ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಅವ್ರೇ, ಯಾಕ್ರೀ ನಿಮಗೆ ಅಷ್ಟು ಆತುರ-ಸಿಎಂ ಎಚ್ಡಿಕೆ

|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪಗೆ ಗದರಿದ ಎಚ್ ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಜುಲೈ 18: ಶಾಸಕರ ಸರಣಿ ರಾಜೀನಾಮೆಯನ್ನು ಅಂಗೀಕರಿಸಲು ಸ್ಪೀಕರ್ ರಮೇಶ್ ಕುಮಾರ್ ವಿಳಂಬ ಮಾಡಿದ್ದಾರೆ ಎಂಬ ಕೇಸಿನ ಬಗ್ಗೆ ಸುಪ್ರೀಂಕೋರ್ಟಿನ ಮಧ್ಯಂತರ ತೀರ್ಪು ನೀಡಿದ ಬಳಿಕ, ಕಾಂಗ್ರೆಸ್-ಜೆಡಿಎಸ್ ಸರ್ಕಾರ ವಿಶ್ವಾಸಮತ ಯಾಚನೆ ಆರಂಭವಾಗಿದೆ.

ಜುಲೈ 06ರಿಂದ ಆರಂಭವಾದ ರಾಜೀನಾಮೆ ನೀಡುವ ನಾಟಕ ಇನ್ನೂ ಮುಂದುವರೆದಿದೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ಅತೃಪ್ತ ಶಾಸಕರಿಗೆ ಹೆಚ್ಚಿನ ಬಲ ಬಂದಿದೆ ಎನ್ನಲಾಗಿದೆ. ಆದರೆ, ಎಲ್ಲವೂ ಸ್ಪೀಕರ್ ಕೈಲಿದ್ದು, ರಾಜೀನಾಮೆ ಅಂಗೀಕರಿಸಿದರೆ, ಸದನದಲ್ಲಿ ಸಂಖ್ಯಾಬಲ ಲೆಕ್ಕಾಚಾರದಲ್ಲಿ ಎಲ್ಲಾ ರಾಜಕೀಯ ತಂತ್ರಗಳು ಉಲ್ಟಾ ಹೊಡೆಯಲಿವೆ. ಕೊನೆಯದಾಗಿ ಲೆಕ್ಕಕ್ಕೆ ಬರುವುದು ಯಾವ ಪಕ್ಷಕ್ಕೆ ಎಷ್ಟು ಸದಸ್ಯರ ಬಲ ಇದೆ? ಎಂಬುದು ಮಾತ್ರ. ಸದ್ಯಕ್ಕೆ ಅತೃಪ್ತರೆಲ್ಲರೂ ಮುಂಬೈನಲ್ಲೇ ಉಳಿದಿದ್ದಾರೆ.

ವಿಶ್ವಾಸಮತ: ಸದನದಲ್ಲಿ ಏನೇನು ಘಟನಾವಳಿಗಳು ನಡೆಯಲಿವೆ? ವಿಶ್ವಾಸಮತ: ಸದನದಲ್ಲಿ ಏನೇನು ಘಟನಾವಳಿಗಳು ನಡೆಯಲಿವೆ?

"ಕುಮಾರಸ್ವಾಮಿ ಸರ್ಕಾರದ ಭವಿಷ್ಯ ನಿರ್ಧರಿಸಲಿದೆ, ವಿಶ್ವಾಸಮತಯಾಚನೆ ಮಾಡಲಿ: ಎಂದು ವಿರೋಧ ಪಕ್ಷದ ನಾಯಕ, ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸದನದಲ್ಲಿ ತಮ್ಮ ಭಾಷಣದ ವೇಳೆ ಹೇಳಿದರು.

Trust Vote : Kumaraswamy asks Yeddyurappa why he is in such a hurry

ಆದರೆ, ನೇರವಾಗಿ ವಿಶ್ವಾಸ ಮತಗಣನೆ ಹಾಕಲು ಸಿಎಂ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿ, ತಮ್ಮ ಭಾಷಣದಲ್ಲಿ. ಬಿಜೆಪಿಯವರು ರಾಜ್ಯದ ಜನರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದಾರೆ. ನಿಮ್ಮ (ಸ್ಪೀಕರ್) ಕರ್ತವ್ಯದ ಬಗ್ಗೆಯೂ ಪ್ರಶ್ನೆಗಳನ್ನು ಮೂಡಿಸಿದ್ದಾರೆ. ಹಾಗಾಗಿ ನಾವು ಚರ್ಚೆ ಇಲ್ಲದೆ ಮತಯಾಚನೆಗೆ ಹೋಗುವಂತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಇದರ ಜೊತೆಗೆ ಯಡಿಯೂರಪ್ಪ ಅವರಿಗೆ ಯಾಕೆ ಅಷ್ಟು ಆತುರ, ವಿಶ್ವಾಸಮತದ ಬಗ್ಗೆ ಚರ್ಚೆಯಾಗುವುದು ಬೇಡವೇ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು. ಮೈತ್ರಿ ಸರ್ಕಾರವನ್ನು ಕೆಲವು ಶಾಸಕರು ತೊರೆದಿದ್ದರಿಂದ ನಾನು ವಿಶ್ವಾಸಮತಯಾಚನೆಗೆ ಮುಂದಾಗಿದ್ದೇನೆ, ಮೈತ್ರಿ ಸರ್ಕಾರವನ್ನು ನಡೆಸಲು ಸಾಧ್ಯವೇ ಇಲ್ಲವೇ ಎಂಬುದರ ಬಗ್ಗೆ ವಿಶ್ವಾಸಮತ ಯಾಚನೆ ಅಗತ್ಯವಿಲ್ಲ. ಬಿಜೆಪಿ ಮಾಡಿರುವ ಗೊಂದಲದಿಂದಾಗಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಸ್ಪೀಕರ್ ಸ್ಥಾನದ ಮೇಲೂ ಅನುಮಾನದಿಂದ ನೋಡುವ ಸ್ಥಿತಿ ಎದುರಾಗಿದೆ. ಇದಕ್ಕೆಲ್ಲ ಸ್ಪಷ್ಟನೆ ನೀಡಲು ನಾನು ವಿಶ್ವಾಸಮತಯಾಚಿಸುತ್ತಿದ್ದೇನೆ ಎಂದಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆ? ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆ?

15 ಮಂದಿ ರೆಬೆಲ್ ಶಾಸಕರು, 2 ಕಾಂಗ್ರೆಸ್ ಶಾಸಕರು ಹಾಗೂ 1 ಬಿಎಸ್ ಪಿ ಶಾಸಕರು ಸದ್ಯ ಸದನದಲ್ಲಿ ಹಾಜರಿಲ್ಲ. ಸದನಕ್ಕೆ ಹಾಜರಾಗುವ ಎಲ್ಲಾ ಶಾಸಕರ ತಲೆಗಳನ್ನು ಎಣಿಕೆ ಮಾಡಿ, ಹಾಜರಾತಿ ಸಂಖ್ಯೆ ಘೋಷಿಸಲಾಗುತ್ತದೆ. ನಂತರ ವಿಶ್ವಾಸಮತ ಯಾಚನೆ ಸಂಖ್ಯಾಬಲ ಲೆಕ್ಕಾಚಾರ

ಜುಲೈ 15ರಂದು ವಿಧಾನಸಭೆ ಬಲಾಬಲ ಜುಲೈ 15ರಂದು ವಿಧಾನಸಭೆ ಬಲಾಬಲ(16 ಶಾಸಕರ ರಾಜೀನಾಮೆ ಅಂಗೀಕಾರವಾದರೆ) ಒಟ್ಟು ಸದಸ್ಯ ಬಲ : 208 ಕಾಂಗ್ರೆಸ್ + ಜೆಡಿಎಸ್ : 101 ಮ್ಯಾಜಿಕ್ ನಂಬರ್ : 105 ಬಿಜೆಪಿ : 105+2 (ಪಕ್ಷೇತರ)=107 ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ 16 ಮಂದಿ ಶಾಸಕರು ರಾಜೀನಾಮೆ ನೀಡಿದ್ದು, ಎಲ್ಲರ ರಾಜೀನಾಮೆ ಅಂಗೀಕಾರವಾದರೆ, ವಿಧಾನಸಭೆಯಲ್ಲಿ 224 ಸದಸ್ಯರ ಸಂಖ್ಯಾಬಲ 209ಕ್ಕೆ ಕುಸಿಯಲಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್- ಜೆಡಿಎಸ್ಸಿಗೆ ಕನಿಷ್ಠ 101 ಶಾಸಕರ ಬೆಂಬಲ ಬೇಕಾಗುತ್ತದೆ. ಇನ್ನೊಂದೆಡೆ, 105 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಇಬ್ಬರು ಪಕ್ಷೇತರ ಶಾಸಕರ ಬೆಂಬಲ ಸಿಗುವ ಸಾಧ್ಯತೆಯಿದೆ. ವಿಶ್ವಾಸ ಮತಯಾಚನೆಯಲ್ಲಿ ಸರ್ಕಾರದ ವಿರುದ್ಧ ಮತಗಳು ಅಧಿಕವಾಗಿ ಬೀಳುವ ನಿರೀಕ್ಷೆಯನ್ನು ಕೇಸರಿ ಪಡೆ ಹೊಂದಿದೆ.

English summary
Kumaraswamy asks Yeddyurappa why he is in such a hurry to get on with the trust vote. While pressing for a discussion, he says that many MLAs had said that they are happy with him. Some may have lost respect, but I still have some shame and self-respect he says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X