ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಹಲವೆಡೆ ಟಿವಿ 9, ನ್ಯೂಸ್ 9 ಪ್ರಸಾರ ಇಲ್ಲ

By Mahesh
|
Google Oneindia Kannada News

ಬೆಂಗಳೂರು, ನ.25: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಜನಪ್ರಿಯ ಸುದ್ದಿವಾಹಿನಿ ಟಿವಿ 9 ಹಾಗೂ ನ್ಯೂಸ್ 9 ವಾಹಿನಿಗಳ ಪ್ರಸಾರವನ್ನು ಕೇಬಲ್ ಆಪರೇಟರ್ ಗಳು ಬಂದ್ ಮಾಡಿದ್ದಾರೆ. ಸೋಮವಾರ ಸಂಜೆಯಿಂದಲೇ ಟಿವಿ 9 ಕನ್ನಡ ವಾಹಿನಿ ಪ್ರಸಾರ ಸ್ಥಗಿತವಾಗಿದೆ.

ಇದೀಗ ಬಂದ ಸುದ್ದಿ: ನಮ್ಮ ಸರ್ಕಾರ ಮಾಧ್ಯಮಗಳ ವಿರೋಧಿಯಲ್ಲ. ಟಿವಿ 9 ಕನ್ನಡ ಪ್ರಸಾರ ಸ್ಥಗಿತವಾಗಿರುವುದರಲ್ಲಿ ನನ್ನದಾಗಲಿ, ನನ್ನ ಸಂಪುಟದ ಸಚಿವರ ಕೈವಾಡವಿಲ್ಲ. ಈ ಬಗ್ಗೆ ಕೇಬಲ್ ಆಪರೇಟರ್ಸ್, ಮಾಧ್ಯಮ ಸಂಸ್ಥೆ ಮುಖ್ಯಸ್ಥರ ಜೊತೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಕೇಬಲ್ ಆಪರೇಟರ್‌ಗಳ ನಡುವೆ ಸಭೆ ನಡೆದ ನಂತರ ಈ ಬೆಳವಣಿಗೆ ನಡೆದಿದೆ. ಸಭೆಯಲ್ಲಿ ಎರಡೂ ಸುದ್ದಿವಾಹಿನಿಗಳ ಕೇಬಲ್ ಮೂಲಕ ಪ್ರಸಾರವನ್ನು ಸ್ಧಗಿತಗೊಳಿಸುವಂತೆ ಡಿಕೆ ಶಿವಕುಮಾರ್ ಅವರು ಆದೇಶಿಸಿದ್ದರು ಎನ್ನಲಾಗಿದೆ. [ನನ್ನ ತೇಜೋವಧೆಗೆ ವ್ಯವಸ್ಥಿತ ಪಿತೂರಿ: ಡಿಕೆಶಿ ]

TV9 and NEWS9 TV channels taken off the Air

ಸರ್ಕಾರದ ವಿರುದ್ಧ ಅನಗತ್ಯ ಸುದ್ದಿ ಪ್ರಸಾರ ಮಾಡುತ್ತಿದ್ದು, ಇದು ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರಿಂದ ಕೇಬಲ್ ಉದ್ಯಮಕ್ಕೂ ಧಕ್ಕೆಯಾಗಲಿದೆ., ಹೀಗಾಗಿ ಕೇಬಲ್ ಆಪರೇಟರ್ ಗಳು ಒಂದಾಗಿ ಈ ಎರಡೂ ವಾಹಿನಿಗಳ ಪ್ರಸಾರವನ್ನು ಸ್ಥಗಿತಗೊಳಿಸಬೇಕು ಎಂದು ಸಂದೇಶ ಕಳಿಸಲಾಗಿತ್ತು.

ಕೇಬಲ್ ಆಪರೇಟರ್ ಗಳ ಅಳಲು: ಈಗಾಗಲೇ ನಾವು ಸರಿಯಾದ ಮಾರ್ಗದಲ್ಲಿ ಆಪ್ಟಿಕ್ ಫೈಬರ್ ಕೇಬಲ್‌ಗಳನ್ನು ಹಾಕಿಕೊಳ್ಳಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅಲ್ಲದೆ ತೆರಿಗೆ ಹೆಚ್ಚಳ ಮಾಡದಂತೆ ಕೋರಿದ್ದೆವು. ಇದಕ್ಕೆ ಸರ್ಕಾರವೂ ಸೂಕ್ತವಾಗಿ ಸ್ಪಂದಿಸುತ್ತಿತ್ತು. ಡಿಜಿಟಲೈಜೇಶನ್‌, ಡಿಟಿಎಚ್ ಸೆಟ್ ಅಪ್ ಬಾಕ್ಸ್ ನಿಂದಾಗಿ ಕೇಬಲ್ ಆಪರೇಟರ್ ಗಳು ಸಂಕಷ್ಟ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚುವರಿ ತೆರಿಗೆ ಭರಿಸುವ ಸ್ಥಿತಿಯಲ್ಲಿಲ್ಲ ಎಂದು ಕೇಬಲ್ ಸಂಘಟಕರು ಹೇಳಿದ್ದಾರೆ.

ಪತ್ರಕರ್ತ ಪ್ರಕಾಶ್ ಬೆಳವಾಡಿ ಅವರು ನೀಡಿರುವ ಪ್ರತಿಕ್ರಿಯೆ ಹೀಗಿದೆ:

English summary
TV9 and NEWS9 TV channels have been taken off the air in many areas in Karnataka by cable operators since Monday evening. Karnataka Energy minister DK Shivakumar asked cable operators to blackout TV9 and NEWS9 in the entire state says News9 and TV 9 Kannada Facebook official page.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X