ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತೃಪ್ತರಿಗೆ ಅನರ್ಹತೆ ಭೀತಿ, ವಿಪ್ ಬಗ್ಗೆ ಸ್ಪೀಕರ್ ಮಹತ್ವದ ರೂಲಿಂಗ್

|
Google Oneindia Kannada News

Recommended Video

ಅತೃಪ್ತರ ಬಗ್ಗೆ ರೂಲಿಂಗ್ ಹೊರಡಿಸಿದ ಸ್ಪೀಕರ್ ರಮೇಶ್ ಕುಮಾರ್..? | Oneindia Kannada

ಬೆಂಗಳೂರು, ಜುಲೈ 22: ಶಾಸಕರ ರಾಜೀನಾಮೆ, ಅನರ್ಹತೆ, ವಿಪ್, ವಿಶ್ವಾಸಮತ ಯಾಚನೆ ವಿಳಂಬ, ಕೈ ತೆನೆ ಸರ್ಕಾರದ ಅಳಿವು ಉಳಿವು ಎಲ್ಲಾ ಲೆಕ್ಕಾಚಾರ, ಸುಪ್ರೀಂಕೋರ್ಟ್ ತೀರ್ಪು, ಸಾಂವಿಧಾನಿಕ ಹುದ್ದೆಗಳ ನಡುವಿನ ತಿಕ್ಕಾಟಗಳು ಇಂದಾದರೂ ಅಂತ್ಯ ಕಾಣಬಹುದು ಎಂಬ ಶ್ರೀಸಾಮಾನ್ಯರ ನಿರೀಕ್ಷೆ ಸುಳ್ಳಾಗಿದೆ. 15ನೇ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಸೋಮವಾರ(ಜುಲೈ 22)ವು ಚರ್ಚೆ ಮುಂದುವರೆದಿದೆ. ಈ ನಡುವೆ ಸದನದ 'ಅಂಪೈರ್' ರಮೇಶ್ ಕುಮಾರ್ ಅವರು ಮಹತ್ವದ ರೂಲಿಂಗ್ ನೀಡಿದ್ದಾರೆ.

'ಸಂವಿಧಾನಬದ್ಧವಾಗಿ ಬಂದ ಅಧಿಕಾರವನ್ನು ನಾನು ಅಂಪೈರ್ ರೀತಿ ನಿರ್ವಹಿಸುತ್ತೇನೆ' ಎಂದಿರುವ ಸ್ಪೀಕರ್ ರಮೇಶ್ ಕುಮಾರ್ ಇಂದು ಚರ್ಚೆ ಆರಂಭವವಾಗುವುದಕ್ಕೂ ಮುನ್ನ ನೀಡಿದ ರೂಲಿಂಗ್ ರಾಜಕೀಯ ನಾಟಕದ ಮುಂದಿನ ಅಂಕದಲ್ಲಿ ಮಹತ್ವದ ಪಾತ್ರವಹಿಸಲಿದೆ. ವಿಪ್, ಶಾಸಕಾಂಗ ಪಕ್ಷದ ಅಧಿಕಾರದ ಬಗ್ಗೆ ರಮೇಶ್ ಕುಮಾರ್ ಅವರು ಮಾತನಾಡಿದ್ದಾರೆ.

ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?

"ಕರ್ನಾಟಕದ ರೆಬೆಲ್ ಶಾಸಕರು ಸಲ್ಲಿಸಿದ್ದ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ರಮೇಶ್ ಕಮಾರ್ ಅವರು ವಿಳಂಬ ಮಾಡುತ್ತಿದ್ದಾರೆ" ಎಂದು ಆರೋಪಿಸಿ ಸುಪ್ರೀಂಕೋರ್ಟಿನಲ್ಲಿ ದೂರು ಸಲ್ಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಿಂದ ಮಧ್ಯಂತರ ತೀರ್ಪು ಬಂದ ಬಳಿಕ ಕರ್ನಾಟಕ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ನಡೆಸಲು ಮುಂದಾಗಿದ್ದರು. ಆದರೆ, ಸುಪ್ರೀಂಕೋರ್ಟಿನಲ್ಲಿ ರೆಬಲ್ ಶಾಸಕರ ವಿರುದ್ಧವೇ ಅರ್ಜಿ ಸಲ್ಲಿಕೆಯಾಗಿದೆ. ವಿಶ್ವಾಸಮತ ಯಾಚನೆ ಪ್ರಕ್ರಿಯೆ ತ್ವರಿತವಾಗಿ ಮುಗಿಸುವಂತೆ ಅರ್ಜಿ ವಿಚಾರಣೆಯಲ್ಲಿದೆ.

ವಿಪ್ ಜಾರಿಗೊಳಿಸುವ ಅಧಿಕಾರವಿದೆ

ವಿಪ್ ಜಾರಿಗೊಳಿಸುವ ಅಧಿಕಾರವಿದೆ

* ವಿಶ್ವಾಸಮತಯಾಚನೆ ಪ್ರಕ್ರಿಯೆ ವಿಳಂಬದ ವಿಷಯದಲ್ಲಿ ನನ್ನನ್ನು ಬಲಿಪಶು ಮಾಡಬೇಡಿ: ಸ್ಪೀಕರ್ ರಮೇಶ್ ಕುಮಾರ್.
* "ಸಂವಿಧಾನದ 10ನೇ ಶೆಡ್ಯೂಲ್ ಅನ್ವಯ ವಿಪ್ ಜಾರಿ ಮಾಡುವ ಅಧಿಕಾರ ಶಾಸಕಾಂಗ ಪಕ್ಷದ ನಾಯಕರಿಗೆ ಇದೆ. ಆದರೆ, ವಿಪ್ ಜಾರಿಗೊಳಿಸುವುದು, ವಿಶ್ವಾಸಮತ ಯಾಚನೆ, ಸದನದ ಕಲಾಪದಲ್ಲಿ ಹಾಜರಾಗುವಂತೆ ಸೂಚಿಸುವುದು ಆಯಾ ಪಕ್ಷಕ್ಕೆ ಬಿಟ್ಟ ವಿಚಾರ" ಎಂದು ಸದನಕ್ಕೆ ತಿಳಿಸಿದ ರಮೇಶ್ ಕುಮಾರ್.
* ಮುಂಬೈನಲ್ಲಿರುವ ಶಾಸಕರಿಗೆ ನಾನು ಯಾವುದೇ ಸಂದೇಶ ಕಳಿಸುವುದಿಲ್ಲ. ರಾಜೀನಾಮೆ ಸಂಬಂಧವಾಗಿ ವಿಚಾರಣೆಗಾಗಿ ಹಾಜರಾಗುವಂತೆ ಸೂಚಿಸಿದ್ದೇನೆ.
* "ಸುಪ್ರೀಂಕೋರ್ಟಿನ ಆದೇಶವನ್ನು ಪರಿಶೀಲನೆ ಮಾಡುತ್ತಿದ್ದರಿಂದ ವಿಶ್ವಾಸಮತಯಾಚನೆ ಪ್ರಕ್ರಿಯೆ ವಿಳಂಬವಾಗಿದೆ": ರಮೇಶ್ ಕುಮಾರ್.

ಶಾಸಕರ ಮೇಲೆ ಒತ್ತಡ ಹೇರುವಂತಿಲ್ಲ

ಶಾಸಕರ ಮೇಲೆ ಒತ್ತಡ ಹೇರುವಂತಿಲ್ಲ

"ಸುಪ್ರೀಂಕೋರ್ಟ್ ಈ ಹಿಂದಿನ ಆದೇಶದಲ್ಲಿ ಅತೃಪ್ತ ಶಾಸಕರ ಮೇಲೆ ಒತ್ತಡ ಹೇರಿ ಸದನಕ್ಕೆ ಹಾಜರಾಗುವಂತೆ ಆದೇಶಿಸುವಂತಿಲ್ಲ ಎಂದು ಹೇಳಲಾಗಿದೆ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು" ಎಂದು ಹೇಳಿಲ್ಲ, ಹೀಗಾಗಿ, ರಾಜೀನಾಮೆ ಸಲ್ಲಿಸಿ ಮಾನಸಿಕವಾಗಿ ಪಕ್ಷದಿಂದ ದೂರವಿರುವ ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ ಎಂಬ ವಾದವಿತ್ತು. ಆದರೆ, ಒತ್ತಡ ಹೇರಬಾರದು ಎಂದಷ್ಟೇ ಸುಪ್ರೀಂಕೋರ್ಟ್ ಹೇಳಿದ್ದು, ಪಕ್ಷದ ವಿಪ್ ಅನ್ವಯವಾಗುವುದಿಲ್ಲ ಎಂದು ಮಧ್ಯಂತರ ಆದೇಶದಲ್ಲಿ ಹೇಳಿಲ್ಲ ಎಂದು ಕಾಂಗ್ರೆಸ್ -ಜೆಡಿಎಸ್ ವಾದಿಸಿದೆ. ಕಾನೂನು ತಜ್ಞ ನಡುವಿನ ಚರ್ಚೆ ನಡುವೆ ಮುಂಬೈಯಲ್ಲಿರುವ ರೆಬೆಲ್ ಶಾಸಕರು ಇಂದು ಮೈತ್ರಿ ಸರ್ಕಾರದ ವಿಶ್ವಾಸಮತಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.

'ಆಯಾ ರಾಮ್, ಗಯಾ ರಾಮ್' ಪಕ್ಷಾಂತರ ನಿಷೇಧ ಕಾಯ್ದೆ ಹೇಗೆ? 'ಆಯಾ ರಾಮ್, ಗಯಾ ರಾಮ್' ಪಕ್ಷಾಂತರ ನಿಷೇಧ ಕಾಯ್ದೆ ಹೇಗೆ?

ವಿಪ್ ಬಗ್ಗೆ ಮಧ್ಯಕಾಲೀಕ ತೀರ್ಪು ಬಂದಿಲ್ಲ

ವಿಪ್ ಬಗ್ಗೆ ಮಧ್ಯಕಾಲೀಕ ತೀರ್ಪು ಬಂದಿಲ್ಲ

"ಎಲ್ಲಾ ರಾಜಕೀಯ ಪಕ್ಷಗಳಿಗೂ ಅನ್ವಯವಾಗುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಇದು ಈ ಪ್ರಕರಣದ ಮಧ್ಯಂತರ ತೀರ್ಪು ಮಾತ್ರ, ಮಧ್ಯಕಾಲೀಕ ತೀರ್ಪಲ್ಲ. ತೀರ್ಪಿನ ಅನ್ವಯ ಅತೃಪ್ತ ಶಾಸಕರು ಸದನಕ್ಕೆ ಹಾಜರಾಗುವ ಬಗ್ಗೆ ಸ್ವಂತ ನಿರ್ಧಾರ ಕೈಗೊಳ್ಳಬಹುದು. ವಿಪ್ ಜಾರಿ ಅವರ ಕರ್ತವ್ಯ, ಸದನಕ್ಕೆ ಹಾಜರಾಗುವುದು ನೈತಿಕ ಹಕ್ಕು, ವಿಪ್ ಉಲ್ಲಂಘನೆ ಹಾಗೂ ಅದರ ಪರಿಣಾಮ ಮುಂದಿನ ಕ್ರಮಗಳ ಬಗ್ಗೆ ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಹೇಳಬಹುದು, ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಸ್ಪೀಕರ್ ಏನು ಮಾಡಬೇಕು ಎಂಬುದನ್ನು ಸುಪ್ರೀಂಕೋರ್ಟ್ ಹೇಳಿಲ್ಲ, ಈ ಪ್ರಕ್ರಿಯೆ ಸ್ಪೀಕರ್ ಇಚ್ಛೆಯಂತೆ ನಡೆಸಬಹುದು" ಎಂದು ಮಾಜಿ ಅಡ್ವೋಕೇಟ್ ಜನರಲ್ ಎಸ್ ದೊರೈರಾಜು ಅವರು ಖಾಸಗಿ ವಾಹಿನಿ ಜೊತೆ ಮಾತನಾಡುತ್ತಾ ಹೇಳಿದರು.

ಕಾಂಗ್ರೆಸ್ ಮೊದಲಿನಿಂದಲೂ ವಿಪ್ ಪರ

ಕಾಂಗ್ರೆಸ್ ಮೊದಲಿನಿಂದಲೂ ವಿಪ್ ಪರ

ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿ, ವಿಪ್ ಜಾರಿಗೊಳಿಸುವುದು, ಶಾಸಕರ ನಡವಳಿಕೆಯನ್ನು ನಿಯಂತ್ರಿಸುವುದರ ಬಗ್ಗೆ, ಸಂವಿಧಾನದ 10ನೇ ಶೆಡ್ಯೂಲ್ ಬಳಸುವುದರ ಬಗ್ಗೆ, ಶಾಸಕರ ಅನರ್ಹತೆ ಬಗ್ಗೆ ನಿರ್ಣಯ ಕೈಗೊಳ್ಳುವ ಅಧಿಕಾರವನ್ನೇ ಕಸಿದರೆ ಹೇಗೆ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಈಗ ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ ರೂಲಿಂಗ್ ನೀಡಿದ್ದರಿಂದ ಕಾಂಗ್ರೆಸ್ ವಾದಕ್ಕೆ ಪುಷ್ಟಿ ಸಿಕ್ಕಿದೆ. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಅವರು ಮೇ 2016ರಲ್ಲಿ ಉತ್ತರಾಖಂಡ್ ರಾಜ್ಯದಲ್ಲಿ ಸರ್ಕಾರ ಸ್ಥಾಪನೆ ಮಾಡಲು ಯತ್ನಿಸಿದಾಗ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಪರಿಗಣಿಸಿ ಎಂದಿದ್ದರು.

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆಗಳೇನು? ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆಗಳೇನು?

English summary
Turst vote : Whip also applies to rebel MLAs, I will not send a message to MLAs in Mumbai. Issuing whip is left to leaders of respective parties said Speaker Ramesh Kumar .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X