ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದನದಲ್ಲಿ ರೇಣುಕಾಚಾರ್ಯ ಮಹಾತ್ಮೆ ಬಿಚ್ಚಿಟ್ಟ ಸಿಎಂ ಕುಮಾರಸ್ವಾಮಿ

|
Google Oneindia Kannada News

Recommended Video

Karnataka Crisis :ಶಾಸಕ ರೇಣುಕಾಚಾರ್ಯ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?

ಬೆಂಗಳೂರು, ಜುಲೈ 19: "ಮೈತ್ರಿ ಸರ್ಕಾರ ನನ್ನ ನಾಯಕತ್ವದಲ್ಲಿ ಇರುತ್ತದೋ, ಹೋಗುತ್ತದೋ, ಅದು ಮುಖ್ಯ ಅಲ್ಲ. ಬೇರೆ ಇನ್ಯಾರೋ, ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಮುಖ್ಯವಲ್ಲ. ಆದರೆ ಪ್ರಜಾಪ್ರಭುತ್ವವನ್ನೇ ಅಣಕಿಸುವಂತಹ ಬೆಳವಣಿಗೆಗಳು ನಡೆಯುತ್ತಿವೆ" ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ರಾಜಕೀಯ ಬೆಳವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ವಿಶ್ವಾಸಮತ LIVE: ಸಂಜೆ 6 ಗಂಟೆ ಒಳಗೆ ವಿಶ್ವಾಸಮತ ಸಾಬೀತು ಮಾಡಲು ರಾಜ್ಯಪಾಲರ ಸೂಚನೆವಿಶ್ವಾಸಮತ LIVE: ಸಂಜೆ 6 ಗಂಟೆ ಒಳಗೆ ವಿಶ್ವಾಸಮತ ಸಾಬೀತು ಮಾಡಲು ರಾಜ್ಯಪಾಲರ ಸೂಚನೆ

"ಚರ್ಚೆ ಮಾಡುವುದೇ ಬೇಡ ವಿಶ್ವಾಸಮತಕ್ಕೆ ಹಾಕಿಬಿಡಿ ಎಂದು ಮಾಧುಸ್ವಾಮಿ ಅವರು ಹೇಳುತ್ತಿದ್ದಾರೆ, ನಾನು ನಾಲ್ಕೈದು ತಿಂಗಳಿಂದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ನನ್ನ ಭಾವನೆಗಳನ್ನು ಜನರೊಂದಿಗೆ ಹಂಚಿಕೊಳ್ಳಲು ಇರುವುದು ಈ ವೇದಿಕೆ ಮಾತ್ರ. ಇಲ್ಲಿ ಮಾತನಾಡಲು ಸಮಯ ಕಡಿವಾಣ ಹಾಕುವುದು ಬೇಡ" ಎಂದು ಸಭಾಧ್ಯಕ್ಷರಿಗೆ ಕುಮಾರಸ್ವಾಮಿ ಮನವಿ ಮಾಡಿದರು.

ವಿಶ್ವಾಸಮತ ಯಾಚನೆಗೆ ಸಿಎಂಗೆ ಹೊಸ ಡೆಡ್‌ಲೈನ್ ನೀಡಿದ ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ ಸಿಎಂಗೆ ಹೊಸ ಡೆಡ್‌ಲೈನ್ ನೀಡಿದ ರಾಜ್ಯಪಾಲರು

ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಸರ್ಕಾರ ಮಾಡಿದ್ದ ಕಾಲದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಬಗ್ಗೆ ಸದನದಲ್ಲಿ ವಿವರಿಸಿದ ಕುಮಾರಸ್ವಾಮಿ ಅವರು, "2009ರಲ್ಲಿ ಯಡಿಯೂರಪ್ಪ ಅವರ ವಿರುದ್ಧ ಅವರದೇ ಸರ್ಕಾರದ ಸಚಿವರು ಮತ್ತು ಶಾಸಕರು ಬಂಡಾಯವೆದ್ದಾಗ ಯಾವ ಪರಿಸ್ಥಿತಿ ಇತ್ತು. ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಇಂದು ನಾಯಕತ್ವ ವಹಿಸಿದ್ದಾರೆ" ಎಂದರು.

Trust Vote: HD Kumaraswamy Takes on MP Renukacharya

"ರೇಣುಕಾಚಾರ್ಯ ಅವರು ಅಂದು ಯಡಿಯೂರಪ್ಪ ಅವರ ವಿರುದ್ಧ ಏನೇನು ಮಾತನಾಡಿದ್ದಾರೆ ಹೇಳಬೇಕಾ? ಆದರೆ, ಇಂದು ಯಡಿಯೂರಪ್ಪ ಅವರ ಶಾಸಕರ ಕಾವಲು ಕಾಯಲು ವಿಧಾನಸೌಧದ ಬಾಗಿಲ ಬಳಿಯೇ ಕೂತಿದ್ದಾರೆ" ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದರು.

Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

ರೇಣುಕಾಚಾರ್ಯ ಬಗ್ಗೆ ಮೂರು ಬಾರಿ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ:

"ಎಂಪಿ ರೇಣುಕಾಚಾರ್ಯ ಅವರು ಸಚಿವರಾಗಲು ನನ್ನ ಬಳಕೆ ಮಾಡಿಕೊಂಡಿದ್ದರು, ಅಂದು ನನ್ನನ್ನು ದುರುಪಯೋಗ ಮಾಡಿಕೊಂಡ್ರು, ಅವರಿಗೆ ಸ್ಪಂದಿಸಿದ್ದು ನನ್ನ ದೌರ್ಬಲ್ಯ, ನಂತರ
ಕುಮಾರಸ್ವಾಮಿ ಹುಚ್ಚಾಸ್ತ್ರತ್ರೆ ಸೇರಿದ್ರು ಅಂತಾ ಹೇಳಿದ್ರು, ಆದರೆ ಹುಚ್ಚಾಸ್ಪತ್ರೆಗೆ ಸೇರುವ ಸ್ಥಿತಿ ನನಗೆ ಬರಲ್ಲ" ಎಂದು ಕುಟುಕಿದರು.

ವಾಜಪೇಯಿ 10 ದಿನಗಳ ವಿಶ್ವಾಸ ಮತ: ಸಿಎಂ ಹೇಳಿದ್ದೇನು, ನಿಜಕ್ಕೂ ನಡೆದಿದ್ದೇನು? ವಾಜಪೇಯಿ 10 ದಿನಗಳ ವಿಶ್ವಾಸ ಮತ: ಸಿಎಂ ಹೇಳಿದ್ದೇನು, ನಿಜಕ್ಕೂ ನಡೆದಿದ್ದೇನು?

"ರೇಣುಕಾಚಾರ್ಯ ಅವರು ಮಂತ್ರಿ ಆಗಲು ನನ್ನನ್ನು ಹೇಗೆ ಬಳಸಿಕೊಂಡರು, ಬಾಲಚಂದ್ರ ಜಾರಕಿಹೊಳಿ ಹೇಗೆ ಬಳಸಿಕೊಂಡರು" ಎಂಬುದು ನಾನು ಹೇಳುವುದಿಲ್ಲ ಎಂದರು.

ರೇಣುಕಾಚಾರ್ಯ ಅವರ ಬಗ್ಗೆ ಹಳೆಯ ದಿನಪತ್ರಿಕೆಯ ಪ್ರತಿಯಲ್ಲಿನ ಸುದ್ದಿಯನ್ನು ಓದಿದ ಕುಮಾರಸ್ವಾಮಿ, "ರೇಣುಕಾಚಾರ್ಯ 20 ಶಾಸಕರನ್ನು ಕರೆದುಕೊಂಡು ರೆಸಾರ್ಟ್‌ಗೆ ಹೋಗಿ ಅವರಿಂದಲೇ ಗುದ್ದಿಸಿಕೊಂಡು ವಾಪಸ್ ಬಂದಿದ್ದಾರೆ' ಎಂದು ಹೇಳಿದರು.

ಬ್ರದರ್ ಕುಮಾರಸ್ವಾಮಿ ಬೈಬಲ್‌ನ 'Judgement Day' ನೆನಪಿಸಿಕೊಂಡಿದ್ದೇಕೆ? ಬ್ರದರ್ ಕುಮಾರಸ್ವಾಮಿ ಬೈಬಲ್‌ನ 'Judgement Day' ನೆನಪಿಸಿಕೊಂಡಿದ್ದೇಕೆ?

"ಹಣ ಕೊಟ್ಟು ಶಾಸಕರನ್ನು, ಅಧಿಕಾರವನ್ನು ಕೊಂಡುಕೊಂಡಿದ್ದೀರಿ ಆದರೆ ಜನರನ್ನು ಹೇಗೆ ಕೊಂಡುಕೊಳ್ಳುತ್ತೀರಿ,ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಅತೃಪ್ತ ಶಾಸಕರು ನನ್ನ ಬಳಿ ಬಂದಿದ್ದಾಗ, ಅವರಿಗೆ ಬುದ್ಧಿ ಹೇಳಿದ್ದೆನೇಯೇ ಹೊರತು ಅವರಿಗೆ ರಾಜೀನಾಮೆ ನೀಡಿ ಎಂದು ಅವರಿಗೆ ಹೇಳಿರಲಿಲ್ಲ" ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

English summary
Trust Vote: CM HD Kumaraswamy takes on Honnali MLA MP Renukacharya and teases him, shall I reveal how you become minister then, what happened on that day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X