ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ಅಶ್ವಥ್ ನಾರಾಯಣ Vs ಡಾ.ಸುಧಾಕರ್: ಮತ್ತದೇ ಸಮಸ್ಯೆ, ಬಿಜೆಪಿಯಲ್ಲೇ ಗೊಂದಲ

|
Google Oneindia Kannada News

ಒಂದು ವೇಳೆ ಕೋವಿಡ್ ಅಟಕಾಯಿಸಿಕೊಳ್ಳದೇ ಇದ್ದಿದ್ದರೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಮೇಲೆ ಎಲ್ಲರ ಕಣ್ಣು ಬೀಳುತ್ತಿರಲಿಲ್ಲವೇನೋ? ಕೊರೊನಾ ಆರಂಭದ ದಿನದಿಂದಲೇ ಎರಡು ಇಲಾಖೆಯ ನಡುವೆ ಬರೀ ಸಮನ್ವಯದ ಕೊರತೆ.

ಮೊದಲು ಬಿ.ಶ್ರೀರಾಮುಲು ಮತ್ತು ಡಾ.ಸುಧಾಕರ್ ನಡುವಿನ ಪ್ರತಿಷ್ಠೆಯ ವಿಚಾರವಾಗಿದ್ದ ಈ ವಿಚಾರವನ್ನು ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಎರಡೂ ಖಾತೆಯನ್ನು ಸುಧಾಕರ್ ಅವರಿಗೆ ನೀಡಿದ್ದರು.

ಬ್ಲ್ಯಾಕ್ ಫಂಗಸ್ ಪೀಡಿತರಿಗೆ ರಹಸ್ಯ ಚಿಕಿತ್ಸೆ ನೀಡುವುದು ಅಪರಾಧಬ್ಲ್ಯಾಕ್ ಫಂಗಸ್ ಪೀಡಿತರಿಗೆ ರಹಸ್ಯ ಚಿಕಿತ್ಸೆ ನೀಡುವುದು ಅಪರಾಧ

ಇದಾದ ನಂತರ ಸಮನ್ವಯದ ಕೊರತೆ ಇಲ್ಲದಿದ್ದರೂ, ಬಹಳಷ್ಟು ಬಾರಿ ಹಾಲೀ ಆರೋಗ್ಯ ಸಚಿವರು ಈ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರಾ ಎನ್ನುವುದು ಸಾರ್ವಜನಿಕ ವಲಯದಲ್ಲೇ ಎದ್ದಿದ್ದ ಪ್ರಶ್ನೆ.

ಚಾಮರಾಜನಗರದ ಆಕ್ಸಿಜನ್ ದುರಂತದ ನಂತರ ಐದು ಜನರಿಗೆ ಯಡಿಯೂರಪ್ಪ ವಿವಿಧ ಜವಾಬ್ದಾರಿಯನ್ನು ಹಂಚಿದ್ದರು. ಅಲ್ಲಿಂದ, ಆರೋಗ್ಯ ಸಚಿವರು ಮತ್ತು ಐವರ ಪೈಕಿ ಇಬ್ಬರ ನಡುವೆ ಹೊಂದಾಣಿಕೆಯ ಕೊರತೆ ಎದುರಾಗಿದೆ ಎನ್ನುವುದಕ್ಕೆ ಅವರುಗಳು ನೀಡುತ್ತಿರುವ ವಿಭಿನ್ನ ಹೇಳಿಕೆಗಳೇ ಉದಾಹರಣೆ.

ಸ್ವ್ಯಾಬ್ ಟೆಸ್ಟ್‌ ಭಯವೇ, ಗಾರ್ಗ್ಲಿಂಗ್ ಮಾಡಿಯೂ ಕೋವಿಡ್ ಪರೀಕ್ಷೆ ಮಾಡಬಹುದು!ಸ್ವ್ಯಾಬ್ ಟೆಸ್ಟ್‌ ಭಯವೇ, ಗಾರ್ಗ್ಲಿಂಗ್ ಮಾಡಿಯೂ ಕೋವಿಡ್ ಪರೀಕ್ಷೆ ಮಾಡಬಹುದು!

 ಆರ್.ಅಶೋಕ್ ಮತ್ತು ಡಾ.ಅಶ್ವಥ್ ನಾರಾಯಣ ಅವರಿಗೆ ಸಿಎಂ ಜವಾಬ್ದಾರಿ ಹಂಚಿಕೆ

ಆರ್.ಅಶೋಕ್ ಮತ್ತು ಡಾ.ಅಶ್ವಥ್ ನಾರಾಯಣ ಅವರಿಗೆ ಸಿಎಂ ಜವಾಬ್ದಾರಿ ಹಂಚಿಕೆ

ಆರ್.ಅಶೋಕ್ ಮತ್ತು ಡಾ.ಅಶ್ವಥ್ ನಾರಾಯಣ ಅವರಿಗೆ ಮುಖ್ಯಮಂತ್ರಿಗಳು ಜವಾಬ್ದಾರಿ ಹಂಚಿದ ನಂತರ, ಸ್ವಾಭಾವಿಕವಾಗಿ ಆರೋಗ್ಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಲೇ ಬೇಕಾಗುತ್ತದೆ. ಇದರಿಂದಾಗಿ, ಒಂದು ಹಂತದಲ್ಲಿ ಡಿಸಿಎಂ ಅಶ್ವಥನಾರಾಯಣ ಮತ್ತು ಸುಧಾಕರ್ ನಡುವೆ ಸಿಎಂ ಸಮ್ಮುಖದ್ದಲ್ಲೇ ಶಟ್ ಅಪ್, ಯು ಶಟ್ ಅಪ್ ಎನ್ನುವ ಮಾತಿನ ಚಕಮಕಿ ನಡೆದಿತ್ತು ಎಂದು ಹೇಳಲಾಗುತ್ತಿದೆ.

 ಸುಧಾಕರ್ ಅವರಿಗೆ ಮೂಲೆಗುಂಪಾಗುವ ಭಯ ಎದುರಾಗುತ್ತಿದೆ

ಸುಧಾಕರ್ ಅವರಿಗೆ ಮೂಲೆಗುಂಪಾಗುವ ಭಯ ಎದುರಾಗುತ್ತಿದೆ

ಇನ್ನು, ಆರ್.ಅಶೋಕ್, ಅಶ್ವಥ್ ನಾರಾಯಣ ಮತ್ತು ಸುಧಾಕರ್ ನಡುವೆ ತೀವ್ರ ಪೈಪೋಟಿಯಿದೆ ಎನ್ನುವುದಕ್ಕೆ ಹಲವು ನಿದರ್ಶನಗಳು ಮಾಧ್ಯಮಗೋಷ್ಠಿಯಲ್ಲೇ ಎದುರಾಗಿದೆ. ಹೆಚ್ಚುವರಿಯಾಗಿ ಸಿಕ್ಕ ಜವಾಬ್ದಾರಿಯನ್ನು ಸವಾಲಾಗಿ ಅಶ್ವಥ್ ನಾರಾಯಣ ಮತ್ತು ಅಶೋಕ್ ತೆಗೆದುಕೊಂಡಿರುವುದು ಅತ್ಯಂತ ಸ್ಪಷ್ಟವಾಗುತ್ತಿದೆ. ಇತ್ತ ಸುಧಾಕರ್ ಅವರಿಗೆ ಮೂಲೆಗುಂಪಾಗುವ ಭಯ ಎದುರಾಗುತ್ತಿದೆ.

 ಈ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದ ಸುಧಾಕರ್

ಈ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದ ಸುಧಾಕರ್

ಲಸಿಕೆ ಖರೀದಿಗೆ ಜಾಗತಿಕ ಟೆಂಡರ್ ಅನ್ನು ಕರೆಯಲಾಗಿದೆ ಎಂದು ಅಶ್ವಥ್ ನಾರಾಯಣ ಹೇಳಿದ್ದರು. ನನಗೆ, ಈ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಸುಧಾಕರ್ ಹೇಳಿದ್ದರು. ಮೊದಲೇ ಲಸಿಕೆಯ ಹಾಹಾಕಾರದ ನಡುವೆ ಇವರಿಬ್ಬರ ಗೊಂದಲದ ಹೇಳಿಕೆ ಬಿಜೆಪಿಯಲ್ಲೇ ಚರ್ಚೆಯ ವಿಷಯವಾಗಿತ್ತು. ಕೊನೆಗೆ, ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದು ಸಿಎಂ ಹೇಳಿಕೆಯನ್ನು ನೀಡಿದ್ದರು.

 ಶಿಲೀಂಧ್ರ ಸೋಂಕಿಗೆ (ಬ್ಲ್ಯಾಕ್ ಫಂಗಸ್) ನಮ್ಮ ರಾಜ್ಯದಲ್ಲಿ ಔಷಧಿಯ ಕೊರತೆಯಿಲ್ಲ

ಶಿಲೀಂಧ್ರ ಸೋಂಕಿಗೆ (ಬ್ಲ್ಯಾಕ್ ಫಂಗಸ್) ನಮ್ಮ ರಾಜ್ಯದಲ್ಲಿ ಔಷಧಿಯ ಕೊರತೆಯಿಲ್ಲ

ಇನ್ನೊಂದು ಉದಾಹರಣೆಯೆಂದರೆ, ಶಿಲೀಂಧ್ರ ಸೋಂಕಿಗೆ (ಬ್ಲ್ಯಾಕ್ ಫಂಗಸ್) ನಮ್ಮ ರಾಜ್ಯದಲ್ಲಿ ಔಷಧಿಯ ಕೊರತೆಯಿಲ್ಲ ಎಂದು ಅಶ್ವಥ್ ನಾರಾಯಣ ಹೇಳಿದ್ದರೆ, ಕೊರತೆ ಇರುವುದು ಹೌದು ಎಂದು ಸುಧಾಕರ್ ಹೇಳಿದ್ದರು. ಈ ಗೊಂದಲದ ಹೇಳಿಕೆ, ವಿರೋಧ ಪಕ್ಷಗಳಿಗೆ ಆಹಾರವಾಗಿದ್ದವು.

Recommended Video

ನಿಮ್ಮ ಖಾಸಗಿ ಅಂಗಾಂಗಗಳ ಮೇಲೆ ಟಾರ್ಗೆಟ್ ಮಾಡುತ್ತೆ White Fungus!! | Oneindia Kannada

English summary
Tug of war between Dr. Ashwathanarayana Vs. Dr. Sudhakar causing Karnataka govt to flip-flop on COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X