ಯಾರು, ಏನು ಹೇಳಿದರು?

ಇದೆಲ್ಲವೂ, ಲಿಂಗಾಯತ ಹಾಗೂ ವೀರಶೈವ ಮತ ಬ್ಯಾಂಕ್ ಒಡೆಯಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿರುವ ಹುನ್ನಾರ, ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಇಲ್ಲದ ಮುತುವರ್ಜಿಯನ್ನು ಧರ್ಮ ಒಡೆಯುವುದರಲ್ಲಿ ತೋರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

'ಕಾಂಗ್ರೆಸ್ಸಿಗೆ ಬ್ರಿಟಿಷರ ಕೊಡುಗೆ'

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಅವರಿಗೆ ಧರ್ಮ ಒಡೆಯುವ ಮೂಲಕ ಸಿದ್ದರಾಮಯ್ಯ ಅವರು ಉಡುಗೊರೆ ನೀಡಿದ್ದಾರೆ.

ಶಿವನ ಆರಾಧಕರು

ಲಿಂಗಾಯತರು ಶಿವನ ಆರಾಧಕರಾದ ಮೇಲೆ ಹಿಂದೂ ಧರ್ಮದಿಂದ ಬೇರೆಯಾಗಲು ಸಾಧ್ಯ

ಸಮಾಜ ಕಟ್ಟುವ ಕೆಲ್ಸ ಮಾಡಿ

ಕ್ರಾಂತಿಕಾರಿ ಬಸವಣ್ಣ ಅವರು ಸಮಾಜದಲ್ಲಿದ್ದ ಕಂದಾಚಾರ, ಮೂಢನಂಬಿಕೆಗಳನ್ನು ತೊಡೆದು ಹಾಕಿ, ಹೊಸ ಮಾರ್ಗವನ್ನು ಹುಟ್ಟುಹಾಕಿದರು. ಆದರೆ, ಇಂದು ಸಮಾಜ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.

ದೇಶದೆಲ್ಲೆಡೆ ಜಾತಿ, ಧರ್ಮಗಳನ್ನು ಒಡೆಯಲಾಗಿದೆ

ದೇಶದೆಲ್ಲೆಡೆ ಜಾತಿ, ಧರ್ಮಗಳನ್ನು ಒಡೆಯಲಾಗಿದೆ. ಕಾಂಗ್ರೆಸ್ ಇದೇ ತಂತ್ರವನ್ನು ಎಲ್ಲೆಡೆ ಅನುಸರಿಸುತ್ತಾ ಬಂದಿದೆ. ಹರ್ಯಾಣದಲ್ಲಿ ಜಾತ್, ಗುಜರಾತ್ ನಲ್ಲಿ ಒಬಿಸಿ, ದಲಿತರು, ಮಹಾರಾಷ್ಟ್ರದಲ್ಲಿ ದಲಿತರು, ರಾಜಸ್ಥಾನದಲ್ಲಿ ಗುಜ್ಜಾರ್, ಜಾತ್ ಹೀಗೆ ಎಲ್ಲೆಡೆ ಕಾಂಗ್ರೆಸ್ ತನ್ನ ತಂತ್ರ ಮುಂದುವರೆಸಿದೆ.

ಮೀಸಲಾತಿಯನ್ನು ತೆಗೆದು ಹಾಕಿ

ಜಾತಿ, ಮತ, ಪಂಥಗಳನ್ನು ಒಡೆಯುವುದು, ಮೀಸಲಾತಿ ನೀಡುವುದನ್ನು ನಿಲ್ಲಿಸಿ, ಜಾತ್ಯಾತೀತ ರಾಷ್ಟ್ರ ನಿರ್ಮಾಣ ಮಾಡಿ.

English summary
Siddaramaiah led Karnataka Government cabinet today decided to grant separate Lingayat religion status. Congress is using divide and rule formula by giving separate religion and minority status to Lingayats alleged Twitteratis. Here are the twitter reaction on issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X