ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 12 ಶ್ರೀಮಂತ ದೇವಾಲಯಗಳ ಹೊಸ ಪಟ್ಟಿ

|
Google Oneindia Kannada News

ಬೆಂಗಳೂರು, ಜು 7: ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ 2012-13ನೇ ಸಾಲಿನ ಹನ್ನೆರಡು ಶ್ರೀಮಂತ ದೇವಾಲಯಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ರಾಜ್ಯದ ಪ್ರತಿಷ್ಠಿತ ಮತ್ತು ಕಾರಣಿಕ ದೇವಾಲಯಗಳಿಗೆ ಭಕ್ತರಿಂದ ದೇಣಿಗೆ ಮತ್ತು ಕಾಣಿಕೆ ರೂಪದಲ್ಲಿ ಹಣದ ಹೊಳೆಯೇ ಹರಿದು ಬರುತ್ತಿದೆ. ದೇವಾಲಯಗಳ ವಾರ್ಷಿಕ ಆದಾಯ ಗಣನೀಯ ಪ್ರಮಾಣದಲ್ಲಿ ವೃದ್ದಿಯಾಗುತ್ತಿದೆ.

2012-13ನೇ ಅವಧಿಯಲ್ಲಿ ಕಾಣಿಕೆ ರೂಪದಲ್ಲಿ ಸುಮಾರು 262 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದಲ್ಲದೇ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣವೂ ದೇವಾಲಯಕ್ಕೆ ಬರುತ್ತಿರುವುದರಿಂದ ಒಟ್ಟಾರೆ ಆಸ್ತಿಯ ಪ್ರಮಾಣವೂ ಹೆಚ್ಚಾಗುತ್ತಿದೆ. (ಮುಜರಾಯಿ ದೇವಾಲಯಗಳ ಹುಂಡಿ ಶ್ರೀಮಂತರ ಪಾಲು)

ರಾಜ್ಯದ ಸುಮಾರು 40ಕ್ಕೂ ಹೆಚ್ಚು ದೇವಾಲಯಗಳಲ್ಲಿ ಕಾಣಿಕೆ ಮತ್ತು ದೇಣಿಗೆ ರೂಪದಲ್ಲಿನ ವಾರ್ಷಿಕ ಆದಾಯ ಕೋಟಿ ರೂಪಾಯಿಗಳನ್ನೂ ಮೀರಿದೆ. ರಾಜ್ಯದ ಹಲವಾರು ದೇವಾಲಯಗಳಲ್ಲಿ ಸಿಸಿಟಿವಿ ಮತ್ತು ಸೈರನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಹನ್ನೆರಡು ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ಸ್ಲೈಡಿನಲ್ಲಿ ನೀಡಲಾಗಿದೆ.

ಒಂದನೇ ಸ್ಥಾನ ಬಿಟ್ಟುಕೊಡದ ಕುಕ್ಕೆ

ಒಂದನೇ ಸ್ಥಾನ ಬಿಟ್ಟುಕೊಡದ ಕುಕ್ಕೆ

ಪ್ರತೀ ವರ್ಷದಂತೆ ಈ ಅವಧಿಯಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀಸುಬ್ರಮಣ್ಯ ದೇವಾಲಯ ಮೊದಲ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ದೇವಾಲಯದ ಒಟ್ಟು ಆದಾಯ 66.76 ಕೋಟಿ. ಆಶ್ಲೇಷ ಬಲಿ ಮತ್ತು ಸರ್ಪ ಸಂಸ್ಕಾರ ಸೇವೆಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಎರಡನೇ ಸ್ಥಾನದಲ್ಲಿ ಯಾವ ದೇವಾಲಯ

ಎರಡನೇ ಸ್ಥಾನದಲ್ಲಿ ಯಾವ ದೇವಾಲಯ

ಈ ಅವಧಿಯಲ್ಲೂ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ದೇವಾಲಯ ಎರಡನೇ ಸ್ಥಾನದಲ್ಲಿದೆ. ಈ ದೇವಾಲಯದಲ್ಲಿನ ವಾರ್ಷಿಕ ಆದಾಯ 35.20 ಕೋಟಿ.

ಮೂರನೇ ಸ್ಥಾನದಲ್ಲಿ ಅಮ್ಮನವರ ದೇವಾಲಯ

ಮೂರನೇ ಸ್ಥಾನದಲ್ಲಿ ಅಮ್ಮನವರ ದೇವಾಲಯ

ಮೂರನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ದೇವಾಲಯವಿದೆ. ಈ ಅವಧಿಯಲ್ಲಿ ದೇವಾಲಯದಲ್ಲಿ ವಾರ್ಷಿಕ ಆದಾಯ 23.53 ಕೋಟಿ.

ನಾಲ್ಕನೇ ಸ್ಥಾನದಲ್ಲಿ ಮತ್ತೊಂದು ದೇವಿಯ ದೇಗುಲ

ನಾಲ್ಕನೇ ಸ್ಥಾನದಲ್ಲಿ ಮತ್ತೊಂದು ದೇವಿಯ ದೇಗುಲ

ಮೈಸೂರು ಜಿಲ್ಲೆಯ, ನಾಡಿನ ಅಧಿದೇವತೆ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿ ತಾಯಿಯ ದೇವಾಲಯ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಈ ದೇವಾಲಯದ ವಾರ್ಷಿಕ ಆದಾಯ 14.20 ಕೋಟಿ.

ಐದನೇ ಸ್ಥಾನದಲ್ಲಿ ಶಿವನ ದೇವಾಲಯ

ಐದನೇ ಸ್ಥಾನದಲ್ಲಿ ಶಿವನ ದೇವಾಲಯ

ಮೈಸೂರು ಜಿಲ್ಲೆಯ ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಈ ಅವಧಿಯಲ್ಲಿನ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈ ದೇವಾಲಯದ ವಾರ್ಷಿಕ ಆದಾಯ 13.38 ಕೋಟಿ.

ಆರನೇ ಸ್ಥಾನದಲ್ಲಿ ದುರ್ಗಾಪರಮೇಶ್ವರಿ ದೇವಾಲಯ

ಆರನೇ ಸ್ಥಾನದಲ್ಲಿ ದುರ್ಗಾಪರಮೇಶ್ವರಿ ದೇವಾಲಯ

ದಕ್ಷಿಣಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ ದೇವಾಲಯ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ದೇವಾಲಯದ ವಾರ್ಷಿಕ ಆದಾಯ 12.85 ಕೋಟಿ.

ಏಳನೇ ಸ್ಥಾನದಲ್ಲಿ ಸವದತ್ತಿ ಯಲ್ಲಮ್ಮ

ಏಳನೇ ಸ್ಥಾನದಲ್ಲಿ ಸವದತ್ತಿ ಯಲ್ಲಮ್ಮ

ಬೆಳಗಾವಿ ಜಿಲ್ಲೆ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಾಲಯ ಏಳನೇ ಸ್ಥಾನದಲ್ಲಿದೆ. ಈ ದೇವಾಲಯದ ವಾರ್ಷಿಕ ಆದಾಯ 10.94 ಕೋಟಿ.

ಕೊಪ್ಪಳದ ಹುಲಿಗೆಮ್ಮ

ಕೊಪ್ಪಳದ ಹುಲಿಗೆಮ್ಮ

ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಾಲಯ ಎಂಟನೇ ಸ್ಥಾನದಲ್ಲಿದೆ. ಈ ದೇವಾಲಯ ಆದಾಯ 5.81 ಕೋಟಿ.

ಸಿದ್ದಲಿಂಗೇಶ್ವರ ದೇವಾಲಯ

ಸಿದ್ದಲಿಂಗೇಶ್ವರ ದೇವಾಲಯ

ತುಮಕೂರು ಜಿಲ್ಲೆಯ ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯ ಒಂಬತ್ತನೇ ಸ್ಥಾನದಲ್ಲಿದೆ. ಈ ದೇವಾಲಯದ ಆದಾಯ 5.77 ಕೋಟಿ.

ಉಡುಪಿ ಜಿಲ್ಲೆಯ ಮತ್ತೊಂದು ದೇವಾಲಯ

ಉಡುಪಿ ಜಿಲ್ಲೆಯ ಮತ್ತೊಂದು ದೇವಾಲಯ

ಉಡುಪಿ ಜಿಲ್ಲೆಯ ಮಂದರ್ತಿ ದುರ್ಗಾಪರಮೇಶ್ವರಿ ದೇವಾಲಯ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಈ ದೇವಾಲಯದ ವಾರ್ಷಿಕ ಆದಾಯ 5.64 ಕೋಟಿ.

ಬೆಂಗಳೂರಿನ ದೇವಲಯವೂ ಇದೆ

ಬೆಂಗಳೂರಿನ ದೇವಲಯವೂ ಇದೆ

ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರು ಜಿಲ್ಲೆಯ ಒಂದೇ ಒಂದು ದೇವಾಲಯವೆಂದರೆ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ದೇವಾಲಯ. ಹನ್ನೊಂದನೇ ಸ್ಥಾನದಲ್ಲಿರುವ ಈ ದೇವಾಲಯದ ವಾರ್ಷಿಕ ಆದಾಯ 5.59 ಕೋಟಿ.

ಉತ್ತರಕನ್ನಡ ಜಿಲ್ಲೆಯ ದೇವಾಲಯ

ಉತ್ತರಕನ್ನಡ ಜಿಲ್ಲೆಯ ದೇವಾಲಯ

ಶಿರಿಸಿ ಮಾರಿಕಾಂಬ ದೇವಾಲಯ ಹನ್ನೆರಡನೇ ಸ್ಥಾನದಲ್ಲಿರುವ ದೇವಾಲಯ. ಈ ದೇವಾಲಯದ ವಾರ್ಷಿಕ ಆದಾಯ 4.12 ಕೋಟಿ.

English summary
Twelve richest temples of Muzrai department, Karnataka. Kukke Subramanya temple retains the first position again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X