ಡಿಕೆಶಿ ಸ್ಟಿಂಗ್ ಆಪರೇಷನ್, ಟಿವಿ9 ವರದಿಗಾರರು, ನಿರ್ದೇಶಕರ ವಿಚಾರಣೆ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವದೆಹಲಿ, ಫೆಬ್ರವರಿ 14: ಸಾರ್ವಜನಿಕ ಸೇವೆಯಲ್ಲಿ ಇರುವವರ ವಿರುದ್ಧ ಟಿವಿ ಚಾನಲ್ ನವರು ಕುಟುಕು ಕಾರ್ಯಾಚರಣೆಗಳನ್ನು ಮಾಡುವಾಗ ಪೊಲೀಸ್ ಅಧಿಕಾರಿಗಳ ಸಹಾಯ ಪಡೆಯಬೇಕು ಎಂದು ನ್ಯಾಯಮೂರ್ತಿ ಕುಮಾರ್ ಗೋಯಲ್ ಹಾಗೂ ಯುಯು ಲಲಿತ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ಸೋಮವಾರ ಅಭಿಪ್ರಾಯ ಪಟ್ಟಿದೆ.

ಟಿವಿ 9 ನಿರ್ದೇಶಕ ಮಹೇಂದ್ರ ಮಿಶ್ರಾ ಮತ್ತು ಇಬ್ಬರು ವರದಿಗಾರರ ವಿರುದ್ಧದ ಬೆಂಗಳೂರು ಕೋರ್ಟ್ ನಲ್ಲಿನ ಆರೋಪಪಟ್ಟಿಯನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಇತರ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಮೂವರೂ ವಿಚಾರಣೆ ಎದುರಿಸಬೇಕು ಎಂದು ಆದೇಶ ನೀಡಿದೆ.[ರಾಜ್ಯದ ಹಲವೆಡೆ ಟಿವಿ 9, ನ್ಯೂಸ್ 9 ಪ್ರಸಾರ ಇಲ್ಲ]

ಲಂಡನ್ ಮೂಲದ ಕಂಪೆನಿಯ ಪ್ರತಿನಿಧಿಗಳು ಎಂಬ ಸೋಗಿನಲ್ಲಿ ವರದಿಗಾರರು ಇಂಧನ ಸಚಿವ ಡಿಕೆ ಶಿವಕುಮಾರ್ ಅವರನ್ನು 'ಬಯಲಿಗೆಳೆಯಲು' ಲಂಚ ನೀಡಲು ಪ್ರಯತ್ನಿಸಿದ್ದರು. ಅವರ ಮೇಲೆ ಸಚಿವ ಶಿವಕುಮಾರ್ ಅವರಿಗೆ ಅನುಮಾನ ಬಂದಿತ್ತು. ಆ ನಂತರ ಪೊಲೀಸರು ವರದಿಗಾರರನ್ನು ಬಂಧಿಸಿದ್ದರು.[ನನ್ನ ತೇಜೋವಧೆಗೆ ವ್ಯವಸ್ಥಿತ ಪಿತೂರಿ: ಡಿಕೆಶಿ]

ಆದೇಶದ ವಿರುದ್ಧ ವಾದ

ಆದೇಶದ ವಿರುದ್ಧ ವಾದ

ಹಿರಿಯ ವಕೀಲ ಕೆವಿ ವಿಶ್ವನಾಥನ್ ಅವರು ಟಿವಿ9 ಮುಖ್ಯಸ್ಥರ ಪರವಾಗಿ ಹಾಗೂ 2016ರ ನವೆಂಬರ್ 18ರಂದು ಹೈ ಕೋರ್ಟ್ ನೀಡಿದ ಆದೇಶದ ವಿರುದ್ಧ ವಾದ ಮಂಡಿಸಿದ್ದರು. ಅದಕ್ಕೂ ಮುನ್ನ ಅಂದರೆ ಜುಲೈ 26, 2016ರಲ್ಲಿ ಬೆಂಗಳೂರು ಕೋರ್ಟ್ ಮೂವರ ವಿರುದ್ಧ ನೀಡಿದ್ದ ಅದೇಶವನ್ನು ಅಮಾನ್ಯ ಮಾಡಲು ಹೈಕೋರ್ಟ್ ನಿರಾಕರಿಸಿತ್ತು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಆಗಲ್ಲ

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಆಗಲ್ಲ

ವರದಿಗಾರರು ತಮ್ಮ ಕೆಲಸವನ್ನಷ್ಟೇ ಮಾಡಿದ್ದಾರೆ ಎಂದು ವಕೀಲರು ಹೇಳಿದ್ದರು. ಅದರೆ ಸೆಕ್ಷನ್ 12, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯು ಈ ಪ್ರಕರಣದಲ್ಲಿ ಅನ್ವಯ ಆಗುವುದಿಲ್ಲ. ಏಕೆಂದರೆ ಅರ್ಜಿದಾರರು ಸಾರ್ವಜನಿಕ ಸೇವೆಯಲ್ಲಿ ಇರುವವರಲ್ಲ. ಮತ್ತು ಅವರು ಪ್ರಲೋಭನೆ ತೋರುವವರ ಏಜೆಂಟರಂತೆ ಸೋಗು ಹಾಕಿದ್ದಾರೆ ಎಂದು ವಾದ ಮಂಡಿಸಲಾಗಿತ್ತು.

ಅಮಾಯಕರು ಎಂದು ಸಾಬೀತುಪಡಿಸಲಿ

ಅಮಾಯಕರು ಎಂದು ಸಾಬೀತುಪಡಿಸಲಿ

ಆದರೆ, ಪೀಠವು ಈ ಉತ್ತರದಿಂದ ತೃಪ್ತವಾಗಲಿಲ್ಲ. "ಯಾರಾದರೂ ಸಚಿವರ ಬಳಿ ಲಂಚ ಕೊಡಲು ಹೋಗಿ, ಸಿಕ್ಕಿಬಿದ್ದರೆ ವಿಚಾರಣೆ ವೇಳೆ ತಾವು ಅಮಾಯಕರು ಎಂಬುದನ್ನು ಸಾಬೀತು ಪಡಿಸಬೇಕು. ಅದೂ ಪತ್ರಿಕೋದ್ಯಮದ ಹಕ್ಕಿನ ಒಳಗಿದ್ದರೆ, ಅದು ಖಂಡಿತಾ ಪರೀಕ್ಷೆಗೊಳಪಡಬೇಕು" ಎಂದು ಹೇಳಿದೆ.

ಸ್ಟಿಂಗ್ ಅಪರೇಷನ್ ನಲ್ಲಿ ಅನುಸರಿಸಬೇಕಾದ ಕ್ರಮ

ಸ್ಟಿಂಗ್ ಅಪರೇಷನ್ ನಲ್ಲಿ ಅನುಸರಿಸಬೇಕಾದ ಕ್ರಮ

ಪೀಠವು ಆರ್ ಕೆ ಆನಂದ್ ಪ್ರಕರಣವನ್ನು ಗಮನಿಸಿತು. ಸ್ಟಿಂಗ್ ಆಪರೇಷನ್ ಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಗಮನ ಸೆಳೆಯಿತು. ಆದರೆ ವಿಶ್ವನಾಥನ್ ಅವರು ಅನಿರುದ್ಧ್ ಬಹಾಲ್ ಪ್ರಕರಣದ ಪ್ರಸ್ತಾವ ಮಾಡಿದರು. ಆ ಪ್ರಕರಣದಲ್ಲಿ ದೆಹಲಿ ಹೈ ಕೋರ್ಟ್, ಸ್ಟಿಂಗ್ ಅಪರೇಷನ್ ಮಾಡಿದ ಪತ್ರಕರ್ತರ ವಿರುದ್ಧ ಯಾವುದೇ ಆರೋಪ ಮಾಡುವಂತಿಲ್ಲ ಎಂದು ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.

ಪ್ರಭಾವಕ್ಕೆ ಒಳಗಾಗಬಾರದು

ಪ್ರಭಾವಕ್ಕೆ ಒಳಗಾಗಬಾರದು

ಅರ್ಜಿದಾರರು ವಿಚಾರಣೆ ಎದುರಿಸಬೇಕು. ಹೈಕೋರ್ಟ್ ನ ಆದೇಶದಲ್ಲಿ ತಿಳಿಸಿರುವ ಕೆಲವು ವ್ಯತಿರಿಕ್ತ ಅಂಶಗಳಿಂದ ವಿಚಾರಣೆ ಕೋರ್ಟ್ ಪ್ರಭಾವಕ್ಕೆ ಒಳಗಾಗಬಾರದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme court of India declined to quash the ruling of a Bengaluru court to frame charges against TV9 director Mahendra Mishra and Two reporters, who were arrested in March 2014, while in a sting operation against minister DK Shivakumar.
Please Wait while comments are loading...