ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಯಶ ಗಳಿಸಲು ಕೃಷ್ಣನ ತಂತ್ರ, ಯಡಿಯೂರಪ್ಪರ ಛಲ ಇರ್ಬೇಕು": ಡಿಕೆಶಿ

|
Google Oneindia Kannada News

Recommended Video

ಯಶ ಗಳಿಸಲು ಕೃಷ್ಣನ ತಂತ್ರ, ಯಡಿಯೂರಪ್ಪರ ಛಲ ಇರ್ಬೇಕು': ಡಿಕೆಶಿ | D K Shivakumar

ಬೆಂಗಳೂರು, ಜುಲೈ 23: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ವಿಶ್ವಾಸಮತ ನಿಲುವಳಿ ಬಗ್ಗೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಸುದೀರ್ಘ ಭಾಷಣ ಮಾಡಿದರು. ಸಿದ್ದಾಂತ ರಾಜಕಾರಣ ಸತ್ತಿರುವ ಬಗ್ಗೆ ಮಾತನಾಡಿ, ಪಕ್ಷಾಂತರ ಪಿಡುಗು ಅಳಿಯಬೇಕು ಎಂದರು. ಮಾತಿನ ನಡುವೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಟೀಕಿಸಿ, ಸವಾಲು ಹಾಕಿದರು.

"ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ": ಕಗ್ಗ ಹೇಳಿದ ಡಿಕೆಶಿ

ಯಡಿಯೂರಪ್ಪನವರು ಲೋಕಸಭೆ ಉಪ ಚುನಾವಣೆ ವೇಳೆ ಹೇಳಿದ ಮಾತು, "ಕಾರಣವಿಲ್ಲದ ಉಪ ಚುನಾವಣೆಗೆ ಕಾರಣವಾಗುವವರು 10 ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸದಂತೆ ಕಾನೂನು, ಸಂವಿಧಾನದಲ್ಲಿ ತಿದ್ದುಪಡಿ ಮಾಡುವುದು ಅನಿವಾರ್ಯ" ಎಂದು ಸವಾಲು ಹಾಕಿದರು.

ಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ ಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ

ಇದಾದ ಬಳಿಕ ಅತೃಪ್ತ ಶಾಸಕರನ್ನು ವಿಮಾನ ಕರೆದುಕೊಂಡು ಹೋಗಿ ಹೋಟೆಲ್ ನಲ್ಲಿ ಕೂಡಿ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಆದರೆ, ಅತೃಪ್ತರೋ, ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಅವರ ಉಪಸ್ಥಿತಿ ಇರಬೇಕು. ಈ ಒಂದು ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ. ಅವರಿಗೆ ಒಂದು ಮಾತು ಹೇಳಲು ಇಷ್ಟಪಡುತ್ತೇನೆ ಎಂದು ಮಹಾಭಾರತದ ಪಾತ್ರಗಳನ್ನು ಹೆಣೆದು ಯಶಸ್ಸಿನ ಬಗ್ಗೆ ವ್ಯಾಖ್ಯಾನ ನೀಡಿದರು.

Trust Vote : DK Shivakumar quotes Mahahbaratha characters to tease BS Yeddyurappa

"ಯಶಸ್ಸು ಗಳಿಸಲು ಧರ್ಮರಾಯನ ತತ್ತ್ವ ಇರಬೇಕು. ದಾನಶೂರ ಕರ್ಣನ ದಾನತ್ವ, ಅರ್ಜುನನ ಗುರಿ, ಭೀಮನ ಬಲ, ವಿಧುರನ ನೀತಿ ಹಾಗೂ ಕೃಷ್ಣನ ತಂತ್ರ ಇರಬೇಕು. ಅದರ ಜತೆಗೆ ಯಡಿಯೂರಪ್ಪ ಅವರ ಛಲ ಇರಬೇಕು" ಎಂದು ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ ಎಂದು ಪುನರುಚ್ಚರಿಸಿದರು. ಆರೇಳು ಬಾರಿ ಪ್ರಯತ್ನ ಮಾಡಿ, ಕೊನೆಗೂ ನಮ್ಮ 15 ಶಾಸಕರನ್ನು ತಮ್ಮ ಬಲೆಗೆ ಹಾಕಿಕೊಂಡಿದ್ದಾರೆ. ಮಂತ್ರಿಯಾಗುವ ಆಸೆ ಹೊಂದಿದ್ದಾರೆ ಎಂದರು.

English summary
Trust Vote : Power Minister DK Shivakumar quotes Mahahbaratha characters to tease former CM BS Yeddyurappa and his aspiration to become CM again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X