ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಯಡಿಯೂರಪ್ಪ ಮತ್ತು ಡಿಸಿಎಂ ಸವದಿ ಜೊತೆ ಬೆನ್ನಿಗೆ ಬೆನ್ನಾಗಿ ನಿಂತ ನಾಲ್ವರು ಸಚಿವರು

|
Google Oneindia Kannada News

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಹಲವು ಹಗ್ಗಜಗ್ಗಾಟದ ನಂತರ, ಅಂತೂ ನಾಲ್ಕು ದಿನಗಳ ತರುವಾಯ ಅಂತ್ಯಗೊಂಡಿದೆ. ಯಡಿಯೂರಪ್ಪ ಸರಕಾರಕ್ಕೆ ತೀವ್ರವಾಗಿ ಕಾಡಿದ ಮುಷ್ಕರದಲ್ಲಿ ಇದೊಂದಾಗಿದೆ.

ಒಂದು ಸಭೆಯಲ್ಲಿ ಮುಗಿಯಬೇಕಾಗಿದ್ದ ಈ ಮುಷ್ಕರ, ಇಡೀ ರಾಜ್ಯದ ಸಂಚಾರ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡಿದ್ದು, ಸರಕಾರ, ನೌಕರರ ಸಂಘ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರತಿಷ್ಠೆಯಿಂದಾಗಿ. ಇದರಿಂದಾಗಿ, ತೊಂದರೆ ಅನುಭವಿಸಿದ್ದು ಸಾರ್ವಜನಿಕರು.

ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಹಿಂದಿರುವ ಆ ಕಾಣದ 'ಕೈ'!ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಹಿಂದಿರುವ ಆ ಕಾಣದ 'ಕೈ'!

ಶುಕ್ರವಾರ (ಡಿ 11) ಆರಂಭವಾದ ಮುಷ್ಕರವನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ನಿರ್ಲಕ್ಷ್ಯ ಮಾಡಿದ್ದರಿಂದ, ಪ್ರತಿಭಟನೆಗೆ ಕೂತವರು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರು. ಜೊತೆಗೆ, ಸಂಘದ ಗೌರವ ಅಧ್ಯಕ್ಷರನ್ನಾಗಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ನೇಮಿಸಿದ್ದರಿಂದ, ನೌಕರರ ಪಟ್ಟು ಜೋರಾಗುತ್ತಾ ಸಾಗಿತು.

 ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ರೈತಸಂಘವೇ ತಿರುಗಿಬಿತ್ತು ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ರೈತಸಂಘವೇ ತಿರುಗಿಬಿತ್ತು

ಎರಡು ದಿನವಾದರೂ, ಮುಷ್ಕರ ಮುಂದುವರಿಯುತ್ತಿರುವುದನ್ನು ಸೀರಿಯಸ್ಸಾಗಿ ತೆಗೆದುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ, ಮೊದಲು ಗೃಹಸಚಿವ ಬಸವರಾಜ ಬೊಮ್ಮಾಯಿಯವರನ್ನು ಆಖಾಡಕ್ಕೆ ಇಳಿಯುವಂತೆ ಸೂಚಿಸಿದರು. ಇವರು ಮತ್ತು ಸವದಿ ಸರಣಿ ಸಭೆಯನ್ನು ನಡೆಸಿದರೂ ಪರಿಹಾರ ಸಿಗುತ್ತಿರಲಿಲ್ಲ.

ಮೂವರು ಸಚಿವರಿಗೆ ಯಡಿಯೂರಪ್ಪ ಸೂಚನೆ

ಮೂವರು ಸಚಿವರಿಗೆ ಯಡಿಯೂರಪ್ಪ ಸೂಚನೆ

ಸವದಿ ಮತ್ತು ಬೊಮ್ಮಾಯಿ, ಸಾರಿಗೆ ಸಂಸ್ಥೆ ನೌಕರರ ಜೊತೆಗಿನ ಸಾಲುಸಾಲು ಸಭೆಯಲ್ಲಿ ಯಾವುದೂ ಸಕರಾತ್ಮಕ ಫಲಿತಾಂಶ ಬರದ ಹಿನ್ನಲೆಯಲ್ಲಿ ತುರ್ತಾಗಿ ನಿವಾಸಕ್ಕೆ ಬರುವಂತೆ ಕಂದಾಯ ಸಚಿವ ಆರ್.ಅಶೋಕ್ ಗೆ ಸಿಎಂ ಬುಲಾವ್ ಕಳುಹಿಸಿದರು. ಸಾರಿಗೆ ಸಂಸ್ಥೆಯ ಮುಖಂಡರ ಜೊತೆಗೆ ಈ ಕೂಡಲೇ ಚರ್ಚೆ ನಡೆಸಿ ಮನವೊಲಿಸುವಂತೆ, ಮೂವರು ಸಚಿವರಿಗೆ (ಸವದಿ, ಬೊಮ್ಮಾಯಿ, ಅಶೋಕ್) ಯಡಿಯೂರಪ್ಪ ಸೂಚಿಸಿದರು.

ಒಕ್ಕಲಿಗ ನಾಯಕರನ್ನು ಮನವೊಲಿಸಲು ಅಶೋಕ್ ಬಹುತೇಕ ಯಶಸ್ವಿ

ಒಕ್ಕಲಿಗ ನಾಯಕರನ್ನು ಮನವೊಲಿಸಲು ಅಶೋಕ್ ಬಹುತೇಕ ಯಶಸ್ವಿ

ಭಾನುವಾರ (ಡಿ 13) ನಡೆದ ಸಭೆ ವಿಫಲಗೊಂಡ ನಂತರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಸಾರಿಗೆ ಸಂಸ್ಥೆ ನೌಕರರ ಮುಖಂಡರನ್ನು ಬೊಮ್ಮಾಯಿ ಜೊತೆಗೆ ಜಾಲಹಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ಅಶೋಕ್ ಕರೆದುಕೊಂಡು ಹೋದರು. ಸಂಸ್ಥೆಯಲ್ಲಿರುವ ಒಕ್ಕಲಿಗ ನಾಯಕರನ್ನು ಮನವೊಲಿಸಲು ಅಶೋಕ್ ಬಹುತೇಕ ಯಶಸ್ವಿಯಾದರು.

ಬಿಗಿ ಕಾನೂನು ಕ್ರಮಕ್ಕೆ ಸಜ್ಜಾಗಿ ಎನ್ನುವ ಸಂದೇಶ

ಬಿಗಿ ಕಾನೂನು ಕ್ರಮಕ್ಕೆ ಸಜ್ಜಾಗಿ ಎನ್ನುವ ಸಂದೇಶ

ಈ ಹಿಂದೆ ಸಾರಿಗೆ ಖಾತೆಯನ್ನು ನಿಭಾಯಿಸಿದ್ದ ಅಶೋಕ್ , ಕಾರ್ಮಿಕ ಸಂಘಟನೆಯ ಮುಖಂಡರ ಜೊತೆಗೆ ಸಂಪರ್ಕವನ್ನು ಹೊಂದಿದ್ದರು. ಅಶೋಕ್ ಮತ್ತು ಬಸವರಾಜ ಬೊಮ್ಮಾಯಿ ತಮ್ಮ ಅನುಭವವನ್ನೆಲ್ಲಾ ಧಾರೆಯೆರದರು, ಸೋಮವಾರ ಸಂಜೆಯೊಳಗೆ ಮುಷ್ಕರ ಹಿಂದಕ್ಕೆ ಪಡೆಯದಿದ್ದರೆ, ಬಿಗಿ ಕಾನೂನು ಕ್ರಮಕ್ಕೆ ಸಜ್ಜಾಗಿ ಎನ್ನುವ ಸಂದೇಶವನ್ನು ಪ್ರತಿಭಟನಾನಿರತರಿಗೆ ರವಾನಿಸಿದರು.

Recommended Video

ಹೀಗೆ ಮಾಡೋಕೆ ಕಾರಣ ಇದೆ! | BSF Soldiers Run 180 Kms | Oneindia Kannada
ಸಿಎಂ ಬಿಎಸ್ವೈ, ಡಿಸಿಎಂ ಸವದಿಯ ಜೊತೆ ಬೆನ್ನಿಗೆ ಬೆನ್ನಾಗಿ ನಿಂತ ನಾಲ್ವರು ಸಚಿವರು

ಸಿಎಂ ಬಿಎಸ್ವೈ, ಡಿಸಿಎಂ ಸವದಿಯ ಜೊತೆ ಬೆನ್ನಿಗೆ ಬೆನ್ನಾಗಿ ನಿಂತ ನಾಲ್ವರು ಸಚಿವರು

ಭಾನುವಾರ, ಅಶೋಕ್ ಮತ್ತು ಬೊಮ್ಮಾಯಿ ನಡೆಸಿದ ಸಭೆಯಲ್ಲೇ ಮುಷ್ಕರ ಹಿಂದಕ್ಕೆ ಪಡೆಯುವುದಕ್ಕೆ ಮುಖಂಡರು ಒಪ್ಪಿಗೆ ಸೂಚಿಸಿದ್ದರು. ಅಶೋಕ್ ಮತ್ತು ಬೊಮ್ಮಾಯಿ ಜೊತೆಗೆ ಸಿಎಂ ಯಡಿಯೂರಪ್ಪ ಮತ್ತು ಸಾರಿಗೆ ಸಚಿವ ಸವದಿಗೆ ಕಾಲಕಾಲಕ್ಕೆ ಸೂಕ್ತ ನೆರವು ನೀಡಿದ್ದು ಡಿಸಿಎಂ ಡಾ.ಅಶ್ವಥ್ ನಾರಾಯಣ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಅವರು. ಇದರ ಜೊತೆಗೆ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರೂ ಸಿಎಂ ಮತ್ತು ಸಚಿವ ಸವದಿಗೆ ಸಾಥ್ ನೀಡಿದರು.

English summary
Transport Union Workers Called Off Stir: Four Ministers Extended Their Full Support To CM Yediyurappa And Lakshman Savadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X