ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋದಲ್ಲಿ ಓಡಾಡಿದರೆ ಸೋಂಕು ತಗುಲಬಹುದು: ಡಿಸಿ ದಯಾನಂದ್

By Nayana
|
Google Oneindia Kannada News

ಬೆಂಗಳೂರು, ಮೇ 24: ಮೆಟ್ರೋ ಸೇರಿದಂತೆ ಸಮೂಹ ಸಾರಿಗೆಯಲ್ಲಿ ನಿಪಾಹ್ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್ ಹೇಳಿದ್ದಾರೆ.

ಕೇರಳದಲಲ್ಇ ನಿಪಾಹ್ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದಯಾನಂದ್‌ ಅವರು ಗುರುವಾರ ತುರ್ತು ಪತ್ರಿಕಾಗೋಷ್ಠಿಕರೆದು ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು.ಕೇರಳಕ್ಕೆ ಪ್ರತಿ ನಿತ್ಯ 183 ಸುತ್ತು ಒಟ್ಟು 60 ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ಆಭಾಗದಲ್ಲಿ ಸಂಚರಿಸುವ ಬಸ್‌ಗಳ ಸಿಬ್ಬಂದಿಗಳಿಗೆ ಹುಷಾರಿಲ್ಲದೆ ರಜೆ ಹಾಕಿದರೆ ನಮ್ಮ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದ್ದಾರೆ.

Traveling in metro trains is not safe: DC warns

ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?

ಎಚ್‌ಒನ್‌ಎನ್‌ಒನ್‌ ಕೂಡ ಮೆಟ್ರೋದಿಂದಲೇ ಹರಡಿತ್ತು. ಹೀಗಾಗಿ ಮೆಟ್ರೋದಲ್ಲಿ ರೋಗಗಳು ತ್ವರಿತವಾಗಿ ಹರಡುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಯಾವುದೇ ರೀತಿಯ ನಿಪಾಹ್ ಲಕ್ಷಣ ಕಂಡುಬಂದಲ್ಲಿ 080-25266143ಗೆ ಕರೆ ಮಾಡುವಂತೆ ತಿಳಿಸಿದ್ದಾರೆ. ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಮೆಡಿಕಲ್ ಇನ್ಸ್‌ಸ್ಟಿಟ್ಯೂಟ್‌, ಪೊಲೀಸ್‌ ಇಲಾಖೆ, ಪಶುಸಂಗೋಪನೆ, ಕೆಎಸ್‌ಆರ್‌ಟಿಸಿ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಕೇರಳದಲ್ಲಿ ಈಗಾಗಲೇ ನಿಪಾಹ್ ವೈರಸ್ ಹನ್ನೊಂದು ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ.

English summary
Bengaluru urban district deputy commissioner Dayanand has made a statement in press conference that traveling in Bengaluru metro is not safe because H1N1 was circulated in metro only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X