ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಧಾರಿಸದ ಡಿಕೆಶಿ ಆರೋಗ್ಯ; ಮುಂದುವರೆದ ಚಿಕಿತ್ಸೆ

|
Google Oneindia Kannada News

Recommended Video

DK Shivakumar : ಸುಧಾರಿಸದ ಡಿಕೆಶಿ ಆರೋಗ್ಯ | Oneindia Kannada

ಬೆಂಗಳೂರು, ಸೆಪ್ಟೆಂಬರ್ 16 : ಇಡಿ ವಶದಲ್ಲಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಆರೋಗ್ಯ ಸುಧಾರಿಸಿಲ್ಲ. ಎರಡು ದಿನದಿಂದ ಅವರು ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಮುಂದುವರೆದಿದೆ.

ಡಿ. ಕೆ. ಶಿವಕುಮಾರ್‌ರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಶನಿವಾರ ಸಂಜೆ ಇಡಿ ಅಧಿಕಾರಿಗಳು ದಾಖಲು ಮಾಡಿದ್ದಾರೆ. ಜ್ವರ, ಅಧಿಕ ರಕ್ತದೊತ್ತಡದಿಂದ ಅವರು ಬಳಲುತ್ತಿದ್ದಾರೆ. ಶುಗರ್ ಸಹ ನಿಯಂತ್ರಣಕ್ಕೆ ಬಂದಿಲ್ಲ.

ಡಿಕೆ ಶಿವಕುಮಾರ್ ಬೆಂಬಲಿಗರಿಗೆ ಡಿ.ಕೆ.ಸುರೇಶ್ ಪತ್ರಡಿಕೆ ಶಿವಕುಮಾರ್ ಬೆಂಬಲಿಗರಿಗೆ ಡಿ.ಕೆ.ಸುರೇಶ್ ಪತ್ರ

ಭಾನುವಾರ ಇಸಿಜಿ ಮಾಡಿದ ಬಳಿಕ ವೈದ್ಯರು ಸಾಮಾನ್ಯ ವಾರ್ಡ್‌ನಿಂದ ಹೃದ್ರೋಗ ನಿಗಾ ಘಟಕಕ್ಕೆ ಡಿ. ಕೆ. ಶಿವಕುಮಾರ್‌ರನ್ನು ಸ್ಥಳಾಂತರ ಮಾಡಿದ್ದಾರೆ. ಚಿಕಿತ್ಸೆ ಮುಂದುವರೆದಿದ್ದು, ವೈದ್ಯರ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಡಿಕೆಶಿಗೆ ಜ್ವರ, ಅಧಿಕ ರಕ್ತದೊತ್ತಡ; ಆಸ್ಪತ್ರೆಗೆ ದಾಖಲುಡಿಕೆಶಿಗೆ ಜ್ವರ, ಅಧಿಕ ರಕ್ತದೊತ್ತಡ; ಆಸ್ಪತ್ರೆಗೆ ದಾಖಲು

ಅನಾರೋಗ್ಯದ ಹಿನ್ನಲೆಯಲ್ಲಿ ಭಾನುವಾರ ಡಿ. ಕೆ. ಶಿವಕುಮಾರ್ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇಂದು ಆರೋಗ್ಯ ಸುಧಾರಿಸಿದರೆ ಮಧ್ಯಾಹ್ನದ ನಂತರ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಮಂಗಳವಾರ ಅವರ ಇಡಿ ಕಸ್ಟಡಿ ಅಂತ್ಯಗೊಳ್ಳಲಿದೆ.

ಡಿಕೆಶಿ ಸುಪರ್ಧಿಯಲ್ಲಿ 317 ಬ್ಯಾಂಕ್ ಖಾತೆ: ಇಡಿ ತನಿಖೆಡಿಕೆಶಿ ಸುಪರ್ಧಿಯಲ್ಲಿ 317 ಬ್ಯಾಂಕ್ ಖಾತೆ: ಇಡಿ ತನಿಖೆ

ಆರೋಗ್ಯದ ಮೇಲೆ ನಿಗಾ

ಆರೋಗ್ಯದ ಮೇಲೆ ನಿಗಾ

ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಡಿ. ಕೆ. ಶಿವಕುಮಾರ್‌ರನ್ನು ಶನಿವಾರ ಸಂಜೆ ದಾಖಲು ಮಾಡಲಾಗಿದೆ. ಡಿ. ಕೆ. ಶಿವಕುಮಾರ್ ಪರ ವೈದ್ಯ ಡಾ. ರಂಗನಾಥ್ ಅವರ ಜೊತೆಗಿದ್ದಾರೆ. ಜ್ವರ, ಅಧಿಕ ರಕ್ತದೊತ್ತಡದಿಂದ ಡಿ. ಕೆ. ಶಿವಕುಮಾರ್ ಬಳಲುತ್ತಿದ್ದು, ಶುಗರ್ ಸಹ ನಿಯಂತ್ರಣಕ್ಕೆ ಬಂದಿಲ್ಲ.

ಜಾಮೀನು ಅರ್ಜಿಗೆ ಆಕ್ಷೇಪಣೆ

ಜಾಮೀನು ಅರ್ಜಿಗೆ ಆಕ್ಷೇಪಣೆ

ಇಡಿ ವಿಶೇಷ ನ್ಯಾಯಾಲಯದಲ್ಲಿ ಡಿ. ಕೆ. ಶಿವಕುಮಾರ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಂದು ಇಡಿ ಜಾಮೀನು ಅರ್ಜಿಗೆ ಆಕ್ಷೇಪಣೆಯನ್ನು ಸಲ್ಲಿಸಲಿದೆ. ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ.

ಇಂದು ಮಧ್ಯಾಹ್ನ ವಿಚಾರಣೆ

ಇಂದು ಮಧ್ಯಾಹ್ನ ವಿಚಾರಣೆ

ಶನಿವಾರ ಸಂಜೆ ಇಡಿ ಡಿ. ಕೆ. ಶಿವಕುಮಾರ್‌ರನ್ನು ಆಸ್ಪತ್ರೆಗೆ ದಾಖಲು ಮಾಡಿತ್ತು. ಭಾನುವಾರ ಅವರ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಆರೋಗ್ಯ ಸುಧಾರಣೆ ಆದಲ್ಲಿ ಸೋಮವಾರ ಮಧ್ಯಾಹ್ನ ಇಡಿ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತದೆ.

ಇಡಿ ಕಸ್ಟಡಿ ಅಂತ್ಯ

ಇಡಿ ಕಸ್ಟಡಿ ಅಂತ್ಯ

ಶುಕ್ರವಾರ ಇಡಿ ವಿಶೇಷ ನ್ಯಾಯಾಲಯ ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಅವಧಿಯನ್ನು 4 ದಿನಗಳ ಕಾಲ ವಿಸ್ತರಣೆ ಮಾಡಿ ಆದೇಶ ಹೊರಡಿಸಿತ್ತು. ಸೆ. 17ರ ಮಂಗಳವಾರ ಕಸ್ಟಡಿ ಅಂತ್ಯಗೊಳ್ಳಲಿದ್ದು, ಪುನಃ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.

English summary
Karnataka former minister D.K.Shivakumar in Enforcement Directorate custody in connection with a money laundering case. He is suffering from fever and high BP and admitted to Dr. Ram Manohar Lohia hospital from past two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X