ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಟ್ರಂಪ್ ಭಾರತ ಭೇಟಿಗೆ ಪ್ರಧಾನಿ ಮೋದಿ ವೈಯಕ್ತಿಕ ಸ್ನೇಹ ಕಾರಣ'

|
Google Oneindia Kannada News

ಬೆಂಗಳೂರು, ಫೆ. 24: ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಸ್ನೇಹದ ಕಾರಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ ಎಂದು ಹೇಳಿಕೆ ಕೊಡುವ ಮೂಲಕ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಟ್ರಂಪ್ ಭಾರತ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ ಸೇರಿದಂತೆ ಹಲವರು ಭಾರತಕ್ಕೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಭೇಟಿಯನ್ನು ವಿರೋಧಿಸಿದ್ದಾರೆ. ಈ ಮಧ್ಯೆ ಜಗದೀಶ್ ಶೆಟ್ಟರ್ ಅವರು ಪ್ರಧಾನಿ ಜೊತೆಗಿನ ವೈಯಕ್ತಿಕ ಸ್ನೇಹದಿಂದಾಗಿಯೇ ಟ್ರಂಪ್ ಭಾರತಕ್ಕೆ ಬಂದಿದ್ದಾರೆಂದು ಶೆಟ್ಟರ್ ಹೇಳಿಕೆ ಕೊಟ್ಟಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಭೇಟಿ ಕೇವಲ ವ್ಯವಹಾರಿಕ ಭೇಟಿ ಯಾಗಿದ್ದಿದ್ದರೆ ಹಿಂದಿನ ಅಮೇರಿಕಾ ಅಧ್ಯಕ್ಷರುಗಳು ಮಾಡಿದಂತೆ ದೆಹಲಿಗೆ ಬಂದು ಒಪ್ಪಂದಕ್ಕೆ ಸಹಿ ಮಾಡಿ ವಾಪಸ್ ಹೋಗುತ್ತಿದ್ದರು‌. ಈಗ ಟ್ರಂಪ್ ಅವರ ಭೇಟಿಯಿಂದ ಅಮೇರಿಕಾ ಮತ್ತು ಭಾರತದ ಬಾಂಧವ್ಯ ವೃದ್ದಿಗೆ ಸಹಕಾರಿಯಾಗುತ್ತದೆ ಎಂದು ಶೆಟ್ಟರ್ ಹೇಳಿದ್ದಾರೆ.

Donald Trump India Visit Live: ಪತ್ನಿಯೊಂದಿಗೆ ತಾಜ್‌ಮಹಲ್‌ನಲ್ಲಿ ಟ್ರಂಪ್ ವಿಹಾರDonald Trump India Visit Live: ಪತ್ನಿಯೊಂದಿಗೆ ತಾಜ್‌ಮಹಲ್‌ನಲ್ಲಿ ಟ್ರಂಪ್ ವಿಹಾರ

ಪ್ರಧಾನಿ ಟೀಕಿಸುವುದನ್ನು ಬಿಟ್ಟರೆ ಕಾಂಗ್ರೆಸ್ಸಿಗರಿಗೆ ಬೇರೆ ಕೆಲಸವಿಲ್ಲ

ಪ್ರಧಾನಿ ಟೀಕಿಸುವುದನ್ನು ಬಿಟ್ಟರೆ ಕಾಂಗ್ರೆಸ್ಸಿಗರಿಗೆ ಬೇರೆ ಕೆಲಸವಿಲ್ಲ

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯನ್ನು ಟೀಕಿಸಿರುವ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಶೆಟ್ಟರ್ ಅಸಮಾಧಾನ ವ್ಯಕ್ತಪೊಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರಿಂದ ಇಂತಹಾ ಕೀಳು ಮಟ್ಟದ ಟೀಕೆ ನಿರೀಕ್ಷಿಸಿರಲಿಲ್ಲ‌. ಈಗ ಕಾಂಗ್ರೆಸ್ಸಿಗರಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದು ಬಿಟ್ಟು ಬೇರೆ ಕೆಲಸವೇ ಇಲ್ಲ ಎಂದಿದ್ದಾರೆ. ಅಮರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯನ್ನು ವೈಯಕ್ತಿಕ ಎನ್ನುವುದಾದರೆ ಮೋದಿ ತಮ್ಮ ವೈಯಕ್ತಿಕ ಕಾರ್ಯಕ್ರಮಗಳಿಗೆ ಟ್ರಂಟ್ ಅವರನ್ನು ಕರೆದುಕೊಂಡು ಬರಬೇಕಿತ್ತು ಎಂದು ಖರ್ಗೆ ಟೀಕಿಸಿದ್ದರು.

ಕಾಂಗ್ರೆಸ್ ಕುಮ್ಮಕ್ಕಿನಿಂದ ಹುಬ್ಬಳ್ಳಿಯಲ್ಲಿ ಪಾಕ್ ಪರ ಬರಹ

ಕಾಂಗ್ರೆಸ್ ಕುಮ್ಮಕ್ಕಿನಿಂದ ಹುಬ್ಬಳ್ಳಿಯಲ್ಲಿ ಪಾಕ್ ಪರ ಬರಹ

ಹುಬ್ಬಳ್ಳಿಯ ಶಾಲೆಯೊಂದರ ಗೋಡೆಯ ಮೇಲೆ ಪಾಕ್ ಪರ ಬರಹ ಕಂಡು ಬಂದಿರುವುದಕ್ಕೂ ಕಾಂಗ್ರೆಸ್ಸಿಗರ ಕುಮ್ಮಕ್ಕೇ ಕಾರಣ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಒಂದು ವರ್ಗವನ್ನು ಓಲೈಸಲು, ಓಟ್ ಬ್ಯಾಂಕ್ ರಾಜಕಾರಣ ಮಾಡಲು ಕಾಂಗ್ರೆಸ್ ಪ್ರಮುಖರು ಸಿಎಎ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ‌. ಅದರ ಪರಿಣಾವಾಗಿಯೇ ಪಾಕ್ ಪರ ಹೇಳಿಕೆ ಬರಹಗಳು ಬರುವಂತಾಗಿದೆ. ಹುಬ್ಬಳ್ಳಿಯ ಶಾಲೆಯೊಂದರ ಗೋಡೆಯ ಮೇಲೆ ಪಾಕ್ ಪರ ಬರಹವೂ ಹೀಗೆ ಬರೆಯಲಾಗಿದೆ ಎಂದಿದ್ದಾರೆ.

ಟ್ರಂಪ್ ಉಳಿದುಕೊಳ್ಳಲಿರುವ ಹೋಟೆಲ್‌ನ ಒಂದು ದಿನದ ವೆಚ್ಚವೆಷ್ಟು?ಟ್ರಂಪ್ ಉಳಿದುಕೊಳ್ಳಲಿರುವ ಹೋಟೆಲ್‌ನ ಒಂದು ದಿನದ ವೆಚ್ಚವೆಷ್ಟು?

ಮಹಾದಾಯಿ ಅನುಷ್ಠಾನ ಕುರಿತು ಕೇಂದ್ರಕ್ಕೆ ನಿಯೋಗ

ಮಹಾದಾಯಿ ಅನುಷ್ಠಾನ ಕುರಿತು ಕೇಂದ್ರಕ್ಕೆ ನಿಯೋಗ

ಮಹಾದಾಯಿ ಯೋಜನೆ ಗೆಜೆಟ್ ನೊಟೀಫಿಕೇಶನ್ ಹೊರಡಿಸಲು ಸುಪ್ರಿಂಕೋರ್ಟ್ ಆದೇಶ ಕೊಟ್ಟಾಗಿದೆ. ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಒಂದು ವಾರ ಅಥವಾ ಆರು ತಿಂಗಳು ಸಮಯಾವಕಾಶ ಬೇಕು ಅಂತೇನು ಇಲ್ಲ. ಆದಷ್ಟು ಶೀಘ್ರದಲ್ಲೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತೇವೆ. ಅದಕ್ಕಾಗಿ ಕೇಂದ್ರದ ಬಳಿ ನಿಯೋಗದಲ್ಲಿ ತೆರಳಲು ಉದ್ದೇಶಿಸಿದ್ದೇವೆ ಎಂದು ಶೆಟ್ಟರ್ ಹೇಳಿದ್ದಾರೆ.

ಟ್ರಂಪ್ ಭಾರತಕ್ಕೆ ಬಂದಿರೋದು ವಿಶೇಷ ಲಾಭವೆನಿಲ್ಲ

ಟ್ರಂಪ್ ಭಾರತಕ್ಕೆ ಬಂದಿರೋದು ವಿಶೇಷ ಲಾಭವೆನಿಲ್ಲ

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿರೋದು ವಿಶೇಷ ಲಾಭವೆನಿಲ್ಲ ಎಂದು ಕಲಬುರಗಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದರು. ಪ್ರಧಾನಿ ಆದವರಿಗೆ ವೈಯಕ್ತಿಕ ಸ್ನೇಹಿತರು ಇರುವುದಿಲ್ಲ. ವೈಯಕ್ತಿವ ಜೀವನದಲ್ಲಿ ಸ್ನೇಹಿತರು ಇರುತ್ತಾರೆ. ಟ್ರಂಪ್ ತಮ್ಮ ಮಿತ್ರ ಅಂತಾ ಅಂತಾ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡೊದು ಎಷ್ಟರ ಮಟ್ಟಿಗೆ ಸರಿ? ಮುರುಕಲು ಸ್ಲಂ ಮನೆಗಳು ಕಾಣಬಾರದೆಂದು ಅಡ್ಡಗೋಡೆ ಕಟ್ಟಿಸಿದ್ದಾರೆ. ಗೋಡೆ ಕಟ್ಟೊದ್ರಿಂದ ಬಡತನ ಮುಚ್ಚಿಹಾಕಲು ಸಾಧ್ಯವಿಲ್ಲ, ಗೋಡೆ ನೋಡಿದರೆ ಗೋತ್ತಾಗುತ್ತದೆ ಜನರ ಸ್ಥಿತಿಗತಿ ಹೇಗಿದೆ ಎಂಬುದು. ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಒಬಾಮ ಬಂದಾಗ ಇಷ್ಟೊಂದು ಹಣ ಖರ್ಚಾಗಿದ್ದಿಲ್ಲ, ಇದಕ್ಕೆ ಪ್ರಧಾನಿಯೇ ಉತ್ತರ ನೀಡಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನಿಸಿದ್ದರು.

English summary
US President Donald Trump visits India because of his personal friendship with Prime Minister Narendra Modi says Karnataka Former CM Jagadish Shettar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X